ವಿಜಯನಗರ ಜಿಲ್ಲೆ ಕೂಡ್ಲಿಗಿ : ಹಾಸ್ಟೆಲ್ ಗಳು ಗುರುಕುಲ ಮಾದರಿಯಲ್ಲಿ , ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಮತ್ತು ಎಲ್ಲಾ ಹಾಸ್ಟೆಲ್ ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗಬೇಕಿದೆ ಎಂದು ಶಾಸಕ ಎನ್ ಟಿ ಶ್ರೀನಿವಾಸ್ ಕರೆ ನೀಡಿದರು.
ಜೂನ್ 6 ರಂದು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಜಿಲ್ಲಾ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ , ಬಿಸಿಎಂ ಅಧಿಕಾರಿಗಳು ಮತ್ತು ಪರಿಶಿಷ್ಟ ಪಂಗಡ ಇಲಾಖೆ ನಿಲಯ ಪಾಲಕರ ಜೊತೆ ಸಭೆಯಲ್ಲಿ ಮಾತನಾಡಿದರು.
ಕೂಡ್ಲಿಗಿ ಕ್ಷೇತ್ರವು ಸಾಮಾಜಿಕವಾಗಿ ,ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು. ಮೊರಾರ್ಜಿ ವಸತಿ ಶಾಲೆ ಪ್ರವೇಶಕ್ಕೆ ತುಂಬಾ ಬೇಡಿಕೆ ಹಾಗೂ ಒತ್ತಡವಿದೆ , ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಉಚಿತ ವಸತಿ, ಪೌಷ್ಟಿಕ ಆಹಾರ ಒದಗಿಸಲಾಗುವುದು. ಎಲ್ಲ ಸಮುದಾಯದ ಮಕ್ಕಳಿಗೆ ಆದ್ಯತೆ ನೀಡಿ , ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸಬೇಕಾಗಿದೆ ಎಂದರು. ವಿದ್ಯಾರ್ಥಿ ನಿಲಯಗಳಲ್ಲಿ ಕೆಲ ಗಂಭೀರವಾದ ದೂರುಗಳು ಕೇಳಿಬಂದಿದ್ದು , ವಿದ್ಯಾರ್ಥಿ ನಿಲಯಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಬೇಕಿದೆ.
ಕಟ್ಟುನಿಟ್ಟಾದ ಶಿಸ್ತು , ವಿದ್ಯಾರ್ಥಿಗಳ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಬೇಕಿದೆ. ಮತ್ತು ವಸತಿ ಶಾಲೆ ವಸತಿ ನಿಲಯಗಳಲ್ಲಿ ಅಗತ್ಯ ಸುರಕ್ಷಿತ ಕ್ರಮಗಳನ್ನು , ಕಟ್ಟುನಿಟ್ಟಾಗಿ ಜಾರಿಗೆ ತಂದು ಚಾಚುತಪ್ಪದೇ ಪಾಲಿಸಬೇಕೆಂದು ಕರೆನೀಡಿದರು. ಮಾರ್ಗಸೂಚಿಯ ಪ್ರಕಾರ ವಿದ್ಯಾರ್ಥಿ ನಿಲಯಗಳಲ್ಲಿ , ಮೆನೋ ಆಧಾರದಂತೆ ನಿಗಧಿತ ಪ್ರಮಾಣದಂತೆ ಊಟವನ್ನು ಸಮರ್ಪಕವಾಗಿ ನೀಡಬೇಕು. ವಿದ್ಯಾರ್ಥಿ ನಿಲಯ ನಿರ್ವಹಣೆಗೆ ಸಂಬಂಧಿಸಿದಂತೆ , ಯಾವೆಲ್ಲಾ ಅನುಕೂಲಗಳಾಗಬೇಕು ಅವುಗಳನ್ನು. ನಮ್ಮ ಸರ್ಕಾರದ ಸಹಕಾರದೊಂದಿಗೆ ಕೆಲವೊಂದು ಮಾನದಂಡಗಳ ಸಡಿಲತೆಯೊಂದಿಗೆ , ಪೂರ್ಣಗೊಳಿಸಲಾಗುವುದು ಎಂದು ಭರವಸೆಯನ್ನಿತ್ತರು. ವೇದಿಕೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಆನಂದ್ ವೈ ಕಾಳೆ , ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ , ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಉಪಸ್ಥಿತರಿದ್ದರು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಜಗದೀಶ್ , ತಾಲೂಕು ಪರಿಶಿಷ್ಟ ಪಂಗಡ ಕಲ್ಯಾಣಾಭಿವೃದ್ಧಿ ಅಧಿಕಾರಿ ಮೆಹೂಬ್ ಭಾಷಾ , ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಪ್ಪ ಸೇರಿದಂತೆ. ಪಟ್ಟಣ ಸೇರಿರಂತೆ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಇಲಾಖೆಗಳ ವಿದ್ಯಾರ್ಥಿ ನಿಲಯಗಳು , ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರು ಮುಖ್ಯ ಶಿಕ್ಷಕರು ಮತ್ತು ನಿಲಯ ಪಾಲಕರು ಸಿಬ್ಬಂದಿಯವರು ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿ ಬಿಸಿಎಂ ಇಲಾಖೆಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು , ಹಾಗೂ ಶಾಸಕರನ್ನು ಗೌರವಿಸಿ ಸನ್ಮಾನಿಸಲಾಯಿತು. ತದನಂತರ ಸಭೆಯಲ್ಲಿ ಹಾಜರಿದ್ದ ವಸತಿ ನಿಲಯ ವಸತಿ ಶಾಲೆಗಳ , ಹಿರಿಯ ಪಾಲಕರನ್ನು ಮುಖ್ಯ ಶಿಕ್ಷಕರನ್ನು . ಗಣನೀಯ ಪ್ರಮಾಣದಲ್ಲಿ ಶೈಕ್ಷಣಿಕ ಸಾಧನೆಗೈದ , ಮತ್ತು ಶೇ100ರಷ್ಟು ಫಲಿತಾಂಶ ನೀಡಿದ ವಸತಿ ಶಾಲೆ ನಿಲಯ ಪಾಲಕರನ್ನು , ಹಾಗೂ ಮುಖ್ಯ ಶಿಕ್ಷಕರನ್ನು ಸಿಬ್ಬಂದಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು





