ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

ವಿಜಯನಗರ, ಕೂಡ್ಲಿಗಿ : ಸರ್ಕಾರದ ವಿವಿದ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ. ಜೂನ್ 12ರಂದು , ವಿಜಯನಗರದ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆಯಲ್ಲಿ. ವಿಶ್ವ ‍ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪ್ರಯುಕ್ತ , ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಕೈಗೊಳ್ಳಲಾಯಿತು.

ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು , ಹಾಗೂ ಸಿವಿಲ್ ಕಿರಿಯ ಶ್ರೇಣಿನ್ಯಾಯಾಧೀಶರಾದ. ಹೆಚ್.ಜೆ.ಶಿಲ್ಪ ರವರು , ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಪಿಡುಗುಗಳಲ್ಲಿ , ಬಾಲ ಕಾರ್ಮಿಕ ಪದ್ದತಿ ಪ್ರಮುಖವಾಗಿದೆ. ಅನಿಷ್ಠ ಪದ್ದತಿ ನಿವಾರಣೆಗೆ ಸಾರ್ವಜನಿಕರು , ನಾಗರೀಕರು ಯುವಕರು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಒತ್ತು ಕೊಡಬೇಕಿದೆ. ಮೊದಲು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉತ್ತಮ ಸ‍ಾಧನೆ ಮಾಡಬೇಕು , ಜೊತೆಗೆ ಸ‍ಾಮ‍ಾಜಿಕ ಕಾಳಜಿ ಸ‍ಾಮ‌ಾನ್ಯ ಜ್ಞಾನ ಹೊಂದಬೇಕಿದೆ. ಸ‍ಾಮಾಜಿಕ ಪಿಡುಗಗಳ ಕುರಿತು ಅರಿವು ಹೊಂದಿ , ಅವುಗಳ ನಿವಾರಣೆಯಲ್ಲಿ ಇಲಾಖೆಗಳ ಜೊತೆ ಸಹಕರಿಸಬೇಕಿದೆ. ಯುವ ಪೀಳಿಗೆ ಮೂಲಭೂತ ಕರ್ಥವ್ಯಗಳು ನೈತಿ ಜವಾಬ್ದಾರಿಗಳನ್ನು ಅರಿತು ಪಾಲಿಸಬೇಕು , ಮತ್ತು ನಾಡಿನ ಬಗ್ಗೆ ಅಭಿಮಾನ ದೇಶಪ್ರೇಮ ಬೆಳೆಸಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೈ. ಶಿಲ್ಪ , ತಹಶಿಲ್ದಾರರಾದ ಹಿ.ಕೆ.ನೇತ್ರಾವತಿ , ತಾಲೂಕು ಪಂಚಾಯ್ತಿ ವ್ಯವಸ್ಥಾಪಕರಾದ ವಿಜಯಕುಮಾರ , ವಕೀಲರ ಸಂಘದ ಅಧ್ಯಕ್ಷರಾದ ಜಿ.ಹೊನ್ನೂರಪ್ಪ , ವಕೀಲರು ಹೋರಾಟಗಾರರಾದ ಸಿ.ವಿರುಪಾಕ್ಷಪ್ಪ ಮಾತನಾಡಿದರು. ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಂ.ಶೈಲಜಾ ರವರು , ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ , ಪ್ರೌಢಶಾಲೆಯ ಮುಖ್ಯೊಪಧ್ಯಾಯರಾದ ಕೆ.ಎಸ್.ವೀರೇಶರವರು ಮಾತನಾಡಿದರು. ಶಿಕ್ಷಣ ಇಲಾಖೆಯ ಬಸವರಾಜ , ವಕೀಲರಾದ ಡಿ.ಹೆಚ್. ದುರುಗೇಶ ಹಾಗೂ ಟಿ. ಮಲ್ಲಿಕ‍ಾರ್ಜುನ, ಸಿಡಿಪಿಒ ಬಿ.ಮಾಲುಂಬಿ , ಕಾರ್ಮಿಕ ಇಲಾಖೆಯ ಅಧಿಕಾರಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ಖಂಡಿಸುವುದಾಗಿ ಸಂಕಲ್ಪ ಮಾಡುವುದಾಗಿ ಘೋಷಿಸಿ , ಉಪಸ್ಥಿತರಿದ್ದ ಎಲ್ಲರಿಗೂ ಪ್ರಮಾಣ ವಚನವನ್ನು ನಾಯಾಧೀಶರಾದ ಹೆಚ್.ಜೆ.ಶಿಲ್ಪರವರು ಭೋಧಿಸಿದರು.

ಈ ಸಭೆಯಲ್ಲಿ ಶಿಕ್ಷಕರಾದ ಎಂ.ಹರೀಶ ನಿರೂಪಿಸಿದರು , ಸಂಗೀತ ಶಿಕ್ಷಕಿ ಯು.ಉಮಾ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಟಿ.ಪ್ರಿಯದರ್ಶಿನಿ ಸ್ವಾಗತಿಸಿದರು , ಶಿಕ್ಷಕಿ ಜಿ.ಎಂ. ಶ್ವೇತಾ ವಂದಿಸಿದರು. ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಸತೀಶ ಉಪಸ್ಥಿತರಿದ್ದರು , ಹಾಗೂ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು

Share it :

Leave a Reply

Your email address will not be published. Required fields are marked *