ಖಡಕ್‌ ರೊಟ್ಟಿ, ಎಣ್ಣೆಗಾಯಿಪಲ್ಯ ತಿಂದು ನೋಡ್ರಿ, ಇದು ಉತ್ತರ ಕರ್ನಾಟಕದ ಭಕ್ಷ್ಯ ಭೋಜನ-ಹಾಗಾದ್ರೆ ಅಡುಗೆ ತಯಾರಿ ವಿಧಾನ ಇಲ್ಲಿದೆ ನೋಡಿ

ಉತ್ತರ ಕರ್ನಾಟಕದ ಊಟ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರ ಅಚ್ಚುಮೆಚ್ಚಿನ ಊಟ ಅಂದ್ರೆ ಉತ್ತರಕರ್ನಾಟಕದ ಭೋಜನ ಅಲ್ಲವೇ? ಹೌದು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟಕ್ಕಾಗಿ ಜನ ಬಕಪಕ್ಷಿಯಂತೆ ಹುಡುಕಾಟ ನಡೆಸುತ್ತಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಉತ್ತರ ಕರ್ನಾಟಕದ ಊಟಕ್ಕೆ ಮಹತ್ತರ ಮೌಲ್ಯವಿದೆ.

ಈ ಊಟದಲ್ಲಿ ಮೆಚ್ಚುಗೆಯಾಗುವುದು ಖಡಕ್‌ ರೊಟ್ಟಿ, ಎಣ್ಣೆಗಾಯಿಪಲ್ಯ ಇದರಲ್ಲಿ ಸ್ವಲ್ಪ ಮೋಸರು ತಿಂದ್ರೆ ಸ್ವರ್ಗ ಹತ್ತಿರವಿದ್ದಂತೆ ಎಂದು ಫುಡ್‌ ಪ್ರೀಯರು ಹೇಳುತ್ತಲೇ ಇರುತ್ತಾರೆ. ಹಾಗಾದ್ರೆ ರೊಟ್ಟಿ ಮಾಡುವುದು ಹೇಗೆ ಎಂದು ನಾವು ಮೋದಲು ತಿಳಿದುಕೊಳ್ಳಣ..

ರೊಟ್ಟಿ ತಯಾರಿಸುವ ವಿಧಾನಕ್ಕೆ ಬೇಕಾಗಿರುವ ಸಾಮಗ್ರಿಗಳು:
ಜೋಳದ ಹಿಟ್ಟು
ನೀರು
ಉಪ್ಪು

ರೊಟ್ಟಿ ಮಾಡುವ ವಿಧಾನ ಇಲ್ಲಿದೆ
ಅಂಚಿನ ಮೇಲೆ,ಇಲ್ಲವೇ ಯಾವುದಾರೂ ಪಾತ್ರೆಯ ಮೇಲೆ ನೀರನ್ನು ಬಿಸಿ ಮಾಡಬೇಕು, ಆ ಬಿಸಿ ನೀರನ್ನು ಜೋಳದ ಹಿಟ್ಟಿನಲ್ಲಿ ಮಿಕ್ಷ್‌ ಮಾಡಬೇಕು ನಂತರ ಅದನ್ನು ಕಲಸಬೇಕು. ಮತ್ತೊಂದು ಕಡೆ ಆ ಕಲಿಸಿದ ಹಿಟ್ಟಿನಿಂದ ವೃತ್ತಕಾರದಲ್ಲಿ ರೊಟ್ಟಿಯಲ್ಲಿ ತಟ್ಟಿ ಅಂಚಿನ ಮೇಲೆ ಬೇಯಿಸಬೇಕು ಇಲ್ಲಿಗೆ ರೊಟ್ಟಿ ರೇಡಿಯಾಗಿರುತ್ತದೆ.

ಇನ್ನುಬದನೆಕಾಯಿ ಎಣ್ಣೆಗಾಯಿ ಪಲ್ಯದ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ರೊಟ್ಟಿ ಜೊತೆಗೆ ಎಣ್ಣೆಗಾಯಿ ಪಲ್ಯ ಇದ್ದರಂತೂ ಊಟದ ಮಜಾನೇ ಬೇರೆ ಇರುತ್ತದೆ.

