ಮಾಲಿಕರೇ ನೀವು ಯಾಕೆ ಇಷ್ಟು ಕ್ರೂರಿಗಳು?

ಇವತ್ತೀನ ದಿನ ನಮ್ಮ ದೇಶದಲ್ಲಿ ಓದಿಗೆ ತಕ್ಕ ಹಾಗೆಯೇ ಕೆಲಸ ಸಿಗುತ್ತದೆಯೇ ಇಲ್ಲವೋ ಗೋತ್ತಿಲ್ಲ. ಆದರೆ ಸಿಕ್ಕಿರುವ ಕೆಲಸವನ್ನಾದರೂ ನೆಮ್ಮದಿಯಿಂದ ಮಾಡಬೇಕು ಎಂದರೆ ಆದೂ ಸಹ ಆಗುವುದಿಲ್ಲ. ಕಾರಣ ಪ್ರತಿಯೋಂದು ಕೆಲಸದಲ್ಲಿ ಮಾಲಿಕರ ದೌರ್ಜನ್ಯವನ್ನು ಕಾಣಬೇಕಾಗಿದೆ ಎಲ್ಲಿ ಒಬ್ಬ ಒಳ್ಳೆಯ ಮಾಲಿಕನಾಗಿರುತ್ತಾನೋ ದೇವರಿಗೆ ಗೋತ್ತು ಕಾರ್ಮಿಕರು ತಪ್ಪುಗಳನ್ನು ಮಾಡಿದರೆ ಸಾಕು ಅವರಿಗೆ ಹಿಗ್ಗಾ ಮುಗ್ಗಾ ಬೈಯುವುದು ಇಲ್ಲವೆ ಸಂಬಳವನ್ನೇ ಕಟ್ ಮಾಡಿ ಬಿಡುತ್ತಾರೆ.

ಬಾಯಿಗೆ ಬಂದAತೆ ಬೈಯಿಸಿಕೊಂಡರೂ ಸಹ ಕಾರ್ಮಿಕರು ಬೆಳಗ್ಗೆ ಎದ್ದು ಕ್ಷಣನೇ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರು ಇರುತ್ತಾರೆ. ಯಾಕೆ ಗೊತ್ತೇ? ಕೆಲಸಕ್ಕೆ ಹೋಗದಿದ್ದರೆ ಕುಟುಂಬದವರ ಹೊಟ್ಟೆ ತುಂಬುವುದಿಲ್ಲ. ನಮ್ಮ ದೇಶದಲ್ಲಿ ಓದಿಗೆ ತಕ್ಕಂತೆೆ ಉದ್ಯೋಗ ಬೇಕು ಅಂತನೂ ಹೇಳುವುದಿಲ್ಲ. ಮತ್ತು ದುಡಿತಕ್ಕೆ ತಕ್ಕಂತಹ ಸಂಬಳವನ್ನು ನೀಡಿ ಅಂತನೂ ಕೇಳುವುದಿಲ್ಲ. ಆದರೆ ನಮಗೆ ನೆಮ್ಮದಿ ಮತ್ತು ಗೌರವನ್ನು ನೀಡಿ ಎಂದು ಕೇಳುತ್ತೇವೆ. ನ್ಯಾಯವಾಗಿ ಕೆಲಸವನ್ನು ಮಾಡಿದರೂ ಸಹ ನಾಯಿಗಿಂತ ಕಡೆಯಾಗಿ ಬಾಳುವಂತೆಯಾಗಿದೆ. ಹೋಟೆಲ್‌ನಲ್ಲಿ ಮಾಲಿಕರು ತಮ್ಮ ಕಾರ್ಮಿಕರಿಗೆ ದಬ್ಬಾಳಿಕೆ ಮಾಡುವುದು ಆಫಿಸ್‌ನಲ್ಲಿ ಮ್ಯಾನೆಜ್‌ರ ತನ್ನ ಕೈ ಕೆಳಗೆ ಇರುವ ಕೆಲಸಗಾರರಿಗೆ ಬೈಯುವುದು ಮಾಡುತ್ತಾರೆ.

ತಪ್ಪುಗಳನ್ನು ಮಾಡಿದರೆ ಬೈಯಬೇಕು ಅಂದಾಗ ತಪ್ಪುಗಳನ್ನು ಮಾಡುವುದಿಲ್ಲ ಎಂದು ಮಾಲಿಕರು ತಿಳಿದುಕೊಂಡಿರುತ್ತಾರೆ ಇಲ್ಲವೇ ಬೈಯಿದಿದ್ದರೆ ಯಾರು ಕೆಲಸ ಮಾಡುವುದಿಲ್ಲವೆಂದು ತಮಗೆ ತಾವೇ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ.É. ರೀ ಸ್ವಾಮಿ ಪ್ರೀತಿಯನ್ನು ಕೊಟ್ಟು ನೋಡಿ ಅವರು ಸಹ ಎಲ್ಲಾವನ್ನು ಗೆಲ್ಲಬಹುದು ಅಲ್ಲವೇ? ಇನ್ನು ಲಾರಿ ಚಾಲಕರುಗಳ ಪರಿಸ್ಥಿತಿ ಯಾರು ಬಲ್ಲವರು ನಾವು ಪ್ರತಿಯೋಂದು ಸರ್ಕಾರಿ ಉದ್ದೇಗಳಲ್ಲಿ ಇರುವವರನ್ನೆ ದೇವರು ಎಂದು ಪೂಜಿಸುತ್ತೇವೆ ಆದರೆ ಈ ಲಾರಿ ಚಾಲಕರು ನಮ್ಮ ದೇಶದಲ್ಲಿ ಪ್ರತಿಯೊಂದು ವಸ್ತುಗಳನ್ನು ರಪ್ತು ಆಮುದು ಮಾಡುತ್ತಾರೆ. ಕೆಲವೊಂದು ಸಾರಿ ಊಟವಿಲ್ಲದೆ ನೀರು ಇಲ್ಲದೆ ನಿದ್ದೆ ಮತ್ತು ಸ್ನಾನ ಇಲ್ಲದೆ ಕೆಲಸವನ್ನು ಮಾಡುತ್ತಾರೆ

