ವಾಷಿಂಗ್ಟನ್: ಇನ್ನೇನು ಅಮೆರಿಕ-ಇರಾನ್ ಶಾಂತಿಯುತ ಒಪ್ಪಂದ ಮಾಡಿಕೊಳ್ಳುತ್ತವೆ ಎನ್ನುವಷ್ಟರಲ್ಲಿಯೇ, ಶಾಕ್ ಮೇಲೆ ಶಾಕ್ ಎದುರಾಗಿದೆ. ಒಂದೊಮ್ಮೆ ಇರಾನ್ ಸೋಲು ಒಪ್ಪೊಕೊಳ್ಳುವುದಿಲ್ಲ, ನಾವು ಶಾಂತಿಯುತ ಒಪ್ಪಂದಕ್ಕೆ ಸಿದ್ದರಿಲ್ಲ ಎನ್ನುತ್ತದೆ. ಇತ್ತ ದೊಡ್ಡಣ್ಣನ್ನು ಹೊಸ ವರಸೆ ತೆಗೆದಿದ್ದಾನೆ.
ಯುದ್ಧದಿಂದಾಗಿ ಇರಾನ್ ನಾಶವಾಗಿದ್ದು, ನಾವು ಹತಾಶೆಯಿಂದ ಯಾವುದೇ ಮಾತುಕತೆ ನಡೆಸುತ್ತಿಲ್ಲ. ಇರಾನ್ ಅಸಹಾಯಕರಾಗಿ ಒಪ್ಪಂದಕ್ಕೆ ಬಂದಿದ್ದರು ಎಂದಿದೆ,. ಮುಂದಿನ 60 ದಿನಗಳವರೆಗೆ ಅವರಿಗೆ ಒಂದು ರೂಪಾಯಿ ಸಿಗುವುದಿಲ್ಲ. ಇರಾನ್ ಕತೆ ಇನ್ನು ಮುಂದೆ ಮುಗಿಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ ನಲ್ಲಿ ಹೊಸ ಬಾಂಬ್ ಹಾಕಿದ್ದಾರೆ.
ಡೆಮೋಕ್ರಾಟ್‌ಗಳು ಇರಾನ್ 4 ತಿಂಗಳ ಹಿಂದೆ ಇದ್ದ ಸ್ಥಿತಿಗಿಂತ ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳುತ್ತಾರೆ. ಅವರು ಇದರಿಂದ ತಪ್ಪಿಸಿಕೊಳ್ಳುವುದನ್ನು ನೀವು ಊಹಿಸಬಲ್ಲಿರಾ? ಕೆಲವು ಜನರು ಎಷ್ಟು ಮೂರ್ಖರಾಗಬಹುದು?” ಹೋರಾಟದ ನಂತರ ವಾಷಿಂಗ್ಟನ್ ಅಲ್ಲ, ಟೆಹ್ರಾನ್ ಮಾತುಕತೆಗೆ ಪ್ರಯತ್ನಿಸಿದೆ ಎಂದರು ಅಮೆರಿಕದ ಅಧಿಕಾರಿಗಳ ಪ್ರಕಾರ, ಇರಾನ್ ತೀವ್ರ ಆರ್ಥಿಕ ಹಾಗೂ ಮಿಲಿಟರಿ ಒತ್ತಡದ ನಡುವೆ ಈ ಮಾತುಕತೆಗೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಅಮೆರಿಕ, ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭಾರಿ ಕ್ಷಿಪಣಿ ದಾಳಿ ನಂತರ ಇರಾನ್‌ನ ಪ್ರಮುಖ ಆಯುಧ ಕಾರ್ಖಾನೆಗಳು, ಡ್ರೋನ್ ಉತ್ಪಾದನಾ ಕೇಂದ್ರಗಳು ಮತ್ತು ನೌಕಾ ಹಡಗುಗಳು ಸಮುದ್ರದ ಪಾಲಾಗಿದ್ದು, ಈ ಮಿಲಿಟರಿ ನಷ್ಟದಿಂದಾಗಿ ಇರಾನ್ ಮಾತುಕತೆಯ ಮೇಜಿಗೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ಟ್ರಂಪ್ ಆಡಳಿತ ಪ್ರತಿಪಾದಿಸಿದೆ.
ಕೆಲವು ತಿಂಗಳುಗಳ ಯುದ್ಧವು ಇರಾನ್ ಅನ್ನು ಅಕ್ಷರಶಃ ಧ್ವಂಸಗೊಳಿಸಿದ್ದು, ಇರಾನ್ ಬಳಿ ಸದ್ಯಕ್ಕೆ ಯಾವುದೇ ವಾಯುಪಡೆ ಇಲ್ಲ, ನೌಕಾಪಡೆ ಇಲ್ಲ, ವಾಯು ರಕ್ಷಣಾ ವ್ಯವಸ್ಥೆ ಅಥವಾ ರಾಡಾರ್‌ಗಳೂ ಉಳಿದಿಲ್ಲ. ಅವರ ಇಡೀ ಸೇನಾ ನೆಟ್‌ವರ್ಕ್ ನೆಲಕಚ್ಚಿದೆ. ಒಪ್ಪಂದದ ಭಾಗವಾಗಿ ಮುಂಬರುವ 60 ದಿನಗಳ ಕಾಲ ನಾವು ಮಾತುಕತೆಯ ಪ್ರಕ್ರಿಯೆನಡೆಸಲಿದ್ದೇವೆ. ಆದರೆ ಈ 60 ದಿನಗಳಲ್ಲಿ ಇರಾನ್‌ಗೆ ಯಾವುದೇ ಹಣ ಸಿಗುವುದಿಲ್ಲ, ಅವರಿಗೆ ಬಿಡಿಗಾಸನ್ನೂ ಕೂಡ ಕೊಡುವುದಿಲ್ಲ ಎಂದಿದ್ದಾರೆ.





