Marriage of frogs ವಿಜಯನಗರ ಜಿಲ್ಲೆ ಕೂಡ್ಲಿಗಿ : ಎಪ್ರಿಲ್ 13 ರಿಂದ ಮಳೆಗಾಲ ಪ್ರಾರಂಭವಾಗಿದ್ದು , ಎಪ್ರಿಲ್ ನಲ್ಲಿ ಅಶ್ವಿನಿ ಭರಣಿ ಮೇನಲ್ಲಿ ರೋಹಿಣಿ ಕೃತಕಾ ಮಳೆ ಬರಬೇಕಿತ್ತು. ಜೂನ್ ತಿಂಗಳ 8 ರಿಂದ ಮೃಗಶಿರಾ ಅರಂಭಗೊಂಡಿದ್ದು , ಜೂನ್ 22 ಕ್ಕೆ ಆರಿದ್ರಾ ಮಳೆ ಬರಲಿದೆ. ಆದರೆ ಈವರೆಗೂ ಯಾವ ಮಳೆನೂ ಸಮರ್ಪಕವಾಗಿ , ಕೂಡ್ಲಗಿ ಕ್ಷೇತ್ರದ ಧರೆಗಿಳಿದಿಲ್ಲ ಪರಿಣಾಮ ರೈತರು ಕಂಗಾಲಾಗಿದ್ದಾರೆ. ತಮ್ಮ ಧರಿಣಿಯನ್ನು ಹಸನು ಮಾಡಿ ಹದಮಾಡಿ ಬಿತ್ತನೆಗೆ ಸಿದ್ಧರಾಗಿದ್ದಾರೆ , ಹಲಾವರು ಕಡೆಗಳಲ್ಲಿ ರೈತರು ವರುಣದೇವನ ಮೇಲಿನ ಅತೀವ ಭರವಸೆಯಿಂದಾಗಿ ಬಿತ್ತನೆನೂ ಮಾಡಿದ್ದಾರೆ. ಅದರೆ ವರುನ ದರ್ಶನ ಭಾಗ್ಯವಿಲ್ಲದಾಗಿ , ರೈತರು ತಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಬಹುತೇಕರು ಅಗಸದತ್ತ ಮುಖ ಮಾಡಿ ವರುಣನ ಕೃಪೆಗಾಗಿ ಎದುರು ನೋಡುತ್ತಿದ್ದಾರೆ.
ಇನ್ನೂ ಬಹುತೇಕ ಆಸ್ತಿಕ ಮನೋಧರ್ಮದ ರೈತರು , ಸಾಂಪ್ರದಾಯಿಕ ಜಾನಪದೀಯ ಧಾರ್ಮಿಕ ಆಚರಣೆಗಳ ಮೂಲಕ. ವರುಣನ ಕೃಪೆಗಾಗಿ ಪೂಜೆ ಆಚರಣೆಗಳ ಮೊರೆ ಹೋಗಿದ್ದಾರೆ. ಅಂತೆಯೇ ಕೂಡ್ಲಿಗಿ ಪಟ್ಟಣದ ಕೋಟೆಯಲ್ಲಿ ಈ ಹಿಂದೆಯೇ , ಮಳೆ ಗಂಗಮ್ಮ ಪೂಜೆ ಜರುಗಿಸಲಾಗಿತ್ತು. ಜೂನ್ 19ರ ಶುಕ್ರವಾರದಂದು , ಪಟ್ಟಣದ ಪೇಟೆಬಸವೇಶ್ವರ ನಗರದಲ್ಲಿ ಮಳೆಗಾಗಿ ಕತ್ತೆ ಹಾಗೂ ಕಪ್ಪೆ ಮದುವೆ ಮತ್ತು ಮೆರವಣಿಗೆ ಜರುಗಿಸಲಾಯಿತು.
ಆಚರಣೆಗಳು ಭಾರತೀಯ ಸಂಸ್ಕೃತಿಯಲ್ಲಿ , ಪ್ರಕೃತಿಯನ್ನು ಪೂಜಿಸುವ ಮತ್ತು ಮಳೆ ದೇವತೆಗಳನ್ನು ಒಲಿಸಿಕೊಳ್ಳುವ ಪ್ರಾಚೀನ ವಿಧಾನಗಳಾಗಿವೆ. ಮಳೆ ಬಾರದಿದ್ದಾಗ ಕತ್ತೆಗಳಿಗೆ ಕಪ್ಪೆಗಳಿಗೆ ಮದುವೆ ಮಾಡಿಸಿದರೆ , ಮಳೆ ಬಂದೇ ಬರುತ್ತದೆ ಎಂಬ ಬಲವಾದ ನಂಬಿಕೆ ನಾಗರೀಕರಲ್ಲಿದೆ. ಪಟ್ಟಣದ ಪೇಟೆ ಬಸವೇಶ್ವರ ನಗರದಲ್ಲಿ , ಶ್ರೀಪೇಟೆಬಸವೇಶ್ವರ ದೈವಸ್ತರು ಹಾಗೂ ಹಿರಿಯರು ಮಹಿಳೆಯರು ಮಕ್ಕಳು , ಯುವಕರು ಒಗ್ಗೂಡಿ ಕತ್ತೆ ಹಾಗೂ ಕಪ್ಪೆಗಳ ಮದುವೆ ಮತ್ತು ಭರ್ಜರಿ ಮೆರವಣಿಗೆ ಮಾಡಿದ್ದಾರೆ.
