ಸಾಮಾಜಿಕ ಜಾಲತಾಣದಲ್ಲಿ ಕೆಲ ಜನ ಫೇಮಸ್ ಆಗಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ ಈ ಸೋಷಿಯಲ್ ಮೀಡಿಯಾದಲ್ಲಿ ಹಲವರು ಬುದ್ಧಿವಂತಿಕೆಯಿಂದ ಬೆಳೆದರೆ, ಇನ್ನು ಕೆಲವರು ಹುಚ್ಚಾಟದಿಂದ ಅಭಿವೃದ್ಧಿ ಹೊಂದುತ್ತಾರೆ. ಇದೇ ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು ಏನಪ್ಪಾ ವಿಚಾರ ಅಂತೀರಾ? ಇಲ್ಲಿದೆ ನೋಡಿ ವಾಸ್ತವ:
ಜಪಾನ್ನ ಯುವಕನೊಬ್ಬ ನಾಯಿಯಂತೆ ಕಾಣಲು ಭಾರಿ ಮೊತ್ತದ ಹಣ ಖರ್ಚು ಮಾಡಿದ್ದಾನೆ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 26 ವರ್ಷದ ಮಿಲಿಯನೇರ್ ಜಾಸೊ ಎನ್ನುವ ಯುವಕ ತನ್ನನ್ನು ನಾಯಿಯಂತೆ ಕಾಣುವಂತೆ ಮಾಡಲು ಸುಮಾರು 2.2 ಬಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಪೋಸ್ಟ್ ಬೆಳಕಿಗೆ ಬಂದಿದೆ.
ಈ ವಿಡಿಯೋಯ ಕೆಲವರ ಪ್ರಕಾರ ಯುವಕನೊಬ್ಬ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾನೆ ಮತ್ತು ಈಗ ನಾಯಿಯಂತಹ ನಡವಳಿಕೆ ಮತ್ತು ನಾಯಿಯಂತೆ ಕಾಣುತ್ತಿದ್ದಾನೆ ಎಂದು ಪೋಸ್ಟ್ ಮಾಡಲಾಗಿದೆ. ಆದರೇ ಈ ಮಾಹಿತಿ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಇದು ಸತ್ಯವೂ ಎಂದು ನಂಬುವುದಕ್ಕೆ ಆಗುವುದಿಲ್ಲ.
ಜಾಸೋ ಎನ್ನುವ ಯುವಕ ತನ್ನ ನೋಟ ಮತ್ತು ದೇಹವನ್ನು ನಾಯಿಯಂತೆ ಪರಿವರ್ತಿಸಲು ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾನೆ ಎಂದು ವೈರಲ್ ಪೋಸ್ಟ್ ಹೇಳುತ್ತದೆ. ಶಸ್ತ್ರಚಿಕಿತ್ಸೆಯ ನಂತರ, ಅವನು ನಾಯಿಯಂತೆ ನಡೆಯಲು ಮತ್ತು ಬದುಕಲು ಪ್ರಯತ್ನಿಸುತ್ತಾನೆ ಎಂದು ಹೇಳಲಾಗುತ್ತಿದೆ. ವೈರಲ್ ವೀಡಿಯೊದ ಸತ್ಯಾಸತ್ಯತೆ ಇನ್ನು ಬೆಳಕಿಗೆ ಬಂದಿಲ್ಲ. ಮೂಲ ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಕುರಿತು ನಿಖರವಾದ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.
ಕೆಲವು ವರದಿಗಳ ಪ್ರಕಾರ, ಇದು ಸುಮಾರು 2 ಮಿಲಿಯನ್ ಜಪಾನೀಸ್ ಯೆನ್ ಬೆಲೆಬಾಳುವ ವಿಶಿಷ್ಟ ನಾಯಿ ವೇಷಭೂಷಣವಾಗಿದೆ ಎಂದು ಹೇಳಲಾಗುತ್ತಿದೆ.
ಇದರ ಬೆಲೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 11 ರಿಂದ 12 ಲಕ್ಷ ರೂಪಾಯಿಗಳಾಗಿರುತ್ತದೆ ಎನ್ನಲಾಗಿದೆ. ಈ ವರದಿಗಳು ನಿಜವಾಗಿದ್ದರೆ, ಆ ವ್ಯಕ್ತಿ ಇನ್ನೂ ಮನುಷ್ಯನಾಗಿರಲ್ಲ, ಸತ್ಯ ಏನು ಅಂದ್ರೆ ಆತನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಆದರೆ ಅದು ವೇಷಭೂಷಣ ಧರಿದ್ದಾನೆ ಎನ್ನಲಾಗಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವಾಗ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಫೇಮಸ್ ಆಗುತ್ತಾರೆ ಎನ್ನುವುದು ಗೊತ್ತೇ ಆಗುವುದಿಲ್ಲ ಆದರೆ ಕೆಲ ಹುಚ್ಚಾಟದಿಂದ ಜನರ ತಲೆಯಲ್ಲಿ ಹುಳ ಬಿಡುತ್ತಾರೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಒಂದು ವೇಳೆ ಆ ವ್ಯಕ್ತಿ ನಿಜಕ್ಕೂ ನಾಯಿಯಾಗಿದ್ದರೆ ಜನ ಡಿಜಿಟಲ್ ಯಿಂದ ಎತ್ತ ಸಾಗುತ್ತಿದ್ದಾರೆ ಎನ್ನುವುದು ಶಾಕ್ ಆಗುವಂತಹದ್ದಾಗಿದೆ.
ಇನ್ನು ಈ ರೀತಿಯ ವೈರಲ್ ಸ್ಟೋರಿಗಾಗಿ ನಮ್ಮ ಕನ್ನಡ ಪಾಕೆಟ್ ವೈಬ್ ಸೈಟ್ನ್ನು ಬೆಂಬಲಿಸಿ..





