ಕಾನ್ಸ್ಟೇಬಲ್ ಪರೀಕ್ಷೆ: ಒಂದೇ ದಿನದಲ್ಲಿ ಕೀ ಉತ್ತರ ಪ್ರಕಟಿಸಿದ ಕೆಇಎ

ಬೆಂಗಳೂರು: ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (CAR/DAR) ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸೆ.6ರಂದು ಲಿಖಿತ ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದೇ ದಿನದಲ್ಲಿ ಅದರ ಕೀ ಉತ್ತರಗಳನ್ನೂ ಪ್ರಕಟಿಸಿದೆ. ಈ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಕೆಇಎ ಪೋರ್ಟಲ್ ನಲ್ಲಿನ ಲಿಂಕ್ ಮೂಲಕ ಸಲ್ಲಿಸಬಹುದು. ಇದಕ್ಕೆ ಸೆ.9ರಂದು ಬೆಳಿಗ್ಗೆ 10.30ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದರು. ಪೂರ್ಣ ಮಾಹಿತಿಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ […]
ಇನ್ಮುಂದೆ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಲ್ಲಿ ಶೇ.7.5ರಷ್ಟು ಮೀಸಲಾತಿ: ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಭರ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಅಭ್ಯರ್ಥಿಗಳ ಮೀಸಲಾತಿ ನಿಯಮಾವಳಿಗೆ ಮಹತ್ವದ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. 2006ರ ‘ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಗಳ ಆಯ್ಕೆ ನಿಯಮಾವಳಿ’ಗೆ ತಿದ್ದುಪಡಿ ತರಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ನೀಡಲಾಗುವ ಒಟ್ಟು ಶೇಕಡಾ 15ರಷ್ಟು ಗ್ರಾಮೀಣ ಮೀಸಲಾತಿಯಲ್ಲಿ ಆಂತರಿಕ ವರ್ಗೀಕರಣ (ಹಾರಿಜಾಂಟಲ್ ಮೀಸಲಾತಿ) ಮಾಡಲು ಪ್ರಸ್ತಾಪಿಸಲಾಗಿದೆ. ಮೀಸಲಾತಿಯ […]
ಶೀಘ್ರದಲ್ಲೇ ಮತ್ತಷ್ಟು ತಾಲ್ಲೂಕು ಬರಪೀಡಿತವೆಂದು ಘೋಷಣೆ : ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : “ನೈಸ್ ಯೋಜನೆ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕೈಗೊಳ್ಳಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ನೈಸ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಬಹಿರಂಗ ಪತ್ರ ಬರೆದಿರುವ ಬಗ್ಗೆ ಗಮನ ಸೆಳೆದಾಗ, “ನಾವು ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಎಲ್ಲವನ್ನೂ […]
ಗ್ಲೋಬಲ್ ಚೆಸ್ ಲೀಗ್ನಲ್ಲಿ ಜಾವಾ ಆಲ್ ಸ್ಟಾರ್ಸ್ 42 ಬಾಬರ್ ಅನಾವರಣ

ಬೆಂಗಳೂರು: ದ್ವಿಚಕ್ರ ವಾಹನ ಪ್ರಿಯರಿಗೊಂದು ಸಿಹಿ ಸುದ್ದಿ. ‘ಜಾವಾ ಆಲ್ ಸ್ಟಾರ್ಸ್’ ಸರಣಿಯ ಎರಡನೇ ಅಧ್ಯಾಯವಾಗಿ ಬಹುನಿರೀಕ್ಷಿತ ‘ಜಾವಾ ಆಲ್ ಸ್ಟಾರ್ಸ್ 42 ಬಾಬರ್’ ಮೋಟಾರ್ಸೈಕಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಗ್ಲೋಬಲ್ ಚೆಸ್ ಲೀಗ್ 2026ರ ಸಾಂಸ್ಕೃತಿಕ ವೇದಿಕೆಯಲ್ಲಿ ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಈ ನೂತನ ಮಾದರಿಯನ್ನು ವೈಭವಪೂರ್ವಕವಾಗಿ ಅನಾವರಣಗೊಳಿಸಿದರು. ಸಾಹಸ, ಧೈರ್ಯ ಹಾಗೂ ಆಕರ್ಷಕ ವಿನ್ಯಾಸದ ನೈಜ ಸಂಕೇತವಾಗಿ ಈ ಬೈಕ್ ರೂಪುಗೊಂಡಿದೆ. ಖ್ಯಾತ ಬ್ರ್ಯಾಂಡ್ನ ವಿಶಿಷ್ಟ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಭಾರತದ ಪ್ರಥಮ […]
ವಿರೋಧ ಪಕ್ಷಗಳು ಹಗಲುಗನಸು ಕಾಣುವುದು ಬೇಡ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : “ವಿಪಕ್ಷಗಳು ಏನು ಬೇಕಾದರೂ ಹೇಳಲಿ. ನಮ್ಮ ಗುಪ್ತನಿಧಿಯಲ್ಲಿ ಇನ್ನೂ ಏನೇನಿದೆ ಎಂದು ಅವರಿಗೆ ಗೊತ್ತಿಲ್ಲ. ವಿರೋಧ ಪಕ್ಷಗಳು ಕನಸು ಕಾಣಲಿ, ಹಗಲುಗನಸು ಬೇಡ. ಕನಸು ಕಾಣುವುದು ತಪ್ಪಲ್ಲ” ಸಿಎಂ ಡಿ ಕೆ ಶಿವಕುಮಾರ್ ಅವರು ಲೇವಡಿ ಮಾಡಿದರು. ಅರಮನೆ ಮೈದಾನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಪ್ರಿಯಾಂಕ್ ಖರ್ಗೆ ಅವರ ರಾಜಿನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರಿರುವ ಬಗ್ಗೆ ಕೇಳಿದಾಗ, “ಅವರುಗಳು ಯಾವುದೇ ಬಾಂಬ್ ಬೇಕಾದರೂ ಸಿಡಿಸಲಿ. ನಾನು ಆತುರದಲ್ಲಿಲ್ಲ. ನಾನು ವೈಯಕ್ತಿಕ […]
ಹೂಡಿಕೆದಾರರನ್ನು ಸೆಳೆಯಲು ಫ್ರಾನ್ಸ್, ನೆದರ್ಲೆಂಡ್ಸ್ ಗೆ ಹೊರಟ ಸಚಿವ ಎಂ.ಬಿ ಪಾಟೀಲ್ ನೇತೃತ್ವದ ನಿಯೋಗ

ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಗುರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ಉನ್ನತ ಮಟ್ಟದ ನಿಯೋಗವು ಸೋಮವಾರದಿಂದ (ಸೆ.7) ಶುಕ್ರವಾರದವರೆಗೆ (ಸೆ.12) ಐದು ದಿನಗಳ ಕಾಲ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ನಲ್ಲಿ ರೋಡ್-ಶೋ ಮತ್ತು ಮಾತುಕತೆ ನಡೆಸಲಿದೆ. ಸಚಿವರ ನಿಯೋಗ ಭಾನುವಾರ ಬೆಳಗಿನಜಾವ ಫ್ರಾನ್ಸ್ ಗೆ ಪ್ರಯಾಣ ಬೆಳೆಸಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಮುಖ್ಯಮಂತ್ರಿಗಳ ಉಪ […]
ರೈತ ಸಂಪರ್ಕ ಹಾಗೂ ಸ್ಮಶಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ಆದ್ಯತೆ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೈತ ಸಂಪರ್ಕ ರಸ್ತೆ ಹಾಗೂ ಸ್ಮಶಾನಕ್ಕೆ ತೆರಳುವ ರಸ್ತೆ ಕಾಮಗಾರಿಗಳಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆತಿರುವುದರಿಂದ ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದೆ. ರೈತರು ತಮ್ಮ ಜಮೀನುಗಳಿಗೆ ತೆರಳಲು ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಾಮಗ್ರಿ ಮತ್ತು ಕೃಷಿ ಉತ್ಪನ್ನಗಳ […]
ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಕೊಡುಗೆ: ‘Tr’ (Teacher) ಶೀರ್ಷಿಕೆ ಬಳಸಲು ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು: ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ “Tr.” (Teacher) ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಬಳಸಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಪ್ರಕಟಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರ ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಗೌರವಿಸುವ ಸಲುವಾಗಿ, ರಾಜ್ಯ ಸರ್ಕಾರವು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ […]
ನೇಪಾಳ ಪ್ರವಾಹದಲ್ಲಿ ನಾಪತ್ತೆಯಾದ ಕನ್ನಡಿಗರ ಗುರುತು ಪತ್ತೆಗೆ ಡಿಎನ್ಎ ಸಂಗ್ರಹ; ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರ

ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕರ್ನಾಟಕದ ನಾಗರಿಕರ ಗುರುತು ಪತ್ತೆಹಚ್ಚಲು ರಾಜ್ಯ ಸರ್ಕಾರ ಮುಂದಾಗಿದ್ದು, ವೈಜ್ಞಾನಿಕ ಡಿಎನ್ಎ (DNA) ಪ್ರೊಫೈಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಮಹತ್ವದ ಕಾರ್ಯಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ರಾಜ್ಯ ಮಟ್ಟದ ನೋಡಲ್ ಕೇಂದ್ರವನ್ನಾಗಿ ನೇಮಿಸಲಾಗಿದೆ. ಪ್ರಕೃತಿ ವಿಕೋಪದಲ್ಲಿ ಸಿಲುಕಿ ನಾಪತ್ತೆಯಾಗಿರುವವರ ರಕ್ತಸಂಬಂಧಿಗಳಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ, ನೇಪಾಳದಲ್ಲಿ ಪತ್ತೆಯಾಗುವ ಮೃತದೇಹಗಳೊಂದಿಗೆ ಹೋಲಿಸಿ ಗುರುತಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಅಗತ್ಯಬಿದ್ದಲ್ಲಿ […]
ರಾಜ್ಯಾಧ್ಯಂತ POP ಗಣಪತಿ ವಿರುದ್ಧ ಟಾಸ್ಕ್ಫೋರ್ಸ್ ಕಾರ್ಯಾಚರಣೆ, ನೂರಾರು ವಿಗ್ರಹಗಳು ಜಪ್ತಿ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಗಣೇಶೋತ್ಸವದ ಸಂದರ್ಭದಲ್ಲಿ ಜಲಮೂಲಗಳು ಹಾಗೂ ಪ್ರಕೃತಿಗೆ ತೀವ್ರ ಹಾನಿಯುಂಟುಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಭರ್ಜರಿ ಕಾರ್ಯಾಚರಣೆಗಿಳಿದಿದೆ. ಅಕ್ರಮವಾಗಿ ಪಿಒಪಿ ವಿಗ್ರಹಗಳನ್ನು ರೂಪಿಸುವ ಹಾಗೂ ಮಾರಾಟ ಮಾಡುವ ಜಾಲಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆಯು ಪ್ರಮುಖ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾರ್ಯಪಡೆಗಳನ್ನು ಅಖಾಡಕ್ಕಿಳಿಸಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಬೆಂಗಳೂರು, ಮೈಸೂರು, ರಾಮನಗರ, ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಈ ವಿಶೇಷ ಸ್ಕ್ವಾಡ್ಗಳು […]