ಕನಸು ಹೊತ್ತ ಸಾಕಷ್ಟು ಕಂದಮ್ಮಗಳು ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಹುಟ್ಟೂರು ಬಿಟ್ಟು ನಗರಕ್ಕೆ ಹೋಗುತ್ತಾರೆ. ಇದೆ ರೀತಿ ಕಲಾ ಎನ್ನುವ ಯುವತಿ ಊರು ಬಿಟ್ಟು ಸಿಟಿಗೆ ಹೋಗುತ್ತಾಳೆ. ಕಲಾಳ ಶಿಕ್ಷಣದ ಜೀವನ ಮದುವೆಯಾಗಿ ಸಂಸಾರ ಮಾಡುವಷ್ಟು ಸರಳವಾಗಿರುವುದಿಲ್ಲ. ನಗರದ ಗರ್ಭದಲ್ಲಿ ಹೊಕ್ಕ ಅವಳಿಗೆ ಒದ್ದಾಟ ಹೆಚ್ಚಿನ ಮಟ್ಟದಲ್ಲಿಯೇ ಇತ್ತು.
ಇಷ್ಟೆಲ್ಲಾ ಇದ್ದರೂ ಕಲಾ ಶಿಕ್ಷಣದ ಸವಿಯನ್ನು ಸವಿಯಲು ಕಾಲೇಜ್ ಸೇರಿಕೊಳ್ಳುತ್ತಾಳೆ. ಕಾಲೇಜ್ ಅಲ್ಲಿ ಅವಳಿಗೆ ಸಮಸ್ಯೆಯ ಸವಾಲುಗಳು ಸಾಲು ಗಟ್ಟಿ ನಿಂತಿರುತ್ತಿದ್ದು, ಅವಳ ಹಳ್ಳಿಯ ವೇಷ ಭಾಷೆಗೆ ಸಹಪಾಠಿಗಳು ಸರಿಯಾಗಿ ಸಹಕರಿಸುವುದಿಲ್ಲ. ಅಲ್ಲಿಯ ಗುರುಗಳು ಬುದ್ಧಿವಂತ ವಿದ್ಯಾರ್ಥಿಗಳಿಗೆ ಬೆಂಬಲಿಸುವುದಕ್ಕಿಂತ ಬ್ಯೂಟಿಪುಲ್ ಆಗಿರುವ ಯುವತಿಯರಿಗೆ ಬೆನ್ನು ಎಲುಬಾಗಿ ನಿಲ್ಲುತ್ತಿದ್ದರು.
ಹೀಗಿರುವಾಗ ಕಲಾಗೆ ಕಿರಿಗಳು ಸೆಡ್ಡು ಹೊಡೆಯುತ್ತಲೇ ಇರುತ್ತಿದ್ದು, ಇತ್ತ ವಸತಿ ನಿಲಯದಲ್ಲಿ ವಾಸವಿದ್ದ ಅವಳಿಗೆ ಸರಿಯಾದ ರೂಮೆಟ್ಸ್ ದೊರಕುವುದಿಲ್ಲ.ಪ್ರೀತಿ ಪ್ರೇಮ ಅಂತ ಬದುಕನ್ನೇ ಬಲಿಯಾಗಿ ಕೊಟ್ಟವರ ನಡುವೆ ಇವಳ ಸ್ಥಿತಿ ಕಷ್ಟಕರವಾಗಿದ್ದು, ಏಕಾಂತ ಬಿಟ್ಟರೆ ಓದು ಇವಳಿಗೆ ಆಸರೆಯಾಗಿತ್ತು. ಅದಕ್ಕೂ ಸಹ ಕೆಡುಕಾಲ ಶೂರುವಾಗಿಯೇ ಬಿಟ್ಟಿತ್ತು.
ಕಾಲೇಜಿನಲ್ಲಿ ಕೆಲ ಕೆಟ್ಟ ಹುಡುಗೀಯರ ವರ್ತನೆಗೆ ಬೇಸತ್ತು ಊರಿಗೆ ಮರಳಿ ಹೋಗುವುದಕ್ಕೆ ನಿರ್ಧಾರ ಮಾಡುತ್ತಾಳೆ ಆದ್ರೆ ಅದು ಆಗುವುದಿಲ್ಲ. ಕೊನೆಗೆ ತನಗೆ ತಾನೇ ಸಮಾಧಾನ ಮಾಡಿಕೊಂಡು ಇರುತ್ತಾಳೆ. ಕಾಲೇಜ್,ಹಾಸ್ಟೇಲ್ ಓದು ಬರಹ ಇಷ್ಟೆ ಅವಳ ದಿನಚರಿಯಾಗಿತ್ತು. ಇದನ್ನು ಕಂಡ ಸ್ನೇಹಿತರು ಅವಳ ಜೊತೆ ಅಂತರ ಕಾಯ್ದುಕೊಳ್ಳುತ್ತಾರೆ.
ಇತ್ತ ಹಾಸ್ಟಲ್‌ಗೆ ಬಂದ್ರೆ ಕಾಲ್ ಅಲ್ಲಿ ಕಾಲ ಕಳೆಯುವ ಹುಡುಗೀಯರು ಇರುತ್ತಾರೆ. ಇದರ ನಡುವೆ ಮುಗ್ಧ ಕಲಾಳ ಆರೋಗ್ಯ ಅದೆಗೆಟ್ಟು ಹೋಗುತ್ತದೆ. ರೂಂ ಅಲ್ಲಿ ರೂಮೆಟ್ ಒಬ್ಬಳು ಇವಳ ಜೂನಿಯರ್ ಆಗಿದ್ದಳು. ಸ್ವಲ್ಪ ಸೌಂದರ್ಯ ಹೊಂದಿದ ಕಾರಣ ಅವಳಿಗೆ ಕಾಲೇಜ್ ಅಲ್ಲಿ ರಾಜ ಮರ್ಯಾದೆ ಇತ್ತು. ಎಲ್ಲ ಶಿಕ್ಷಕರು ಅವಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಯುತ್ತಾ ಇದ್ದರು.ಈ ಹುಡುಗಿಯ ಕೆಲಸ ಅಪಪ್ರಚಾರ ಮಾಡುವುದಾಗಿತ್ತು.ಉದ್ದೇಶ ಪೂರ್ವಕವಾಗಿ ಕಲಾಗೆ ತೊಂದ್ರೆ ಕೊಡುವುದು. ಇಲ್ಲ ಸಲ್ಲದ ವಿಚಾರಗಳನ್ನು ಶಿಕ್ಷಕರಿಗೆ ಹೇಳುವುದು ಮಾಡುತ್ತಾ ಇದ್ದಳು. ಇದನ್ನು ಕಂಡ ಕಲಾಗೆ ಜಿವನವೇ ಬೇಸರ ಎನಿಸಿತ್ತು.
ಕೊನೆಗೂ ತನ್ನ ಮನಸ್ಸಲ್ಲಿ ಆ ಹುಡುಗಿಗೆ ಶಾಪ ಹಾಕುತ್ತಾಳೆ. ಒಳ್ಳೆಯವರಿಗೆ ಮಸಿ ಬಳೆಯುವ ಈ ಹುಡುಗಿ ಒಂದು ದಿನ ಎಲ್ಲರ ಮುಂದೆ ಮರ್ಯಾದೆ ಕಳೆದುಕೊಂಡು ಹೋಗಲಿ ಎನ್ನುತ್ತಾಳೆ. ಆ ಕಾಲ ಬಹು ಬೇಗ ಹತ್ತಿರ ಬಂದೇ ಬಿಡುತ್ತದೆ.ಆ ಹುಡುಗಿ ಕೇವಲ ಕಲಾಗೆ ಮಾತ್ರ ತೊಂದ್ರೆ ಕೊಡುತ್ತಾ ಇರಲಿಲ್ಲ. ದುಡ್ಡಿಗಾಗಿ ಹುಡುಗರ ಜೀವನದಲ್ಲಿ ಸರಸವಾಡುತ್ತ ಇರುತ್ತಾಳೆ. ಆದ್ರೆ ಒಂದು ದಿನ ಅದೇ ಹುಡುಗರು ಕಾಲೇಜ್ ಗೆ ಬಂದು ಕಿರಿ-ಕಿರಿ ಹುಡುಗೀಯ ಮರ್ಯಾದೆ ಹರಾಜು ಹಾಕಿ,ಹೊಡೆಯುವುದು ಬಡಿಯುವುದು ಮಾಡುತ್ತಾರೆ.
