ವಿಜಯನಗರ ಜಿಲ್ಲೆ ಕೂಡ್ಲಿಗಿ – ಮಾಜಿ ಉಪ ಸಭಾಪತಿಗಳು , ಹಾಗೂ ಭಾರಿ ಶಾಸಕರಾಗಿದ್ದ ಹಿರಿಯ ರಾಜಕಾರಣಿ. ಮೊಳಕಾಲ್ಮೂರು ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರನ್ನು ಸಚಿವ ಸ್ಥಾನಕ್ಕಾಗಿ ಸಿಎಂ ಡಿಕೆಶಿ ಮನವಿ ಮಾಡಿಕೊಳ್ಳಲಾಗಿದೆ.
ಕೂಡ್ಲಿಗಿ ಶಾಸಕರಾದ ಎನ್ ಟಿ ಶ್ರೀನಿವಾಸರವರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ ಈ ವಿಚಾರ ವ್ಯಕ್ತಪಡಿಸಿ, ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ಭಾಗದ ಕಾಂಗ್ರೇಸ್ ಧುರೀಣರು ,ಸೇರಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರನ್ನು. ಬೆಂಗಳೂರಿನ ಅವರ ಕಾವೇರಿ ನಿವಾಸದಲ್ಲಿ ಭೇಟಿಯಾದರು.
ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಪಂಗಡ ಸಮುದಾಯದ. ರಾಜ್ಯದ ಅತ್ಯಂತ ಅನುಭವಿ ಹಿರಿಯ ಶಾಸಕರಾದ , ಎನ್ ವೈ ಗೋಪಾಲಕೃಷ್ಣ ರವರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕೆಂದು ಮನವಿ ಮಾಡಿದ್ದಾರೆ. ಗುಂಡುಮುಣುಗು ತಿಪ್ಪೇಸ್ವಾಮಿರವರು ಮುಖ್ಯಮಂತ್ರಿಯವರಲ್ಲಿ ಮಾತನಾಡಿ , ಎನ್ ವೈ ಗೋಪಾಲಕೃಷ್ಣ ರವರು ಪರಿಶಿಷ್ಟ ಪಂಗಡ ಸಮುದಾಯದ ಕ್ರಿಯಾ ಶೀಲ ಹಿರಿಯ ಶಾಸಕರಾಗಿದ್ದಾರೆ. ಮಾತ್ರವಲ್ಲ ಅವರು ಸರ್ವ ಜನಾಂಗಗಳ ಜನಾನುರಾಗಿಯಾಗಿದ್ದಾರೆ. ಏಳು ಭಾರಿ ಶಾಸಕರಾಗುವ ಮೂಲಕ ರಾಜ್ಯ ಕಂಡ ಅತ್ಯಂತ ಅನುಭವಿ ಶಾಸಕರಾಗಿದ್ದಾರೆ.
ಪ್ರತಿಭಾರಿ ಗೆದ್ದಾಗಲೂ ಅವರು ಕ್ಷೇತ್ರ ಅಭಿವೃದ್ಧಿಗೆ , ನೂರಾರು ಕೋಟಿ ಅನುಧಾನ ತಂದು ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಮತ್ತು ಜನಾನುರಾಗಿಯಾಗಿದ್ದಾರೆ.
ಕಾರಣ ಅವರನ್ನು ಸಚಿವರನ್ನಾಗಿ ನೇಮಿಸಿದ್ದಲ್ಲಿ , ವಿಜಯನಗರ ಹಾಗೂ ಬಳ್ಳಾರಿ ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಸಾಧ್ಯ. ಮತ್ತು ಕಲ್ಯಾಣ ಕರ್ನಾಟಕವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸುವುದರಲ್ಲಿ ಸಂಧೇಹವಿಲ್ಲ. ಕಾರಣ ಎನ್ ವೈ ಗೋಪಾಲಕೃಷ್ಣರವರನ್ನು ಸಚಿವರನ್ನಾಗಿಸಿ ಎಂದು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಲ್ಲಿ ಗುಂಡುಮುಣುಗು ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್ ಟಿ ಶ್ರೀನಿವಾಸ್ ರವರು ಮಾತನಾಡಿ , ಸರಳ ಸಜ್ಜನಿಕೆಯ ರಾಜ್ಯದ ಹಿರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರು. ಮಾಜಿ ಉಪಸಭಾಪತಿಗಳಾಗಿದ್ದು , ಏಳು ಬಾರಿ ಶಾಸಕರಾಗಿರುವ ಅನುಭವಿ ರಾಜಕಾರಣಿಗಳಾಗಿದ್ದಾರೆ. ಅವರನ್ನು ಸಚಿವರನ್ನಾಗಿ ನೇಮಿಸಿದ್ದಲ್ಲಿ , ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಸಾಧ್ಯ ಹಾಗೂ ಪಕ್ಷದ ಏಳ್ಗೆಗೂ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಸಹ ಭೇಟಿ ಮಾಡಿ , ಅವರಲ್ಲಿಯೂ ಕೂಡ ಎನ್ ವೈ ಗೋಪಾಲಕೃಷ್ಣ ರವರನ್ನು ಸಚಿವರನ್ನಾಗಿ ಮಾಡುವಂತೆ ಕಾಂಗ್ರೆಸ್ ಧುರೀಣರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಅನೇಕ ಸಚಿವರು , ಹಾಗೂ ಶಾಸಕರು ಕೆಲ ಸಂಸದರು. ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎಪಿಎಂಸಿ ಅಧ್ಯಕ್ಷ ಬೋಸಯ್ಯ , ನಿವೃತ್ತ ಶಿಕ್ಷಕರಾದ ತಳವಾರ ಶರಣಪ್ಪ , ನಿಂಬಳಗೆರೆ ಕಲ್ಲೇಶಪ್ಪ , ಗಾಣಗಟ್ಟೆ ಮಹಂತೇಶ , ಪಾಪಾನಾಯ್ಕ , ಬೊಮ್ಮಣ್ಣ , ಸಕಲಾಪುರದಹಟ್ಟಿಹರೀಶ , ಪಾಲಯ್ಯನಕೋಟೆ ಕಲ್ಲೇಶ , ಕುಪ್ಪನಕೇರಿ ಸಿದ್ದೇಶ , ಇಂಜಿನಿಯರ್ ಶರಣಪ್ಪ , ಯಂಬಳಿ ಮಂಜುನಾಥ್ ಹಾಗೂ ವೆಂಕಟೇಶ್ ಸೇರಿದಂತೆ ಇತರರು.





