ನಾನು ಮೋದಿಯವರ ಫ್ಯಾನ್, ಅವರು ಭಾರತ ಮತ್ತು ಜಗತ್ತಿನ ದೊಡ್ಡ ಶಕ್ತಿ – ಮಾರ್ಕೊ ರುಬಿಯೋ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದಿನ ವರ್ಷದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಅಧ್ಯಕ್ಷರ ಭೇಟಿ ಹಿನ್ನೆಲೆ ಈ ವರ್ಷಾಂತ್ಯಕ್ಕೆ ತಾವು ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಹೊಗಳಿದ ರುಬಿಯೋ, ನಾನು ಮೋದಿಯವರ ಫ್ಯಾನ್, ಅವರು ಭಾರತವನ್ನು ಜಗತ್ತಿನ ದೊಡ್ಡ ಶಕ್ತಿಯನ್ನಾಗಿ ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ದೇಶಗಳು ತೈಲ ವ್ಯಾಪಾರವನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ ಎಂದರು.

ಕಚ್ಚಾ ತೈಲವನ್ನು ಶುದ್ಧೀಕರಿಸುವ ದೊಡ್ಡ ಶಕ್ತಿ ಭಾರತಕ್ಕಿದೆ. ಈ ಭೇಟಿ ಮತ್ತು ವ್ಯಾಪಾರ ಒಪ್ಪಂದದಿಂದ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ‌ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

G7 ಸಮ್ಮೇಳನದಲ್ಲಿ 16 ತಿಂಗಳ ನಂತರ ಪ್ರಧಾನಿಯೊಂದಿಗೆ ನಡೆದ ಭೇಟಿ ಉತ್ತಮವಾಗಿತ್ತು. ನಮ್ಮ ನಡುವಿನ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ. ಅಷ್ಟೇ ಅಲ್ಲದೇ ಭಾರತ ಮತ್ತು ಅಮೆರಿಕ ದೇಶಗಳು ಮುಂದಿನ ‘ಕ್ವಾಡ್’ಸಭೆಗಾಗಿ ಕಾಯುತ್ತಿವೆ. ಇದರ ಜತೆಗೆ, ಮುಂದಿನ ವರ್ಷ ಟ್ರಂಪ್ ಭಾರತಕ್ಕೆ ಬರುವ ಮುನ್ನ ಈ ವರ್ಷದ ಅಂತ್ಯಕ್ಕೆ ತಾವು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.

ಭಾರತವು ಅಮೆರಿಕದ ನಿಕಟ ಪಾಲುದಾರ ಮತ್ತು ಮಿತ್ರ ರಾಷ್ಟ್ರ. ಟ್ರಂಪ್ ಅವರು ಭಾರತಕ್ಕೆ ಬಂದರೆ, ಇದು 2020ರ ಫೆಬ್ರವರಿ ನಂತರ ಅವರ ಮೊದಲ ಭೇಟಿಯಾಗಲಿದೆ ಹಾಗೂ ತಮ್ಮ ಎರಡನೇ ಅವಧಿಯಲ್ಲಿ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ ಎಂದರು.

ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ನಡೆದ G-7 ಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದರು. ಇದರ ಜೊತೆಗೆ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಕೊನೆಯ ಹಂತಕ್ಕೆ ಬಂದಿವೆ ಎಂದು ಸೂಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ನಡುವೆ ಒಳ್ಳೆಯ ಸ್ನೇಹವಿದೆ. ಇದೇ ಕಾರಣಕ್ಕೆ ಮುಂದಿನ ವರ್ಷದ ಆರಂಭದಲ್ಲೇ ಟ್ರಂಪ್ ಅವರು ಭಾರತಕ್ಕೆ ಬರುವಂತೆ ಪ್ಲಾನ್ ಮಾಡುತ್ತಿದ್ದೇವೆ. ಇದು ನಿಜಕ್ಕೂ ಒಳ್ಳೆಯ ವಿಷಯ ಎಂದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *