ಶೆಹಜಾದ್ ಭಟ್ಟಿ ನೆಟ್‌ವರ್ಕ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ: ಯುಎಪಿಎ ಅಡಿ ಕಠಿಣ ಕ್ರಮ

ನವದೆಹಲಿ: ದೇಶವಿರೋಧಿ ಕೃತ್ಯಗಳು, ಗಡಿಯಾಚೆಗಿನ ಕಳ್ಳಸಾಗಣೆ ಹಾಗೂ ಯುವಕರನ್ನು ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ‘ಶೆಹಜಾದ್ ಭಟ್ಟಿ ನೆಟ್‌ವರ್ಕ್’ (Shahzad Bhatti Network) ಅನ್ನು ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ಭಯೋತ್ಪಾದಕ ಸಂಘಟನೆ ಎಂದು ಅಧಿಕೃತವಾಗಿ ಘೋಷಿಸಿದೆ. ಪ್ರಧಾನಿ ಮೋದಿಯವರ ‘ಶೂನ್ಯ ಸಹಿಷ್ಣುತೆ’ ನೀತಿಯ ಭಾಗ ಭಯೋತ್ಪಾದನೆ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶೂನ್ಯ ಸಹಿಷ್ಣುತೆ (Zero Tolerance) ನಿಲುವಿಗೆ ಅನುಗುಣವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕೃತ […]

ಪಿಜಿಸಿಇಟಿಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ ಕೆಇಎ

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ವೇಳಾ ಪಟ್ಟಿ ಪ್ರಕಟಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಆಪ್ಷನ್ಸ್ ದಾಖಲಿಸಲು ಸೆ.17ರವರೆಗೆ ಸಮಯ ನೀಡಿದೆ. ಸೆ.17ರಂದು ಸಂಜೆ 6ರ ನಂತರ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಅವಶ್ಯ ಇದ್ದಲ್ಲಿ ಆಯ್ಕೆಗಳನ್ನು ಅದಲು-ಬದಲು ಮಾಡಿಕೊಳ್ಳುವುದಕ್ಕೆ ಅಥವಾ ಹೊಸದಾಗಿ ಹಾಕಿಕೊಳ್ಳುವುದಕ್ಕೆ ಹಾಗೂ ತೆಗೆದುಹಾಕುವುದಕ್ಕೆ ಸೆ.19ರಂದು ಬೆಳಿಗ್ಗೆ 11ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಸೆ.19ರಂದು […]

ಜಿಯೋ ಬಳಕೆದಾರರ ಗಮನಕ್ಕೆ: 12 ತಿಂಗಳ ಉಚಿತ ಕ್ಯಾನ್ವಾ ಪ್ರೊ

ಮುಂಬೈ : ಜಿಯೋ ಬಳಕೆದಾರರು ಈಗ ಹೆಚ್ಚುವರಿ ಹಣವನ್ನು ಪಾವತಿಸದೆ ಕ್ಯಾನ್ವಾ ಪ್ರೀಮಿಯಂ ವಿನ್ಯಾಸ ಸಾಧನಗಳನ್ನು ಬಳಸಲು ಸಾಧ್ಯವಾಗುತ್ತದೆ. ಜಿಯೋ ಮತ್ತು ಕ್ಯಾನ್ವಾ ಪಾಲುದಾರಿಕೆ ಮಾಡಿಕೊಂಡಿವೆ. ಇದರ ಅಡಿಯಲ್ಲಿ ಅರ್ಹ ಗ್ರಾಹಕರು ₹4 ಸಾವಿರ ಮೌಲ್ಯದ ಕ್ಯಾನ್ವಾ ಪ್ರೊ ಅಥವಾ ಕ್ಯಾನ್ವಾ ಪ್ರೊ ಲೈಟ್ ಅನ್ನು 12 ತಿಂಗಳವರೆಗೆ ಉಚಿತವಾಗಿ ಪಡೆಯುತ್ತಾರೆ. ಇದನ್ನು ಸೆಪ್ಟೆಂಬರ್ 16 ರಿಂದ ಮೈಜಿಯೋ ಅಪ್ಲಿಕೇಶನ್ ಮೂಲಕ ಸಕ್ರಿಯಗೊಳಿಸಬಹುದು. ಯಾವ ಗ್ರಾಹಕರು ಯಾವ ಕ್ಯಾನ್ವಾ ಪಡೆಯುತ್ತಾರೆ ಎಂಬುದು ಅವರ ಜಿಯೋ ರೀಚಾರ್ಜ್ ಯೋಜನೆಯನ್ನು […]

UPI payments: ₹2,000 ಮೇಲಿನ ವ್ಯಾಪಾರಿ ಪಾವತಿಗೆ ಶೇ. 0.4 ಶುಲ್ಕ: ಅಕ್ಟೋಬರ್ 15ರಿಂದ ಹೊಸ UPI ನೀತಿ ಜಾರಿ

ನವದೆಹಲಿ: ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಮಹತ್ವದ ಪಾವತಿ ನೀತಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ – NPCI) ಮಂಗಳವಾರ ಪ್ರಕಟಿಸಿದೆ. ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳ (P2M) ಮೇಲೆ ಶೇಕಡಾ 0.4 ರಷ್ಟು ವ್ಯಾಪಾರಿ ರಿಯಾಯಿತಿ ದರ (MDR) ಅನ್ವಯವಾಗಲಿದೆ ಎಂದು ಘೋಷಿಸಿದೆ. ಆದರೆ, ಗ್ರಾಹಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಇದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು, ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರಿಗೆ ಸಂಪೂರ್ಣ […]

ಭಕ್ತರ ಕಾಣಿಕೆ ಹಣಕ್ಕೆ ಇಲಿ ಪಡೆ ಕನ್ನ: ನೋಟುಗಳೆಲ್ಲ ಚೂರು ಚೂರು!

ಶಿವಮೊಗ್ಗ: ವಿಘ್ನನಿವಾರಕ ಗಣೇಶನ ವಾಹನವಾದ ಮೂಷಿಕಗಳೇ ದೇವಸ್ಥಾನದ ಹುಂಡಿ ಹಣವನ್ನು ಚಿಂದಿ ಮಾಡಿರುವ ವಿಚಿತ್ರ ಹಾಗೂ ಅಚ್ಚರಿಯ ವಿದ್ಯಮಾನವೊಂದು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಭಕ್ತರು ಶ್ರದ್ಧಾ-ಭಕ್ತಿಯಿಂದ ಸಮರ್ಪಿಸಿದ್ದ ಸಾವಿರಾರು ರೂಪಾಯಿ ನಗದು ಹಣವನ್ನು ಇಲಿಗಳು ಕಡಿದು ಸಂಪೂರ್ಣವಾಗಿ ಹಾಳುಗೆಡವಿವೆ. ನಗರದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಪ್ರತಿಷ್ಠಾಪಿತವಾಗಿರುವ ಶ್ರೀ ವಿಜಯ ಗಣಪತಿ ಸನ್ನಿಧಿಯಲ್ಲಿ ಈ ಅನಿರೀಕ್ಷಿತ ಪ್ರಸಂಗ ನಡೆದಿದೆ. ಎಣಿಕೆ ವೇಳೆ ಸಿಬ್ಬಂದಿಗೆ ಕಾದಿತ್ತು ಶಾಕ್ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ನಿಯಮಾನುಸಾರ ತೆರೆದು ಒಳಗಿದ್ದ ಹಣವನ್ನು ಲೆಕ್ಕ ಹಾಕಲು […]

ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ, ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವ: ಸಿಎಂ ಡಿಕೆಶಿ

ಬೆಂಗಳೂರು : “ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ. ನಾನು ಏಳನೇ ತರಗತಿಯಿಂದ ಶಾಸಕನಾಗುವವರೆಗೂ ಅನೇಕ ಅಡಚಣೆಗಳನ್ನು ಎದುರಿಸಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದೇನೆ. ಯುವಕರು ನಾಯಕರಾಗಲು ಮುಂದೆ ಬರಬೇಕು. ನಾಯಕನಾದವನು ನಾಯಕರನ್ನು ಸೃಷ್ಟಿಸಬೇಕು” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. “ಏಳನೇ ತರಗತಿ ಶಾಲಾ ಚುನಾವಣೆ, ಕಾಲೇಜು ಚುನಾವಣೆಗಳಲ್ಲೂ ನನಗೆ ತಕ್ಕ ನ್ಯಾಯ ಸಿಗಲಿಲ್ಲ. ಆನಂತರವೂ ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಯ […]