. ಅವರ ಜೀವನದಲ್ಲಿ ಸ್ವರ್ಗ ಎನ್ನುವುದು ನೆಮ್ಮದಿಯಾಗಿರುತ್ತದೆ ಆದರೆ ಅದೇ ಸಿಗುವುದು ಸಹ ಅಪರೂಪವಾಗಿದೆ. ಆದರೆ ಅವರನ್ನು ನಾವು ಮಾತ್ರ ತುಂಬಾ ಕೆವಲವಾಗಿ ಕಾಣುತ್ತೇವೆ. ಹೊರತು ಅವರನ್ನು ಗೌರವ ದೃಷ್ಟಿಯಿಂದ ಕಾಣುವುದು ಕಡಿಮೆ ಮತ್ತು ಅವರು ದಾರಿಯಲ್ಲಿ ಲೊಡಿಂಗ್ ಮಾಡುವಾಗ ಮತ್ತು ಗಾಡಿ ಕೆಟ್ಟಾಗ ಪೋಲಿಸ್‌ರ ಕಡೆಯಿಂದ ಒದೆ ಬಿಳುತ್ತದೆ. ಇಲ್ಲವೇ ಪೋಲಿಸ್ ಬಾಯಿಂದ ಅವಾಚ್ಯ ಶಬ್ದಗಳ ಸುರಿಮಳೆಯನ್ನು ಸಹ ಕೇಳುತ್ತಾರೆ. ಎಲ್ಲಾ ಮುಗಿದ ಮೇಲೆ ಮಾಲಿಕನತ್ತ ಸಂಬಳಕ್ಕೆ ಬರುತ್ತಾರೆ ಅಷ್ಟರಲ್ಲಿ ಲಾರಿಗೆ ಏನಾದರೂ ತೊಂದರೆಯಾಗಿದ್ದರೆ ಇಲ್ಲವೋ ಯಾವುದೋ ಗಾಡಿ ಗುದ್ದಿ ಲಾರಿಗೆ ಸ್ಪಲ್ಪ ಪೆಟ್ಟು ಬಿದ್ದಿದ್ದರೆ ಪೇಮೆಂಟ್‌ಕಟ್ ಮಾಡುತ್ತಾರೆ ಇಲ್ಲವೇ ಇವರು ಸಹ ಬಾಯಿಗೆ ಬಂದAತೆ ಬೈಯುತ್ತಾರೆ.

ಇಷ್ಟೇಲ್ಲಾ ಆದರು ಅವರು ಅಲ್ಲಿಯೇ ಕೆಲಸ ಮಾಡಲು ಕಾರಣ ಬೇರೆ ಕೆಲಸ ಸಿಗುವುದಿಲ್ಲ ಎಂದು ಅಲ್ಲವೇ ಅಲ್ಲಾ? ಎಲ್ಲಾ ಕಡೆ ದಬ್ಬಾಳಿಕೆ ಇದ್ದೆ ಇದೆ ಅಂತಾ ಹೊಂದಿಕೊAಡು ಬಿಡುತ್ತಾರೆ. ಚಾಲಕರ ಜೀವನ ನೀರಿನ ಮೇಲೆ ಗುಳ್ಳೆ ಇದ್ದಂತೆ ಅವರಿಗೂ ಸ್ವಲ್ಪ ಜಾಸ್ತಿ ಗೌರವನ್ನು ನೀಡೋಣ ಮಾಲಿಕರೇ ದಯಬಿಟ್ಟು ಕಾರ್ಮಿಕರನ್ನು ನಿಮ್ಮ ಮನೆಯ ಮಕ್ಕಳಂತೆ ನೊಡಿಕೊಳ್ಳಿ. ಪ್ರತಿಯೊಂದು ಖಾಸಗಿ ಕಾರ್ಯಗಳೆ ಇಷ್ಟು ತಮಗೆ ಬೇಕಾದಗ ಕೆಲಸ ಕೊಟ್ಟು ಬೇಡವಾದಗ ತಿಪ್ಪೆಯಲ್ಲಿ ಪುಟ್ಟ ಮಗುವನ್ನು ಬಿಸಾಕಿದಂತೆ ಬಿಸಾಕುತ್ತಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post