BS Vishalakshi
ಶ್ರೀರಂಗಪಟ್ಟಣ: ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ತಲೆಯ ಮೇಲೆ ನೆರಳು ಕೊಡುವ ಮರ ಇವೆಲ್ಲವೂ ನಮ್ಮ ಪರಿಸರ. ನಮ್ಮ ತಾಯಿ ಹೇಗೆ ನಮ್ಮನ್ನು ಸಾಕಿ ಸಲಹುತ್ತಾರೋ, ಹಾಗೆಯೇ ಭೂತಾಯಿ ನಮ್ಮನ್ನು ಸಲಹುತ್ತಿದ್ದಾಳೆ. ವಿದ್ಯಾರ್ಥಿಗಳಾದ ನೀವುಗಳು ವಿದ್ಯಾಭ್ಯಾಸದ ಜೊತೆಗೆ ಸಂರಕ್ಷಣೆಯ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು
. ಶಾಲಾ ಆವರಣಗಳಲ್ಲಿ ಒಬ್ಬ ವಿದ್ಯಾರ್ಥಿ ಒಂದು ಸಸಿ ನೆಟ್ಟು ಬೆಳೆಸಿ ಪೋಷಿಸಬೇಕು. ಇದೆ ವಿದ್ಯಾರ್ಥಿ ದೆಸೆಯಲ್ಲಿ ಪ್ರಕೃತಿಗೆ ನಾವು ಕೊಡುವ ಕೊಡುಗೆ. ಎಂದು ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಬಿ ಎಸ್ ವಿಶಾಲಾಕ್ಷಿ ಶ್ರೀರಂಗಪಟ್ಟಣದ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ವತಿಯಿಂದ ಆಯೋಜಿಸಿದ್ದ ಪರಿಸರ ದಿನದ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಐಕ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಆಶಾಲತಾ ಪುಟ್ಟೇಗೌಡ ಮಾತನಾಡಿ ಶಾಲಾ ಆವರಣದಲ್ಲಿ ಹೂ ಮತ್ತು ಹಣ್ಣಿನ ಸಸಿಗಳನ್ನು ಬೆಳೆಸುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅಮಜನಕ ಸಿಗುತ್ತದೆ, ಹೂ ಗಳಿಂದ ಶಾಲೆಯ ಸೌಂದರ್ಯ ಮೆರಗು ಹೆಚ್ಚುತ್ತದೆ, ಮಕ್ಕಳಿಗೆ ತಿನ್ನಲು ರುಚಿಕರವಾದ ಹಣ್ಣುಗಳಿಂದ ಆರೋಗ್ಯ ವೃದ್ಧಿ, ಉತ್ತಮ ಆರೋಗ್ಯದಿಂದ ಯಾವ ಸಾಧನೆಯ ಮಾರ್ಗ ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು “ಹಸಿರೇ ಉಸಿರು, ಉಸಿರೇ ಬದುಕು” ಹಾಗೂ “ಕಾವೇರಿಯನ್ನು ಉಳಿಸೋಣ, ನಾಡನ್ನು ಬೆಳೆಸೋಣ” ಎಂಬ ಘೋಷಣೆ ಕೂಗುತ್ತಾ ಪರಿಸರ ಜಾಗೃತಿ ಜಾಥಾ ನಡೆಸಿದರು. ಎಲ್ಲರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಮುಖ್ಯೋಪಾಧ್ಯಾಯರಾದ ರಾಜಶೇಖರ ವಹಿಸಿದ್ದರು. ಪಟ್ಟಣದ ಪುರಸಭಾ ಸದಸ್ಯೆ ನಳಿನಾ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಎನ್ ಸರಸ್ವತಿ, ನಿವೃತ್ತ ಶಿಕ್ಷಣ ಜಂಟಿ ನಿರ್ದೇಶಕಿ ಸುವರ್ಣ ದೇವಿ, ಯೋಗ ಶಿಕ್ಷಕ ಕೆ ಶೆಟ್ಟಹಳ್ಳಿ ಅಪ್ಪಾಜಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ವಾಮಿಗೌಡ,ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಸದಸ್ಯೆಯರಾದ ಶ್ರೀಮತಿ ಶೋಭಾ,ಕಮಲ,ಪಾರ್ವತಿ, ಹಾಗೂ ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.




