ನವದೆಹಲಿ: ಭಾರತದಲ್ಲಿ ವಾಟ್ಸ್ಆ್ಯಪ್ ಬಳಸುವ ಜನರು ಶೀಘ್ರದಲ್ಲೇ ತಮ್ಮ Date of Birth ಅನ್ನು ಸೇರಿಸಬೇಕಾಗಬಹುದು ಕಾರಣ ಇದು ಹೊಸ ಹೆಜ್ಜೆ ಅಂತಲೂ ಹೇಳಬವುದು. ಮೆಟಾ ಸ್ವಾಮ್ಯದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಒಂದು ಹೊಸ ಫೀಚರ್ ಅನ್ನು ಟೆಸ್ಟ್ ಮಾಡುತ್ತಿದ್ದು, ಇದರ ಅಡಿಯಲ್ಲಿ ಕೆಲವು ಬಳಕೆದಾರರಿಗೆ ಆಪ್ ತೆರೆದಾಗ ತಮ್ಮ ವಯಸ್ಸು ಅಥವಾ ಜನ್ಮದಿನಾಂಕ ನಮೂದಿಸುವ ಆಪ್ಷನ್ ಕಾಣಿಸುತ್ತಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಭಾರತದಲ್ಲಿ ತನ್ನ ಬಳಕೆದಾರರಿಗೆ ಜನ್ಮ ದಿನಾಂಕವನ್ನು ಸೇರಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಭಾರತ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಗೆ ಬದ್ಧವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಖಾಸಗಿತನಕ್ಕೆ ಧಕ್ಕೆ ಇಲ್ಲ ಎಂದ ಮೆಟಾ: ಬಳಕೆದಾರರ ವಯಸ್ಸಿನ ವಿವರಗಳು ಖಾಸಗಿಯಾಗಿದ್ದು, ಇದನ್ನು ಇತರ ಯಾವುದೇ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
DPDP ಕಾಯ್ದೆಯ ನಿಯಮ ಪ್ರಕಾರ: ಭಾರತದ ಡಿಪಿಡಿಪಿ ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸುವ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸೂಕ್ತ ವಯಸ್ಸು ದೃಢೀಕರಣ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.
ಪರೀಕ್ಷೆಯ ಹಂತದಲ್ಲಿ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ. ಬಳಕೆದಾರರು ತಮ್ಮ ಹುಟ್ಟಿದ ದಿನಾಂಕವನ್ನು ನೀಡದೆಯೂ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು. ಹುಟ್ಟಿದ ದಿನಾಂಕದ ಮಾಹಿತಿ: ಪ್ರಸ್ತುತ ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಇದು ಅವಕಾಶ ನೀಡುತ್ತದೆ.
ಈ ಟೆಸ್ಟ್ನಿಂದ ಆಪ್ನ ಸಾಮಾನ್ಯ ಬಳಕೆಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ಬಳಕೆದಾರರಿಗೆ ವಾಟ್ಸ್ಆ್ಯಪ್ ತಮ್ಮ ವಯಸ್ಸನ್ನು ಏಕೆ ಕೇಳುತ್ತಿದೆ ಎಂದು ಅರ್ಥವಾಗುತ್ತಿರಲಿಲ್ಲ. ಕೆಲವರು ಇದನ್ನು Data Protectionಗೆ ಸಂಬಂಧಿಸಿದ್ದಾರೆ.
ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.Meta ಪ್ರಕಾರ, ಇದು ಕೇವಲ ಒಂದು ಟೆಸ್ಟ್ ಮಾತ್ರ. ಬಳಕೆದಾರರು ತಮ್ಮ ವಯಸ್ಸನ್ನು ಹೇಳದೆಯೇ ವಾಟ್ಸ್ಆ್ಯಪ್ ಬಳಸುವುದನ್ನು ಮುಂದುವರಿಸಬಹುದು.
ಸದ್ಯಕ್ಕೆ ವಾಟ್ಸಾಪ್ ಈ ಫೀಚರ್ನ ಸೀಮಿತ ಟೆಸ್ಟಿಂಗ್ ಮಾಡುತ್ತಿದ್ದು, ಭಾರತದಲ್ಲಿ ಹೊಸ Data Protection ನಿಯಮಗಳು ಸಂಪೂರ್ಣವಾಗಿ ಜಾರಿಯಾದರೆ ಭವಿಷ್ಯದಲ್ಲಿ Age Verification ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿ ಜಾರಿಗೆ ತರಬಹುದು. ಆದರೆ ಕಂಪನಿಯು ಇನ್ನೂ ಇದರ ಅಧಿಕೃತ ಲಾಂಚ್ ದಿನಾಂಕ ಅಥವಾ ಕಡ್ಡಾಯತೆಯ ಬಗ್ಗೆ ಯಾವುದೇ ಆದೇಶ ಹೊರ ಬಂದಿಲ್ಲ.