ಸಾಫ್ಟ್ ವೇರ್ ಅಳವಡಿಕೆ: ಬೆಸ್ಕಾಂನ 20 ಪಟ್ಟಣಗಳಲ್ಲಿ 2 ದಿನ ಆನ್ ಲೈನ್ ಸೇವೆ ಅಲಭ್ಯ

ಬೆಂಗಳೂರು: ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ (ಐಪಿಡಿಎಸ್) ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಪಟ್ಟಣ ಪ್ರದೇಶಗಳಲ್ಲಿ ದಿನಾಂಕ 15.09.2026 ರ ಮಧ್ಯ ರಾತ್ರಿಯಿಂದ 17.09.2026 ರ ಮಧ್ಯ ರಾತ್ರಿವರೆಗೆ ಬೆಸ್ಕಾಂನ ಆನ್ ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ. ಪ್ರಸುತ ಚಾಲ್ತಿಯಲ್ಲಿರುವ ಸಾಫ್ಟ್ ವೇರ್ ಅನ್ನು ಉನ್ನುತಿಕರಿಸುವ ಸಲುವಾಗಿ 2 […]

ಕರ್ನಾಟಕಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ: ಮುಂದಿನ ವರ್ಷದಿಂದ ಇಂಜಿನಿಯರ್ ಡೇ ಸರ್ಕಾರದಿಂದ ಆಚರಣೆ; ಸಿಎಂ ಡಿಕೆಶಿ

ಬೆಂಗಳೂರು : “ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. “ಸರ್ಕಾರ ವತಿಯಿಂದ ಇಂಜಿನಿಯರ್ ದಿನ ಆಚರಿಸುವ ಪ್ರಸ್ತಾವನೆ ನೀಡಿದ್ದು, ನಾನು ಅದಕ್ಕೆ ಸಮ್ಮತಿ ಸೂಚಿಸಿದ್ದೇನೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ತಯಾರು ಮಾಡುತ್ತಿದೆ. ಭಾರತದಲ್ಲಿ […]

1 ಬಿಲಿಯನ್ ಡಾಲರ್ ಗಡಿ ದಾಟಿದ ಅಮೆಜಾನ್ ನೌ ವಾರ್ಷಿಕ ಮಾರಾಟದ ವಹಿವಾಟು

ಬೆಂಗಳೂರು: ಅಮೆಜಾನ್‌ನ ಅತಿ ವೇಗದ ವಿತರಣಾ ಸೇವೆ ‘ಅಮೆಜಾನ್ ನೌ’ ಭಾರತದಲ್ಲಿ ಕಳೆದ ಮೂರು ತಿಂಗಳ ಅವಧಿಯ ಆಧಾರದ ಮೇಲೆ ವಾರ್ಷಿಕೀಕೃತ ಒಟ್ಟು ಮಾರಾಟದಲ್ಲಿ 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಸೇವೆ ಆರಂಭವಾದಾಗಿನಿಂದ ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಅಮೆಜಾನ್ ಇಂಡಿಯಾದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಘಟಕವಾಗಿ ‘ಅಮೆಜಾನ್ ನೌ’ ಹೊರಹೊಮ್ಮಿದೆ. ಕೇವಲ 10 ವಾರಗಳಲ್ಲಿ ಸೇವೆಯನ್ನು 4 ಪಟ್ಟು ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದ್ದು, ದೇಶದ 60ಕ್ಕೂ ಅಧಿಕ ನಗರಗಳು ಹಾಗೂ […]

ರೂ.2,000ವರೆಗೆ UPI ಪಾವತಿಗೆ ಶುಲ್ಕವಿಲ್ಲ, ರೂಪೇ ಡೆಬಿಟ್ ಕಾರ್ಡ್‌ ವಹಿವಾಟಿಗೂ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ ಹಣಕಾಸು ಸಚಿವಾಲಯ

ನವದೆಹಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ₹2,000 ವರೆಗಿನ ಯಾವುದೇ ಯುಪಿಐ (UPI) ಹಾಗೂ ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಬ್ಯಾಂಕ್‌ಗಳಾಗಲಿ ಅಥವಾ ಪಾವತಿ ಸೇವಾ ಪೂರೈಕೆದಾರರಾಗಲಿ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಕಾಯ್ದೆ ತಿದ್ದುಪಡಿ ಮೂಲಕ ಅಧಿಕೃತ ಅಧಿಸೂಚನೆ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ (Payment and Settlement […]