ಹಾಗಾದ್ರೆ ಬದನೆಕಾಯಿ ಎಣ್ಣೆಗಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬೇಕಾಗುವ ಸಾಮಗ್ರಿಗಳು:
ಅರಿಶಿಣ ಪುಡಿ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಬೆಲ್ಲ
ಹುಣಸೆಹಣ್ಣಿನ ರಸ
ಉಪ್ಪು
ಎಣ್ಣೆ
ಸಾಸಿವೆ
ಒಣಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಬಿಳಿ ಎಳ್ಳು
ಶೇಂಗಾ
ಒಣಕೊಬ್ಬರಿ ತುರಿ
ಬದನೆಕಾಯಿ
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ
ಲವಂಗ
ಚಕ್ಕೆ
ಕರಿಬೇವು

ಮಾಡುವ ವಿಧಾನ:
ಮೊದಲು ಬಿಸಿ ತವೆಗೆ ಶೇಂಗಾ ಹಾಕಿಕೊಂಡು ಹುರಿದುಕೊಳ್ಳಬೇಕು ನಂತರ ಅದೇ ತವೆಯಲ್ಲಿ ಬಿಳಿ ಎಳ್ಳು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು ಅಮೇಲೆ ಒಣಕೊಬ್ಬರಿ ತುರಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ಮೂರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು

ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ, ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ ಮತ್ತು ಕರಿಬೇವು ಸೇರಿಸಿ 2 ನಿಮಿಷ ಹುರಿಯಿರಿ. ಈ ಹುರಿದ ಮಿಶ್ರಣ ಮಿಕ್ಸಿ ಜಾರ್‌ಗೆ ಹಾಕಿ, ಅದರ ಜತೆಗೆ ಅರಿಶಿಣ, ಖಾರದಪುಡಿ, ಧನಿಯಾ ಪುಡಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರನ್ನು ಸೇರಿಸದೇ ಹುಣಸೆಹಣ್ಣಿನ ರಸ ಹಾಕಿ ನುಣ್ಣಗೆ ಪೇಸ್ಟ್ ಮಾಡಬೇಕು.

ಈಗ ರುಬ್ಬಿದ ಮಸಾಲೆ ಮತ್ತು ಮೊದಲೇ ಸಿದ್ಧಪಡಿಸಿದ ಒಣ ಮಸಾಲೆ ಪುಡಿ ಒಟ್ಟಿಗೆ ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಬದನೆಕಾಯಿ ನಡುವಿನಲ್ಲಿ ನಾಲ್ಕು ಭಾಗವಾಗಿ ಸೀಳಿ ಉಪ್ಪು ನೀರಿನಲ್ಲಿ ಹಾಕಿಡಿ. ನಂತರ ನೀರನ್ನು ಸೋಸಿ, ಸಿದ್ಧಪಡಿಸಿದ ಮಸಾಲೆಬದನೆಕಾಯಿಯ ಒಳಗೆ ಚೆನ್ನಾಗಿ ತುಂಬಿಕೊಳ್ಳಿ. ಉಳಿದ ಮಸಾಲೆ ಹಾಗೇ ಇಟ್ಟುಕೊಳ್ಳಬೇಕು.

ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಅದಕ್ಕೆ ಸಾಸಿವೆ ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಕೊಡಿ. ಮಸಾಲೆ ತುಂಬಿದ ಬದನೆಕಾಯಿಗಳನ್ನು ಎಣ್ಣೆಯಲ್ಲಿ ಹಾಕಿ, ಸ್ವಲ್ಪ ಸಮಯದ ಬಳಿಕ ಉಳಿದಿದ್ದ ಮಸಾಲೆ ಪೇಸ್ಟ್ ಮತ್ತು ಒಂದು ಕಪ್ ನೀರನ್ನು ಸೇರಿಸಿ, ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಸಾಕು ಎಣ್ಣೆಗಾಯಿ ಪಲ್ಯ ಸಿದ್ಧವಾಗಿರುತ್ತದೆ.

ಎಣ್ಣೆಗಾಯಿ ಪಲ್ಯ , ರೇಡಿಯಾದ ನಂತರ ಅದರೊಂದಿಗೆ ರೊಟ್ಟಿ ತಿಂದು ನೋಡಿ ರುಚಿ ಮಸ್ತ್‌ ಆಗಿರುತ್ತದೆ. ಈ ಊಟ ಉತ್ತರ ಕರ್ನಾಟಕದಲ್ಲಿ ಪುಲ್ ಫೇಮಸ್‌ ಇದೆ…

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others