ನವದೆಹಲಿ: ರೇವಣ್ಣರ ಕುಟುಂಬ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪವಿದ್ದು, ತಂದೆ ರೇವಣ್ಣ ವಿರುದ್ಧ ಬೇರೆ ಆರೋಪಗಳಿವೆ. ಈ ಕಾರಣಕ್ಕೆ ಈಗ ಒಂದೇ ಕೇಸ್ ಎಂದು ತಂದೆ ಮೇಲೂ ರೇಪ್ ಆರೋಪ ಹೊರಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಶಾಸಕ ಹೆಚ್‌ಡಿ ರೇವಣ್ಣ ವಿರುದ್ಧ ಲೈಗಿಂಕ ದೌರ್ಜನ್ಯ, ಬೆದರಿಕೆ, ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಹಲ್ಲೆ ಪ್ರಕರಣ ರದ್ದು ಮಾಡಿತ್ತು. ಲೈಗಿಂಕ ದೌರ್ಜನ್ಯ ಪ್ರಕರಣ ತನಿಖೆ ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಪಾರ್ದಿವಾಲ ನೇತೃತ್ವದ ಪೀಠ, ವಿಚಾರಣೆ ವೇಳೆ ಹೈಕೋರ್ಟ್ ಆದೇಶದ ಬಗ್ಗೆ ಅಸಮಧಾನ ಹೊರಹಾಕಿದೆ. ಹಲ್ಲೆ ಪ್ರಕರಣ ರದ್ದುಪಡಿಸಿ, ಲೈಗಿಂಕ ದೌರ್ಜನ್ಯ ಮುಂದುವರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹೈಕೋರ್ಟ್ ಆರೋಪಿಯ ವಿರುದ್ಧದ ಚಾರ್ಜ್ ಬದಲಾಯಿಸಿದ್ದೇಕೆ ಎಂದು ಪೀಠ ಪ್ರಶ್ನೆ ಮಾಡಿರುವುದು ತಿಳಿದು ಬಂದಿದೆ.
ತಂದೆ ರೇವಣ್ಣ ಮೇಲೆ ಬೇರೆ ಆರೋಪಗಳಿವೆ. ಇಬ್ಬರ ಮೇಲೂ ಬೇರೆ ಬೇರೆ ಆರೋಪಗಳಿವೆ. ಒಂದೇ ಕೇಸ್ ಎಂದು ತಂದೆಗೂ ರೇಪ್ ಆರೋಪ ಹಾಕಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ. ಮಗ ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾಚಾರ ಆರೋಪವಿದೆ, ಚಾರ್ಜ್ ಫ್ರೇಮ್ ಆಗಿದೆ. ಈ ಬಗ್ಗೆ ನೋಟಿಸ್‌ಗೆ ಉತ್ತರ ನೀಡುವಂತೆ ಹೆಚ್.ಡಿ ರೇವಣ್ಣಗೆ ಸೂಚನೆ ನೀಡಿರುವುದು ಬೆಳಕಿಗೆ ಬಂದಿದೆ
ರಾಜ್ಯ ಸರ್ಕಾರ ಪ್ರಶ್ನಿಸಿರುವ ಅಂಶಗಳಿಗೆ ಸಂಬಂಧಿಸಿ ವಾದ-ಪ್ರತಿವಾದಗಳು ನಡೆಯಲಿವೆ. ಹೆಚ್‌ಡಿ ರೇವಣ್ಣ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿವಾದವನ್ನು ಮಂಡಿಸಬೇಕಾಗುತ್ತದೆ. ವಿಚಾರಣೆಯನ್ನು ಸದ್ಯ ಸುಪ್ರೀಂ ಕೋರ್ಟ್ ಮುಂದೂಡಿದ್ದು, ಈ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ರೇವಣ್ಣಗೆ ಮತ್ತಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.