ಇದರ ಮಾಹಿತಿ ತಿಳಿದ ಕಲಾ ಕೊನೆಯಲ್ಲಿ ಇವಳ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸುತ್ತಾಳೆ. ಎಷ್ಟೇ ಆಗಲಿ ಅವಳು ಹೆಣ್ಣು ಮಗಳು ಈ ರೀತಿ ಆಗಬಾರದಿತ್ತು ಎಂದು ಮನದಲ್ಲಿ ನೊಂದುಕೊಳ್ಳುತ್ತಾಳೆ. ಸುಮಾರು ಜನ ತಂದೆ ತಾಯಿಗಳಿಗೆ ಈ ವಿಷಯ ಗೊತ್ತಿರುವುದಿಲ್ಲ. ಮಕ್ಕಳು ಓದಿ ಒಳ್ಳೆಯ ಹೆಸರು ತಂದ್ರೆ ಸಾಕು ಎನ್ನುತ್ತಾ ಇರುತ್ತಾರೆ. ಆದ್ರೆ ಅಲ್ಲಿಯ ಜೀವನ, ಕೆಲ ಯುವತಿಯರ ನಡುವಳಿಕೆ ಕಠಿಣವಾಗಿರುತ್ತದೆ.
ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು- ಯಾರಿಗೆ ಆದ್ರೂ ಬೇಜಾರ್ ಮಾಡಬೇಕು ಅಂದ್ರೆ ಸ್ಪಲ್ಪ ಯೋಚಸಿ ಬೇಜಾರ್ ಮಾಡಿ.ನೀವು ಅವರಿಗೆ ಮಾತ್ರ ನೋವು ಮಾಡುವುದಿಲ್ಲ, ನೀವು ಮಾಡುವ ಬೇಸರ ಅವರ ಬದುಕಿಗೆ ಬರೆ ಎಳೆಯುವಂತೆ ಮಾಡುತ್ತದೆ. ಇದಾದ ಕೆಲವು ದಿನಗಳ ನಂತರ ಕಲಾಗೆ ಒಳ್ಳೆಯ ಸರ್ಕಾರಿ ನೌಕರಿ ಸಿಗುತ್ತದೆ. ಅವಳಿಗೆ ಕಿರಿ ಕಿರಿ ಮಾಡಿದವರು ಮನೆಯಲ್ಲಿ ಖಾಲಿ ಉಳಿಯುತ್ತಾರೆ. ಕರ್ಮ ಸವಾರಿ ಮಾಡುತ್ತಲೇ ಇರುತ್ತದೆ ಎನ್ನುವುದಕ್ಕೆ ಈ ನೈಜ ಕಥೆ ಸಾಕ್ಷಿಯಾಗಿದೆ.
ಇನ್ನೂ ಹಲವಾರು ಈ ರೀತಿಯ ಲೇಖನಗಳಿಗಾಗಿ ಕನ್ನಡ ಪಾಕೆಟ್ ವೆಬ್ ಸೈಟ್ ಅನ್ನು ನೋಡುತ್ತಾ ಇರಿ, ಇಲ್ಲಿ ಬರುವ ಸ್ಟೋರಿಗಳನ್ನು ಓದಿ .





