ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ ಮನೆಯಲ್ಲಿ ಅವರ ಉದ್ಯಮಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಟಿಯ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಇದೀಗ ಸಾವನ್ನಪ್ಪಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಗೆಳೆಯ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ತಾಪಂಡ ಪೊಲೀಸರಿಗೆ ತಿಳಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಅವರು ನೆಲಮಂಗಲದಲ್ಲಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ಹಲವು ಬಾರಿ ಕೃಷಿ ತಾಪಂಡ ಅವರಿಗೆ ವೈಶಾಖ್ ಕರೆ ಮಾಡಿದ್ದು, ಇತ್ತ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ಆದರೆ ಇತ್ತ ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಮೆಸೆಜ್ ಕಳಿಸಿದ್ದರು ಎನ್ನಲಾಗಿದೆ.
ಈ ವಿಷಯ ತಿಳಿದ ತಕ್ಷಣ ವೈಶಾಖ್ ಮನೆಯವರಿಗೆ ಕೃಷಿ ತಾಪಂಡ ತಿಳಿಸಿದ್ದರು. ಕೃಷಿ ತಾಪಂಡ ವಾಸವಾಗಿದ್ದ ಆರ್‌ಆರ್ ನಗರದ ಬಿ ಬ್ಲಾಕ್ 4ನೇ ಪ್ಲೋರ್‌ನ 403ನೇ ಫ್ಲಾಟ್‌ಗೆ ಹೋಗಿ ನೋಡುವಷ್ಟರಲ್ಲಿ ವೈಶಾಖ್ ಆತ್ಮಹತ್ಯೆಗೆ ಮಾಡಿಕೊಂಡಿದ್ದರು
ಅನೇಕ ದಿನಗಳಿಂದ ಇದೇ ನಿವಾಸದಲ್ಲಿದ್ದ ವೈಶಾಕ್ ವಾಸವಾಗಿದ್ದು, ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ. ಸಧ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ
ಮೆಸೆಜ್ ಮಾಡಿದ ಬಳಿಕ ವೈಶಾಖ್ ಜೊತೆ ಮಾತಾಡಿದ್ದರು. ಈ ವೇಳೆ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಈ ವೇಳೆ ಕುಕ್ಕೆಗೆ ಹೋಗೋಣ ಬಾ ಎಂದಿದ್ದ ವೈಶಾಕ್, ಆಯ್ತು ನಾನು ಬರ್ತೀನಿ ಎಂದು ಕೃಷಿ ಹೇಳಿದ್ರು ಎನ್ನಲಾಗಿದೆ.
ಮಧ್ಯರಾತ್ರಿ 12 ಗಂಟೆಗೆ ನಟಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು ವಿಷಯ ತಿಳಿದ ಬಳಿಕ ಈ ಬಗ್ಗೆ ನಟಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.





