ಗ್ಯಾಸ್‌ ಸಮಸ್ಯೆ ಸರಿ, ಸೌದೆ ಒಲೆ ಮರೆತು ಹೊಯ್ತಾ?

ಜಗತ್ತೇ ಗುರುತಿಸುವ ದೇಶದಲ್ಲಿರುವ ನಾವುಗಳು ಇಂದು ವ್ಯಾಪಾರ,ವ್ಯವಹಾರಕ್ಕಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರೀತಿ,ವಿಶ್ವಾಸ,ನಂಬಿಕೆಗೆ ನನ್ನ ದೇಶ ಪ್ರಥಮ ಸ್ಥಾನದಲ್ಲಿತ್ತು ಆದರೆ, ಇದೀಗ ಹಣಕ್ಕಾಗಿ ಮುಗ್ಧತೆಯನ್ನು ಮರಳು ಮಾಡಿಕೊಳ್ಳುತ್ತಿದ್ದಾರೆ. ಕಾಸಿನ ಉದ್ದೇಶ ಮೋಸವಾಗಿದ್ದು, ಜತೆಯಲ್ಲಿರುವವರಿಗೂ ಕಾಯ್ದು ಟೋಪಿ ಹಾಕುತ್ತಾರೆ.

ಇನ್ನು ನಮ್ಮ ನಾಡಿನಲ್ಲಿ ಹೇಗೆ ಅಂದ್ರೆ ಯಾವುದೋ ಹೊರ ದೇಶದಲ್ಲಿ ಯುದ್ಧವಾದರೇ, ಅದರ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಕಾರಣ ಏನು? ನಾವು ವಿದೇಶಿಗರನ್ನು ನಂಬಿ ಬದುಕುತ್ತಿದ್ದೀವಾ? ಅಥವಾ ನಮ್ಮ ಯೋಚನೆಗಳು ಕಸದ ತೊಟ್ಟೆ ಸೇರಿದೆಯಾ? ಅರ್ಥವೇ ಅಗುತ್ತಿಲ್ಲ? ಕಾರಣ ನಮಗೆಲ್ಲಾ ಗೊತ್ತೇ ಇರುತ್ತದೆ ಆದರೂ ಮಾತನಾಡದೆ ಮೌನಕ್ಕೆ ಶರಣಾಗಿದ್ದೇವೆ.

ಕೆಲವು ವಿಚಾರಕ್ಕೆ ನಮ್ಮ ಜನ ಸುಸ್ತಾಗಿ ಬಿಟ್ಟಿದ್ದು, ಕೆಲ ಅಧಿಕಾರಿಗಳ ದಡ್ಡತನದಿಂದ ದುಡುಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೌದು ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಪರಿಣಾಮ, ನಮ್ಮ ದೇಶದ ಮೂಲೆ ಮೂಲೆಗಳಿಗೂ ಹಬ್ಬಿದೆ. ಅಡುಗೆ ಅನಿಲ, ಎಲ್‌ಪಿಜಿ ಅಲಭ್ಯತೆ ಉಂಟಾಗಿದ್ದು, ಆಟೋ ರಿಕ್ಷಾ ಚಾಲಕರು, ಹೋಟೆಲ್‌ ಮಾಲೀಕರು, ಗ್ರಾಹಕರು, ವ್ಯಾಪಾರಿಗಳು ಹೈರಾಣಾಗಿದ್ದಾರೆ. ವಾಣಿಜ್ಯ ಬಳಕೆಯ ಗ್ಯಾಸ್‌ ಪೂರೈಕೆಯಿಲ್ಲದೇ ವ್ಯಾಪಾರಕ್ಕಿಂತ ಖರ್ಚು ಕೈ ಸುಡುತ್ತಿದೆ. ತಿಂಡಿ, ತಿನಿಸುಗಳ ದರವೂ ಹೆಚ್ಚಳವಾಗಿದೆ ಎಂದು ಸಾರುತ್ತಿದ್ದಾರೆ.

