ದಕ್ಷಿಣ ಭಾರತದಲ್ಲೂ ನೇಪಾಳ ದುರಂತ ಮರುಕಳಿಸುವ ಭೀತಿ ಇದೆ: ಕೋಡಿಮಠ ಶ್ರೀಗಳ ಸ್ಪೋಟಕ ಭವಿಷ್ಯ

ಹಾಸನ: ಹಿಮಾಲಯದ ಮಡಿಲ ರಾಷ್ಟ್ರ ನೇಪಾಳವನ್ನು ಹಿಂಡಿಹಿಪ್ಪೆ ಮಾಡಿದ ಪ್ರಕೃತಿಯ ರುದ್ರನರ್ತನದ ನೆನಪು ಮಾಸುವ ಮುನ್ನವೇ, ಕರುನಾಡಿನ ಖ್ಯಾತ ಕಾಲಜ್ಞಾನಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ನೆರೆಯ ರಾಷ್ಟ್ರ ಕಂಡ ಅನಾಹುತದ ಛಾಯೆ ದಕ್ಷಿಣ ಭಾರತದ ಮೇಲೂ ಆವರಿಸಲಿದೆ ಎಂಬ ಶ್ರೀಗಳ ಮಾತುಗಳು ಸಾರ್ವಜನಿಕ ವಲಯದಲ್ಲಿ ತಲ್ಲಣ ಮೂಡಿಸಿವೆ. ಜಲಸಮಾಧಿಯಾಗಲಿವೆ ಹಲವು ಗ್ರಾಮಗಳು ಸುದ್ದಿಗಾರರೊಂದಿಗೆ ವಿಚಾರ ಹಂಚಿಕೊಂಡ ಸ್ವಾಮೀಜಿ, ಮುಂದಿನ ದಿನಗಳಲ್ಲಿ ದಕ್ಷಿಣ ಭಾಗದಲ್ಲಿ ಮುಂಗಾರಿನ ಆರ್ಭಟ ಅತಿಯಾಗಲಿದ್ದು, ನದಿ-ತೊರೆಗಳು […]

ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ: ಸಿದ್ದರಾಮಯ್ಯ ವಿಶ್ವಾಸ

ಬೆಂಗಳೂರು : ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅವರ ನೇತೃತ್ವದ ಸರ್ಕಾರವು ಇಂದಿಗೆ 100 ದಿನಗಳನ್ನು ಪೂರೈಸಿದೆ. ಅದರ ಜ್ಞಾಪಕಾರ್ಥವಾಗಿ ಸರ್ಕಾರ ಈ ಆಚರಣೆಯನ್ನು ಮಾಡುತ್ತಿದೆ. 100 ದಿನಗಳು, ಇದೊಂದು ಸಂಭ್ರಮಾಚರಣೆಯಲ್ಲ; ಈ 100 ದಿನಗಳಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಜನರ ಮುಂದಿಡುವಂತಹ ಒಂದು ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಆಯೋಜಿಸಿದ್ದ “ದೃಢ ಕರ್ನಾಟಕದ […]

ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ ಎರಡು ಚರಣಗಳ ಗಾಯನಕ್ಕೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಇನ್ನು ಮುಂದೆ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಚಿವ ಸಂಪುಟದ ತೀರ್ಮಾನದಂತೆ ಆದೇಶ: ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಮಹತ್ವದ ಪಾತ್ರ ವಹಿಸಿದೆ. ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಹಾಗೂ […]

ಯುಜಿ ಸಿಇಟಿ ಸೀಟು ಹಂಚಿಕೆ ಮುಕ್ತಾಯ: ಎಂಜಿನಿಯರಿಂಗ್ 24,283 ಉಳಿಕೆ ಸೀಟು ಕಾಲೇಜುಗಳಿಗೆ ಹಸ್ತಾಂತರ

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಯುಜಿ ಸಿಇಟಿ ಕೋರ್ಸ್ ಗಳ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ ಆಗಿದ್ದು, ಒಪ್ಪಂದದ ಪ್ರಕಾರ ಉಳಿಕೆ ಸೀಟುಗಳನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಸ್ತಾಂತರ ಮಾಡಿದೆ. ಎಲ್ಲ ವಿಧದ ಎಂಜಿನಿಯರಿಂಗ್ ಕೋರ್ಸ್ ಗಳ 24,283 ಸೀಟು ಹಾಗೂ ಆರ್ಕಿಟೆಕ್ಚರ್ ಕೋರ್ಸ್ ನ 252 ಸೀಟು ಹಂಚಿಕೆಯಾಗದೆ ಉಳಿದಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಎಂಜಿನಿಯರಿಂಗ್ ಹೊರತುಪಡಿಸಿದರೆ ನರ್ಸಿಂಗ್ ನಲ್ಲಿ […]

ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ನಿಂದ ಅಂತರರಾಷ್ಟ್ರೀಯ ಪಾವತಿ ಸೇವೆ ಆರಂಭ: ಭಾರತೀಯ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆಯ ಬಾಗಿಲು ತೆರೆದ ಜಿಯೋ

ಮುಂಬಯಿ: ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್ ಲಿಮಿಟೆಡ್ (ಜೆಪಿಎಸ್‌ಎಲ್), ಭಾರತೀಯ ರಫ್ತುದಾರರು ಹಾಗೂ ಉದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಹಣ ಸ್ವೀಕರಿಸಲು ಅನುಕೂಲವಾಗುವಂತೆ ಹೊಸ ‘ಕ್ರಾಸ್-ಬಾರ್ಡರ್’ (ಅಂತರರಾಷ್ಟ್ರೀಯ) ಪಾವತಿ ಸೇವೆಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತೀಯ ರಫ್ತು ಮತ್ತು ಆಮದುಗಳಿಗಾಗಿ ‘ಪಾವತಿ ಅಗ್ರಿಗೇಟರ್’ ಪಿಎ-ಸಿಬಿ) ಆಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತ ಅನುಮೋದನೆ ಪಡೆದ ನಂತರ ಈ ಮಹತ್ವದ ಸೇವೆಯನ್ನು ಪರಿಚಯಿಸಲಾಗಿದೆ. ಪ್ರಸ್ತುತ ಆನ್‌ಲೈನ್ ಮಾರಾಟಗಾರರು, ಡಿಜಿಟಲ್ ಉದ್ಯಮಿಗಳು, ಫ್ರೀಲ್ಯಾನ್ಸರ್‌ಗಳು, […]

ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ

ಲುವಾಂಗ್ ಪ್ರಬಾಂಗ್ : ಲಾವೋಸ್‌ನಲ್ಲಿ ಆನೆಗಳ ಕಲ್ಯಾಣ, ವಿಶೇಷ ಪಶುವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್’ ಮತ್ತು ಭಾರತದ ಗುಜರಾತ್ ಮೂಲದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ‘ವಂತರಾ’ ಇಂದು ಮಹತ್ವದ ಜಂಟಿ ಕಾರ್ಯಕ್ರಮವನ್ನು ಘೋಷಿಸಿವೆ. ಉಭಯ ಸಂಸ್ಥೆಗಳ ನಡುವೆ ಅಧಿಕೃತವಾಗಿ ಒಡಂಬಡಿಕೆ (ಎಂಒಯು ) ಸಹಿ ಹಾಕಲಾಗಿದೆ. ಲಾವೋಸ್‌ನ ಆನೆಗಳ ಪ್ರಸ್ತುತ ಸ್ಥಿತಿಗತಿ: ಒಂದು ಕಾಲದಲ್ಲಿ “ಒಂದು ಮಿಲಿಯನ್ ಆನೆಗಳ ಭೂಮಿ” ಎಂದೇ ಖ್ಯಾತಿ ಪಡೆದಿದ್ದ ಲಾವೋಸ್‌ನಲ್ಲಿ, ಪ್ರಸ್ತುತ ಅಂದಾಜು […]

ಸ್ಟಾರ್ಟ್‌ಅಪ್‌ಗಳಿಗೆ ಸುವರ್ಣಾವಕಾಶ: ‘ಸರ್ಕಾರ ಮೊದಲು’ ಯೋಜನೆಗೆ ಸಚಿವ ಸಂಪುಟ ಅಸ್ತು; ಪ್ರತಿ ಸಂಸ್ಥೆಗೆ ₹25 ಲಕ್ಷದವರೆಗೆ ಸಹಾಯಧನ

