ರೈತರನ್ನು ಹೆದರಿಸಿ, ಬೆದರಿಸಿ ಒತ್ತಾಯಪೂರ್ವಕವಾಗಿ ಸಹಿ ಬರೆಸಿಕೊಳ್ಳಬಹುದು ಎಂದು ಸರ್ಕಾರ ಭಾವಿಸಿದೆ: ನಿಖಿಲ್

ಬೆಂಗಳೂರು: ರೈತರನ್ನು ಹೆದರಿಸಿ, ಬೆದರಿಸಿ ಒತ್ತಾಯಪೂರ್ವಕವಾಗಿ ಸಹಿ ಬರೆಸಿಕೊಳ್ಳಬಹುದು ಎಂದು ಸರ್ಕಾರ ಭಾವಿಸಿದೆ. ಆದರೆ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರೈತರ ಪರವಾಗಿ ನಾವು ಹೋರಾಟ ರೂಪಿಸಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಆದೇಶದಂತೆ ಈ ತಿಂಗಳು ಆ. 9, 10 ಮತ್ತು 11 ರಂದು 3 ದಿನಗಳ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸುಮಾರು ನಾಲ್ಕು ಸಾವಿರ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಜೆ.ಪಿ. ಭವನದಲ್ಲಿ ನಡೆದ ಬಿಡದಿ ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದ ರೈತರ ಪರವಾಗಿ ಹಿಂದೆಯೂ ಪಕ್ಷದಿಂದ 11 ಕಿ.ಮೀ ಪಾದಯಾತ್ರೆ ಮಾಡಲಾಗಿತ್ತು ಎಂದು ತಿಳಿಸಿದರು.

ರೈತರ ವಿಚಾರದಲ್ಲಿ ನಮ್ಮ ಜವಾಬ್ದಾರಿ ಇದೆ. ಕೆಲವು ವಿಚಾರಗಳಲ್ಲಿ ರೈತರ ಪರವಾಗಿ ಎಲ್ಲರೂ ಒಟ್ಟಿಗೆ ಹೋಗಬೇಕಾಗುತ್ತದೆ. ಈವರೆಗೆ ಬಿಜೆಪಿಯಿಂದ ಯಾವುದೇ ಫೋನ್ ಕಾಲ್ ಬಂದಿಲ್ಲ. ಕುಮಾರಸ್ವಾಮಿ ಅವರ ಜೊತೆ ಅಶೋಕ್ ಅವರು ದೆಹಲಿಯಲ್ಲಿ ಮಾತನಾಡುತ್ತಾರೆ. ಕೂತು ಚರ್ಚೆ ಮಾಡಿದ ನಂತರ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಅವರು ನಿಜವಾಗಿಯೂ ರಾಜೀನಾಮೆ ಕೊಡುತ್ತಾರಾ ಎಂಬುದು ಚರ್ಚೆಯ ವಿಷಯ. ರಾಜೀನಾಮೆಯನ್ನು 5 ನಿಮಿಷದಲ್ಲಿ ಸ್ವೀಕಾರ ಮಾಡುತ್ತೇವೆ ಎಂದು ಸಿಎಂ ಹೇಳಿರುವುದು ಜನರ ದಿಕ್ಕು ತಪ್ಪಿಸುವ ಕೆಲಸ, ಕಾಂಗ್ರೆಸ್‌ನಲ್ಲಿ 138 ಶಾಸಕರಿದ್ದಾರೆ. ನಾಲ್ಕೈದು ಬಾರಿ ಗೆದ್ದಿರುವ ಹಿರಿಯ ಶಾಸಕರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಜಿಲ್ಲೆಯ ಜನರಿಗೆ ಸಿಎಂ ಮರಣಶಾಸನ ಬರೆಯಿರಿ ಎಂದು ಅಧಿಕಾರ ಕೊಟ್ಟಿದ್ದಾರಾ? ಶುಭದಿನ, ಶುಭ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಬೇಕಾ ಎಂದು ಅವರು ಪ್ರಶ್ನಿಸಿದರು. ಸದ್ಯ ಸ್ಥಳೀಯ ಶಾಸಕರೇ ಸಚಿವರಾಗಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ. ಆದರೆ, ಆಡಳಿತಾತ್ಮಕ ಪ್ರಕ್ರಿಯೆಯನ್ನು ಈಗಾಗಲೇ ಮಾಡಿ, ಈಗ ಸಮಿತಿ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದು ಟೀಕಿಸಿದರು.

ಮಿತಿಯಲ್ಲಿ ಯಾರು ಸದಸ್ಯರಾಗಿರುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಸಿಎಂ ಮತ್ತು ರಾಜ್ಯ ಸರ್ಕಾರದ ದ್ವಂದ್ವ ಮನಸ್ಥಿತಿಗೆ ಸಾಕ್ಷಿ. ಟೌನ್‌ಶಿಪ್ ವಿರೋಧಿಸಿ ದೇವೇಗೌಡರು ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ ತಕ್ಷಣ ಸಿಎಂ ಪ್ರೆಸ್ ಮೀಟ್ ಮಾಡಿ ಸಮಿತಿ ರಚನೆ ಮಾಡುತ್ತೇವೆ ಎಂದು ಘೋಷಿಸಿದರು. ಅದೇ ದಿನ ನಾಲ್ಕು ಹಳ್ಳಿಗಳಿಗೆ ಅಧಿಸೂಚನೆ ಸಹ ಹೊರಡಿಸಲಾಯಿತು. ಆದರೆ, ಸಮಿತಿಯನ್ನು ಏಕೆ ರಚನೆ ಮಾಡುತ್ತೇವೆ. ಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others