ಸಾವಿರಾರು ಸಮಸ್ಯೆಗಳ ಮಧ್ಯೆ ಬಿಜಿಯಾಗಿದ್ದ ಸಮಂತಾ ರುತ್ ಪ್ರಭು ಇದೀಗ ಮತ್ತೆ ಚಿತ್ರ ರಂಗಕ್ಕೆ ಮಾ ಇಂಟಿ ಬಂಗಾರಂ ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಮಾಸ್ ಎಂಟ್ರಿ ಕೊಟ್ಟಿದ್ದಾರೆ. . ಈ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಮದ ನಂತರ ಬೆಳ್ಳಿತೆರೆಯ ಪ್ರೇಕ್ಷಕರನ್ನು ರಂಜಿಸಲು ಸ್ಯಾಮ್ ಬಂದಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಮಾ ಇಂಟಿ ಬಂಗಾರಂ ಚಿತ್ರಕ್ಕೆ ಸಮಂತಾ ಸರಿ ಸಾಟಿಯಾಗಿದ್ದಾರೆ.
ಚಿತ್ರದಲ್ಲಿ ಸಮಂತಾ ವಿಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಕ ಪಾತ್ರವಹಿಸಿದ್ದು, ಸಮಾನ್ಯವಾಗಿ ನಾಯಕರಿಗೆ ಅತೀ ಹೆಚ್ಚು ಬೇಡಿಕೆ,ಅಭಿಮಾನವಿರುತ್ತದೆ ಆದರೆ ಈ ಚಿತ್ರದ ಮೂಲಕ ಎಲ್ಲರನ್ನು ಸಮಂತಾ ಹಿಂದಿಕ್ಕಿದ್ದಾರೆ. ಹೌದು ಸಿನಿಮಾದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಟಾಪಿಕ್ ಸಮಂತಾ ಅವರ ಪವರ್‌ಫುಲ್ ಮಾಸ್ ಆಕ್ಷನ್ ಪಾತ್ರ. ಅವರ ಸ್ಕ್ರೀನ್ ಪ್ರೆಸೆನ್ಸ್, ಆಕ್ಷನ್ ಸೀಕ್ವೆನ್ಸ್ ಮತ್ತು ಡೈಲಾಗ್ ಅನ್ನು ಪ್ರೇಕ್ಷಕರು- ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಸಾಮಾನ್ಯ ಮಹಿಳೆ ಪಾತ್ರದ ಮೂಲಕ ನಾಯಕತ್ವ ವಹಿಸಿಕೊಂಡಿದ್ದು, ಈ ಚಿತ್ರದಲ್ಲಿ ಹೆಣ್ಣು ಮಕ್ಕಳು ಅಡುಗೆ ಮಾಡುವುದಕ್ಕೆ ಮಾತ್ರವಲ್ಲ ಅವರಿಗೂ ಗಂಡು ಮಕ್ಕಳನ್ನು ಮೀರಿಸುವ ಸಾಮರ್ಥ್ಯವಿದೆ ಎಂದು ತೊರಿಸಿಕೊಟ್ಟಿದ್ದಾರೆ.
ಕೆಲವರು ಈ ಚಿತ್ರವನ್ನು ‘ಒನ್-ವುಮನ್ ಶೋ’ ಎಂದು ಕರೆದಿದ್ದು, ಸಮಂತಾ ಇಡೀ ಸಿನಿಮಾವನ್ನು ಅದ್ಭುತವೆಂದಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಕೆಲವರು ಸಮಂತಾ ಮಾ ಇಂಟಿ ಬಂಗಾರಂ ಚಿತ್ರದ ಬಗ್ಗೆ ತಮ್ಮ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈ ಚಿತ್ರವನ್ನು ಆಕಾಶ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಈ ಮೊದಲು ರೊಮ್ಯಾಂಟಿಕ್ ಪಾತ್ರಗಳಿಂದ ಖ್ಯಾತಿಯಾಗಿದ್ದ ಸ್ಯಾಮ್ ಇದೀಗ ಮಾಸ್ ಎಂಟ್ರಿ ಕೊಟ್ಟು ಚಿತ್ರರಂಗಕ್ಕೆ ರಂಗು ನೀಡಿದ್ದಾರೆ. ಈ ಮೂವಿ ಮೊದಲಾರ್ಧವು ಪಾತ್ರಗಳ ಪರಿಚಯ, ಸ್ಥಳೀಯ ಹಾಸ್ಯ ಮತ್ತು ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಹಲವಾರು ಭಾಗಗಳಲ್ಲಿ ಈ ಚಿತ್ರದ ಬಗ್ಗೆ ಭಾರಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಸಿನಿಮಾದಲ್ಲಿ ಫ್ಯಾಮಿಲಿ ಎಮೋಷನ್ಸ್ ಮತ್ತು ಸೆಂಟಿಮೆಂಟ್ ಇದ್ದು, ಕುಟುಂಬ ಸಮೇತ ಚಿತ್ರವನ್ನು ನೋಡಬಹುದು ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಕೆಲವರು ಈ ಭಾವನಾತ್ಮಕ ಆಳವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಿನಿಮಾವನ್ನು ಮನಸ್ಪೂರ್ತಿ ಅನುಭವಿಸಿದ್ದಾರೆ. ಸಮಂತಾ ಅವರ ನಟನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಸ್ಟಾರ್ ಪವರ್, ಆಕ್ಷನ್ ದೃಶ್ಯಗಳು ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗಾಗಿ ‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಮತ್ತೆ ಮತ್ತೆ ನೋಡಬಹುದು ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಚಿತ್ರದಲ್ಲಿ ಸ್ಥಳ ಆಯ್ಕೆ, ಕಥೆ ಮತ್ತೆ ಸಮಂತಾ ಧರಿಸಿರುವ ಉಡುಪು ಅಭಿಮಾನಿಗಳಿಗೆ ಮೆಚ್ಚುಗೆಯಾಗಿದ್ದು, ಸಮಂತಾಳ ನಟನೆಯ ಅದ್ಬುತವಾಗಿದೆ. ಈ ಪಾತ್ರ ಮೂಲಕ ಸಮಂತಾ ಬಲ ಹೆಚ್ಚಿಕೊಳ್ಳಲಿದೆ ಎಂದು ಅಭಿಮಾನಿಗಳು ,ಪ್ರೆಕ್ಷಕರು ಮಾತನಾಡುತ್ತಿದ್ದಾರೆ.
ಒಟ್ಟನಲ್ಲಿ ಈ ಚಿತ್ರ ನೋಡಿ ಕೆಲವರು ಸಮಂತಾ ಪೋಟೋವನ್ನು ಕಟ್ ಔಟ್ ಮಾಡಿ , ಹೂವಿನ ಹಾರ ಹಾಕಿದ್ದು, ಇನ್ನು ಕೆಲವರು ಕಡೆ ಸ್ಯಾಮ್ ನಂಬರ್ ಒನ್ ನಾಯಕಿ ಯಾವುದೇ ಪಾತ್ರ ಕೊಟ್ಟರು ಆ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂದಿದ್ದಾರೆ.





