Pradeep Ishwar
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿದ ಪ್ರದೀಪ್ ಈಶ್ವರ್ ಆಕ್ರೋಶ ಹೊರಹಾಕಿದ್ದಾರೆ. ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡೋದು ಸರಿನಾ? ಜಿಲ್ಲೆಯಲ್ಲಿ ಶೋಷಿತರು, ಅಲ್ಪಸಂಖ್ಯಾತರು ಬದುಕುಬಾರದ? ಅಂತ ಪ್ರಶ್ನೆ ಮಾಡಿದ್ದಾರೆ.
ನಾನು ತುಂಬಾ ತಾಳ್ಮೆಯಿಂದ ಇದ್ದೇನೆ. ನಾವು ನಿಮ್ಮ ಮನೆ ಕೊಲಿ ಕಾರ್ಮಿಕರು, ವಾಚ್ ಮ್ಯಾನ ಕೆಲಸಕ್ಕೆ ಲಾಯಕ್ಕು, ನಿಮ್ಮನೆ ಕೂಲಿಗೆ ಬರ್ತೀವಿ, ನೀವು ಬಿಸಾಕೋ ಭಿಕ್ಷೆ ಅನ್ನ ತಿಂತೀವಿ. ನಿಮ್ಮನೆ ವಾಚ್ಮ್ಯಾನ್ ಕೆಲಸ ಮಾಡ್ತೀವಿ. ಅದಕ್ಕೆ ಲಾಯಕ್ ಅಂದುಕೊಂಡಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ
ಕುಮಾರಣ್ಣ, ನೀನು ಡಿಕೆ ಅವರನ್ನೂ ಸಹಿಸಲ್ಲ, ಚೆಲುವಣ್ಣನನ್ನೂ ಸಹಿಸಲ್ಲ. ಓಬಿಸಿ ನನ್ನೂ ಸಹಿಸಲ್ಲ. ಶೋಷಿತ ವರ್ಗದ ಶಾಸಕ… ನನ್ನನು ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನು ಅವಮಾನ ಮಾಡಿದ್ದೀವಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ 65 ಲಕ್ಷದ ವಾಚ್ ಧರಿಸುತ್ತಿದ್ದರು ಎಂದು ಹೇಳಿದ್ದೇನೆ. ಈಗ ಸಾಮಾನ್ಯ ವಾಚ್ ಕಟ್ಟಿಕೊಂಡು ಬಂದು ತೋರಿಸಿದರೆ ಹೇಗೆ? ಅವರು ಧರಿಸಿದ್ದ 65 ಲಕ್ಷದ ವಾಚ್ಗಳ ಫೋಟೋ ಹಾಗೂ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದೇನೆ ಎಂದರು.
ನಾನು ದುಬಾರಿ ಬದನೆಕಾಯಿ ಅಥವಾ ಕೆಜಿಗೆ 5 ಸಾವಿರ ರೂ. ಬೆಲೆಯ ಟೊಮೆಟೊ ಬೆಳೆದು ಖರೀದಿಸಿದ್ದೇನೆ ಎಂದು ಹೇಳಿದರೂ ಹೇಳಬಹುದು. ಆದರೆ 32 ಎಕರೆ ಜಮೀನು ಖರೀದಿಸಲು ಹಣ ಎಲ್ಲಿಂದ ಬಂತು? ಎಂಬ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಸವಾಲು ಎಸೆದರು.
ಇದೇ ವೇಳೆ ತಮ್ಮ CA ಸೈಟ್ ವಿಚಾರವನ್ನು ಪ್ರಸ್ತಾಪಿಸಿದ ಅವರು, ನಾನು ಒಂದು ಎಕರೆ CA ಸೈಟ್ ಹೇಗೆ ಪಡೆದಿದ್ದೇನೆ ಎಂಬುದನ್ನು ಈಗಾಗಲೇ ವಿವರಿಸಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಹೇಗೆ ಬಂತು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದರು.
ನಾನು ಇವತ್ತು ತಾಳ್ಮೆಯಿಂದ ಇದ್ದೇನೆ. ಕುಮಾರಣ್ಣ ನೀವು ಓಬಿಸಿ ಹುಡುಗಗನ್ನ ಟಾರ್ಗೆಟ್ ಮಾಡಿದ್ದೀರಾ? ನಾನು ಒಬ್ಬನೇ ಒಕ್ಕಲಿಗ ನಾಯಕ ಡಿಕೆಶಿ ಪರವಾಗಿ ನಿಂತಿರೋದು. ನಿಮಗೆ ಕ್ಷೇತ್ರದಲ್ಲಿ ಒಕ್ಕಲಿಗರೂ ಬೆಳೀಬಾರದೂ, ಬೇರೆಯವರೂ ಬೆಳೆಯಬಾರದು? ಖಬರ್ದಾರ್ ಕುಮಾರಣ್ಣ ನಿಮ್ಮ ಚೇಲಾಗಳಿಗೆ ಹೆದರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.





