ಹಲವು ದಿನಗಳಿಂದ ಶಾಂತವಾಗಿದ್ದ ಹಾರ್ಮುಜ್ ಜಲಸಂಧಿ ಮತ್ತೆ ಕಿಡಿ ಹತ್ತಿಕೊಂಡಿದೆ. ಇದರ ಪರಿಣಾಮ ಪ್ರತಿಯೊಂದು ದೇಶದ ಮೇಲೆ ಬೀಳುತ್ತಿದೆ. ಇರಾನ್ ಮತ್ತು ಅಮೆರಿಕ ನಡುವೆ ಮತ್ತೊಮ್ಮೆ ಯುದ್ಧದ ಕಾವು ಉಂಟಾಗಿದ್ದು, ಇದರ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.ಈ ವಿಚಾರ ವಾಹನ ಸವಾರರಿಗೆ ಶಾಕ್ ಉಂಟು ಮಾಡಿದೆ.
ಇಂದು ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪೈಸೆ ಲೆಕ್ಕದಲ್ಲಿ ಏರಿಕೆ ಇಳಿಕೆ ಕಂಡು ಬಂದಿದೆ, ಯಾವುದೇ ಪ್ರಮುಖ ಬದಲಾವಣೆಗಳನ್ನು ಘೋಷಿಸಲಾಗಿಲ್ಲ. ಆದರೆ ಕೆಲವೊಂದು ನಗರಗಳಲ್ಲಿ ಬೆಲೆಗಳು ಬದಲಾಗಿದೆ.ಇಂದು (ದೇಶಾದ್ಯಂತ ಹೊಸ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಸರ್ಕಾರಿ ತೈಲ ಕಂಪನಿಗಳು ಬೆಳಿಗ್ಗೆ 6 ಗಂಟೆಗೆ ಇವತ್ತಿನ ಬೆಲೆಗಳನ್ನು ನವೀಕರಿಸಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನ ಸ್ಥಿತಿ ಇರುವುದರಿಂದ ಬೆಲೆ ಇಳಿಕೆ ಸದ್ಯಕ್ಕೆ ಆಗಲ್ಲ ಎಂದು ಹೇಳಲಾಗ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಳಿತಗೊಳ್ಳುತ್ತಲೇ ಇವೆ. ಇದರ ಹೊರತಾಗಿಯೂ, ಸಾರ್ವಜನಿಕರು ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇಳಿಕೆಗಾಗಿ ಕಾಯುತ್ತಿದ್ದಾರೆ.
ಪ್ರತಿ ಲೀಟರ್‌ಗೆ ನಗರವಾರು ಪೆಟ್ರೋಲ್ ಬೆಲೆ ಇಲ್ಲಿದೆ ನೋಡಿ
ದೆಹಲಿ 102.12 ರೂ.
ಬೆಂಗಳೂರು 111.68 ರೂ
ಮುಂಬೈ 111.21 ರೂ.
ಕೋಲ್ಕತ್ತಾ 113.51 ರೂ
ಚೆನ್ನೈ 107.77 ರೂ.
ಪಾಟ್ನಾ 113.35 ರೂ
ಚಂಡೀಗಢ 101.51 ರೂ
ಹೈದರಾಬಾದ್ 115.69 ರೂ
ಭುವನೇಶ್ವರ 108.97 ರೂ
ನಗರವಾರು ಡೀಸೆಲ್ ಬೆಲೆ (ಪ್ರತಿ ಲೀಟರ್‌ಗೆ)
ದೆಹಲಿ 95.20 ರೂ.
ಮುಂಬೈ 97.83 ರೂ.
ಕೋಲ್ಕತ್ತಾ 99.82 ರೂ.
ಬೆಂಗಳೂರು 99.56 ರೂ.
ಚಂಡೀಗಢ 89.47 ರೂ.
ಹೈದರಾಬಾದ್ 103.82 ರೂ.
ಭುವನೇಶ್ವರ 100.68 ರೂ.
ಚೆನ್ನೈ 99.55 ರೂ.
ಪಾಟ್ನಾ 99.36 ರೂ.
ಖಾಸಗಿ ಕಂಪನಿ ನಯಾರ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹5 ಮತ್ತು ಡೀಸೆಲ್ ಬೆಲೆಯನ್ನು ₹3 ರಷ್ಟು ಕಡಿಮೆ ಮಾಡಿತು. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇನ್ನೂ ತಮ್ಮ ದರಗಳನ್ನು ಕಡಿತಗೊಳಿಸಿಲ್ಲ. ಆದ್ದರಿಂದ, ಜನರು ಈಗ OMC ಗಳಿಂದ ಬೆಲೆ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್‌ನ ಮೂಲ ಬೆಲೆ ಬಹುತೇಕ ಒಂದೇ ಆಗಿರುತ್ತದೆ, ಆದರೆ ವಿವಿಧ ರಾಜ್ಯಗಳಲ್ಲಿ ವಿಭಿನ್ನ ವ್ಯಾಟ್, ಸ್ಥಳೀಯ ತೆರಿಗೆಗಳು, ಸರಕು ಸಾಗಣೆ ಶುಲ್ಕಗಳು ಮತ್ತು ಡೀಲರ್ ಕಮಿಷನ್ ಕಾರಣ, ಪ್ರತಿ ನಗರದಲ್ಲಿ ಇಂಧನದ ಬೆಲೆ ಬದಲಾಗುತ್ತದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