ಬೆಂಗಳೂರು: ರಾಜ್ಯದಲ್ಲಿನ ನವೋದ್ಯಮಗಳಿಗೆ (Startups) ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ‘ಎಲಿವೇಟ್ ಸ್ಟಾರ್ಟ್‌ಅಪ್‌ ಪಾಲಿಸಿ 2025-2030’ರ ಅಡಿಯಲ್ಲಿ ‘ಸರ್ಕಾರ ಮೊದಲು’ (Government First) ಎಂಬ ವಿನೂತನ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ (IT-BT) ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಯೋಜನೆಯ ಮುಖ್ಯಾಂಶಗಳು: ವೈವಿಧ್ಯಮಯ ಕ್ಷೇತ್ರಗಳಿಗೆ ಆದ್ಯತೆ: ಕೃತಕ ಬುದ್ಧಿಮತ್ತೆ (AI), ದತ್ತಾಂಶ ವಿಶ್ಲೇಷಣೆ (Data Analytics), ಇಂಟರ್ನೆಟ್ ಆಫ್ […]

ಕಲಬುರಗಿಯಲ್ಲಿ ‘LEAP ಬೆಳವಣಿಗೆ ಪ್ರಯೋಗಾಲಯ’ ಸ್ಥಾಪನೆ: ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಆಚೆಗೂ ನವೋದ್ಯಮ (Startup) ಹಾಗೂ ಉದ್ಯಮಶೀಲತೆಯನ್ನು ವಿಸ್ತರಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ‘ಲೀಪ್ ಬೆಳವಣಿಗೆ ಪ್ರಯೋಗಾಲಯ’ (LEAP Growth Labs) ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಗತ್ಯವಾದ ಸಿಎ (CA) ನಿವೇಶನಗಳ ಹಂಚಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ (IT-BT) ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಯೋಜನೆಯ ಪ್ರಮುಖ ವಿವರಗಳು: ಬೆಂಗಳೂರು ಹೊರತಾದ ಪ್ರದೇಶಗಳ ಪ್ರತಿಭೆ ಹಾಗೂ […]

ಸ್ಟಾರ್ಟ್‌ಅಪ್‌ಗಳಿಗೆ ಸುವರ್ಣಾವಕಾಶ: ‘ಸರ್ಕಾರ ಮೊದಲು’ ಯೋಜನೆಗೆ ಸಚಿವ ಸಂಪುಟ ಅಸ್ತು; ಪ್ರತಿ ಸಂಸ್ಥೆಗೆ ₹25 ಲಕ್ಷದವರೆಗೆ ಸಹಾಯಧನ

ಬೆಂಗಳೂರು: ರಾಜ್ಯದಲ್ಲಿನ ನವೋದ್ಯಮಗಳಿಗೆ (Startups) ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ‘ಎಲಿವೇಟ್ ಸ್ಟಾರ್ಟ್‌ಅಪ್‌ ಪಾಲಿಸಿ 2025-2030’ರ ಅಡಿಯಲ್ಲಿ ‘ಸರ್ಕಾರ ಮೊದಲು’ (Government First) ಎಂಬ ವಿನೂತನ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ (IT-BT) ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಯೋಜನೆಯ ಮುಖ್ಯಾಂಶಗಳು: ವೈವಿಧ್ಯಮಯ ಕ್ಷೇತ್ರಗಳಿಗೆ ಆದ್ಯತೆ: ಕೃತಕ ಬುದ್ಧಿಮತ್ತೆ (AI), ದತ್ತಾಂಶ ವಿಶ್ಲೇಷಣೆ (Data Analytics), ಇಂಟರ್ನೆಟ್ ಆಫ್ […]

ದಿನ ನೂರು, ಕಾರ್ಯ ಹಲವಾರು: ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಕಮಾಲ್

ಬೆಂಗಳೂರು: ರಾಜ್ಯದ ಮುಕ್ಕಾಲು ಭಾಗದಷ್ಟು ಅಂದರೆ 4.45 ಕೋಟಿ ಜನ ವಾಸಿಸುವ ಗ್ರಾಮೀಣ ಕರ್ನಾಟಕ ರಾಜ್ಯದ ಜೀವನಾಡಿಯಾಗಿದೆ. ಜೂನ್ 3ರಂದು ಗ್ರಾಮೀಣ ಜನರ ಜೀವನ ಸುಗಮಗೊಳಿಸುವ ಹೊಣೆ ಹೊತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಈ ನಿಟ್ಟಿನಲ್ಲಿ ದಿನ ನೂರು ಕಾರ್ಯ ನೂರಾರು ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟು, ಬರದಂತಹ ಪರಿಸ್ಥಿತಿ ಎದುರಾಗಿರುವ ಸಮಯದಲ್ಲಿ ಇಲಾಖೆಯ ಚುಕ್ಕಾಣಿ ಹಿಡಿದ ಈಶ್ವರ […]