ಬೆಳ್ಳಬೆಳಿಗ್ಗೆ ಗಂಡು ಮತ್ತು ಹೆಣ್ಣು ಕತ್ತೆಗಳನ್ನು , ಹಾಗೂ ಕಪ್ಪೆಗಳೆರಡನ್ನು ತಂದು ಅವುಗಳಿಗೆ ಅರಿಶಿನ ಹಚ್ಚಿ ಹೊಸ ಬಟ್ಟೆ ಹಾಗೂ ಹೂಮಾಲೆ ಹಾಕಿ ಶೃಂಗಾರ ಮಾಡಲಾಯಿತು. ನಂತರ ಸಾಂಪ್ರದಾಯದಂತೆ ಮಧು ಮಕ್ಕಳ ಮೆರವಣಿಗೆ ನಡೆಸಲಾಯಿತು , ವಾಧ್ಯ ವೃಂಧದೊಂದಿಗೆವ ತೆರಳಿದ ನವ ವಧು ವರರ ಮೆರವಣಿಗೆ , ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಹಾಗೂ ಕಪ್ಪೆಗಳ ಜೋಡಿ ಮೆರವಣಿಗೆ ಸಂಚರಿಸಲಾಯಿತು. ಪಟ್ಟಣದ ಶ್ರೀಪೇಟೆಬಸವೇಶ್ವರ ದೇವರು ಸೇರಿದಂತೆ , ಪಟ್ಟಣದ ಆರಾಧ್ಯ ದೇವರುಗಳ ದೇವಸ್ಥಾನಗಳಿಗೆ ಮೆರವಣಿಗೆ ಸಾಗಿ ದೇವರ ದರ್ಶನ ಪಡೆದು ಮಳೆಗಾಗಿ ಪ್ರಾರ್ಥಿಸಲಾಯಿತು ,
ಅದೇ ರೀತಿ ಕೂಡ್ಲಿಗಿ ಪಟ್ಟಣದಲ್ಲಿ ಕತ್ತೆಗಳ ಕಪ್ಪೆಗಳ ಮಧುವೆ ಸಾಂಪ್ರದಾಯಿಕವಾಗಿ ಜರುಗಿಸಲಾಗಿದೆ , ದೈವಸ್ಥರೆಲ್ಲಾ ಸೇರಿ ಶ್ರೀಪೇಟೆಬಸವೇಶ್ವರ ದೇವಸ್ಥಾನದ ಅಂಗಳದಲ್ಲಿ ಸಂಸಾಂಪ್ರದಾಯಿಕವಾಗಿ , ಮದುವೆ ಮಂಟಪವನ್ನು ಅಲಂಕರಿಸಿ ನೈಜ ಮದುವೆಯಂತೆಯೇ ವಾದ್ಯ-ಮೇಳ, ಅಕ್ಷತೆ, ಮತ್ತು ಪೂಜಾ ಕೈಂಕರ್ಯಗಳೊಂದಿಗೆ ಎರಡು ಕಪ್ಪೆಗಳಿಗೆ ಮತ್ತು ಎರೆಡು ಕತ್ತೆಗಳಿಗೆ ಮದುವೆ ಮಾಡಲಾಯಿತು. ನವದಂಪತಿ ಜೋಡು ಕತ್ತೆಗಳಿಗೆ , ಹಾಗೂ ನವದಂಪತಿಗಳಾದ ಜೋಡು ಕಪ್ಪೆಗಳ ಕೂಗಿಗೆ ಮಳೆ ತರುವ ಶಕ್ತಿಯಿದೆ ಎಂಬುದು ರೈತರ ನಂಬಿಕೆಯಾಗಿದೆ. ಹೀಗಾಗಿ ಕತ್ತೆಗಳಿಗೆ ಹಾಗೂ ಕಪ್ಪೆಗಳಿಗೆ ಕಂಕಣ ಭಾಗ್ಯ ಮಾಡುವುದರಿಂದ , ದೇವರು ಪ್ರಸನ್ನನಾಗಿ ಉತ್ತಮ ಮಳೆಯಾಗುತ್ತದೆ ಎಂದು ನಂಬಲಾಗುತ್ತದೆ. ಅಂತಿಮವಾಗಿ ಮದುವೆಯ ಅಂತಿಮ ಘಟ್ಟದಲ್ಲಿ , ದೈವಸ್ಥರೆಲ್ಲರೂ ಸೇರಿ ಪೂಜೆ ನೆರವೇರಿಸಿ ಮಳೆಗಾಗಿ ಅರಾಧಿಸಲಾಯಿತು.
ಬಾಲಕನಿಗೆ ಗಂಗೆಯುಳ್ಳ ಮಡಕೆಯನ್ನೊರಿಸಿ ಮೆರವಣಿಗೆ ಮಾಡಲಾಗುತ್ತದೆ , ಈ ಮೂಲಕ ಗೊರ್ಜಿಗಂಗೆ ಪೂಜೆ ಕೂಡ ಮಾಡಲಾಗುತ್ತದೆ. ನೆರೆದವರೆಲದಲ್ಲರೂ ಸಾಮೂಹಿಕ ಭೋಜನ ಸವಿಯುವ ಮೂಲಕ , ಕತ್ತೆಗಳ ಕಪ್ಪೆಗಳ ಮಧುವೆ ಕಾರ್ಯಕ್ರಮ ಸಮಾಪ್ತಿಯಾಗುತ್ತದೆ. ಆಚರಣೆಗಳು ವಿಜ್ಞಾನಕ್ಕೆ ತರ್ಕಕ್ಕೆ ನಿಲುಕದಿಲ್ಲವಾದರೂ , ಭಾರತೀಯರ ಸಾಂಸ್ಕೃತಿಕ ನಂಬಿಕೆ ಮತ್ತು ಪ್ರಕೃತಿಯ ಮೇಲಿನ ಭಲವಾದ ನಂಬಿಕೆಯನ್ನು ಪ್ರತಿಭಿಂಬಿಸುತ್ತಿವೆ.