ಸತ್ಯ ಏನು ಅಂದ್ರೆ ಈ ಯುದ್ಧದ ಲಾಭ ಉದ್ದಿಮೆಗಳಿಗೆ ಮಾತ್ರ, ಹೋಟೆಲ್‌ ಮಾಲೀಕರು ಹೇಳುತ್ತಾರೆ ಗ್ಯಾಸ್‌ ಬೆಲೆ ಜಾಸ್ತಿ ಅದಕ್ಕೆ ತಿಂಡಿ ದರ ಏರಿಕೆಯಾಗಿದೆ ಎನ್ನುತ್ತಾರೆ. ಹೌದು ಬೆಬೆ ಹೆಚ್ಚಳ ಆಗಿದೆ, ಸೌದೆ ಒಲೆ ಬಳಸಿ ಊಟ ಕೊಡಿ , ಬೆಲೆ ಏರಿಕೆ ಎಂದು ಬಡವರ ಜೇಬಿಗೆ ಕತ್ತರಿ ಹಾಕುವುದು ಯಾಕೆ? ಯುವಕರು ಗ್ರಾಮೀಣ ಭಾಗದಿಂದ ಸಾವಿರಾರು ಕನಸು ಹೊತ್ತು ದೊಡ್ಡ, ದೊಡ್ಡ ನಗರಕ್ಕೆ ಬಂದಿರುತ್ತಾರೆ. ಆರಂಭದಲ್ಲಿ ಹಣವಿಲ್ಲದೆ, ಇರುವುದಕ್ಕೆ ನೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹೀಗಿರುವಾಗ ಯಾವುದೋ ನೆಪದಲ್ಲಿ ಅಮಾಯಕರನ್ನು, ಹಣ ಇಲ್ಲದವರನ್ನು ಸುಲಿಗೆ ಮಾಡುವುದು ತಪ್ಪಲ್ಲವೇ? ಊಟಕ್ಕಾಗಿ ಏನೋ ಒಂದು ವ್ಯವಸ್ಥೆ ಮಾಡಿ, ಕಡಿಮೆ ಬೆಲೆಗೆ ಆಹಾರ ನೀಡಬಹುದು ಅಲ್ಲವೇ? ದೇಶದಲ್ಲಿ ಏನೇ ಸಮಸ್ಯೆ ಆದ್ರೂ ಅದಕ್ಕೆ ಬೆಲೆ ಏರಿಕೆ ಯಾಕೆ ಕಾರಣ? ಬೇರೆ ಪರಿಹಾರವೇ ಇಲ್ಲವೇ ಎಂದು ಜನಸಮಾನ್ಯರು ಮನದಲ್ಲಿ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ಯಾತನೆಗಳಿಂದ ಕಿನ್ನತೆಗೆ ಒಳಗಾಗಿ ದಿಕ್ಕೇ ಇಲ್ಲದ ದಿಕ್ಸೂಚಿಯಂತೆ ಬದುಕುತ್ತಿದ್ದಾರೆ. ಪರಿಹಾರ ಕಂಡುಕೊಂಡರೆ ಸಿಕ್ಕೇ ಸಿಗುತ್ತದೆ ಬೆಲೆ ಏರಿಕೆಗೆ ಬಡವರನ್ನು ಬಲಿ ಮಾಡಬೇಡಿ, ದೊಡ್ಡವರ ಅರ್ಥಿಕತೆಯ ಖಜಾನೆ ತುಂಬಿರುತ್ತದೆ ಅಲ್ಲವೇ? ಅದರಲ್ಲಿಯೇ ಇಲ್ಲದವರಿಗೆ ಪಾಲು ನೀಡಿ ಪುಣ್ಯಕಟ್ಟಿಕೊಳ್ಳಬಹುದು.

Share it :

Leave a Reply

Your email address will not be published. Required fields are marked *