ಯಾರಾದರೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದ್ರೆ ಅವರನ್ನು ಮುಗಿಸುವ ಯತ್ನ ನಡೆಯುತ್ತವೆ: ಸಚಿವ ಜಮೀರ್​​

ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕೊನೆಯ ಕ್ಷಣದವರೆಗೂ ತೀವ್ರ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿತ್ತು. ಅಂತಿಮ ಹಂತದಲ್ಲಿ ಹೈಕಮಾಂಡ್ ಸಚಿವರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿ, ವಿವಾದಗಳ ನಡುವೆಯೂ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಮರು ಅವಕಾಶ ನೀಡಿದ್ದರು.

ನಂತರ ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳ ನಡುವೆ ಎಸ್‌.ಎಸ್‌. ಮಲ್ಲಿಕಾರ್ಜುನಗೂ ಸಚಿವ ಸ್ಥಾನ ಒಲಿಯಿತು. ಮತ್ತೊಂದೆಡೆ, ಆರಂಭಿಕ ಪಟ್ಟಿಯಲ್ಲಿ ಹೆಸರು ಇದ್ದರೂ ಮಂಕಾಳು ವೈದ್ಯ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರಿ.

ಇನ್ನು ಮೊನ್ನೆ ಅಷ್ಟೇ ೨೦ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ, ಇದರ ಬೆನ್ನಲ್ಲೇ ಕೆಲವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಇದೀಗ ಸಚಿವ ಜಮೀರ್​​ ಅಹ್ಮದ್​​ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯಾರಾದರೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದರೆ ಅವರನ್ನು ಮುಗಿಸುವ ಯತ್ನಗಳು ನಡೆಯುತ್ತವೆ ಎಂದು ಸಚಿವ ಜಮೀರ್​​ ಅಹ್ಮದ್​​ ಖಾನ್​​ ಹೇಳಿದ್ದಾರೆ

ಹೈಕಮಾಂಡ್​​ಗೆ ಹಣ ಕೊಟ್ರೆ ಮಂತ್ರಿ ಆಗ್ತಾರೆ ಎಂಬ ಕೆಲ ಸ್ವಪಕ್ಷ ಶಾಸಕರ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ. ಅವೆಲ್ಲವೂ ಊಹಾಪೋಹ ಎಂದವರು ತಿಳಿಸಿದ್ದಾರೆ. ತಮಗೆ ಯಾವುದೇ ಖಾತೆ ಕೊಟ್ಟರು ನಿಭಾಯಿಸೋದಾಗಿಯೂ ಅವರು ಇದೇ ವೇಳೆ ತಿಳಿಸಿದ್ದಾರೆ. ತಮ್ಮನ್ನು ಸೇರಿ ಬಿ. ನಾಗೇಂದ್ರ ವಿಚಾರದಲ್ಲಿಯೂ ಇದೇ ರೀತಿ ಆಗಿದೆ ಎಂದವರು ತಿಳಿಸಿದ್ದಾರೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅಸಮಾಧಾನಗಳು ಸಹಜ ಎಂದಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others