ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ನಮ್ಮ ಒಪ್ಪಂದ ಇದೆ – ಪ್ರಿಯಾಂಕ್ ಖರ್ಗೆ

Priyank Kharge

ಬೆಂಗಳೂರು : ನಿರಂತರವಾಗಿ ಸೈಬರ್ ದಾಳಿ, ಹುಸಿ ಕರೆಗಳು ಇದಕ್ಕೆ ಅಗತ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿದ್ದೇವೆ. ಮತ್ತಷ್ಟು ನಿಗಾ ಇಡುವ ಕೆಲಸ ಮುಂದುವರೆಸುತ್ತೇವೆ. ಹುಸಿ ಕರೆ, ಇಮೇಲ್ ಗಳನ್ನ ಪತ್ತೆ ಹಚ್ಚೋದು ಕಷ್ಟ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇಸ್ರೋಗೆ ಹುಸಿ ಬಾಂಬ್ ಬೆದರಿಕೆ ಬಂದ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಹುಸಿ ಬಾಂಬ್ ಕರೆಗಳು , ಇಮೇಲ್‌ಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೂ ಹುಸಿ ಬಾಂಬ್ ಕರೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಮೂಲ ಕಂಡು ಹಿಡಿಯುವುದು ಕಷ್ಟ. ಆದರೂ ಪ್ರಯತ್ನ ಮಾಡ್ತೀವಿ. ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ನಮ್ಮ ಒಪ್ಪಂದ ಇದೆ. ಅಂತಹದ್ದು ಏನಾದರೂ ಇದ್ದರೆ ಕೇಂದ್ರದ ಸಹಾಯ ಪಡೆಯುತ್ತೇವೆ. ಐಪಿ ಅಡ್ರೆಸ್ ಬೇರೆ ಬೇರೆ ದೇಶದಲ್ಲಿ ಇರುವುದರಿಂದ ಮ್ಯಾಪ್ ಮಾಡಲು ಕಷ್ಟ ಆಗುತ್ತದೆ. ಆದರೆ ಇದನ್ನು ತಡೆ ಹಿಡಿಯೋದು ನಮ್ಮ ಜವಾಬ್ದಾರಿ ಎಂದರು.

ಆಗಾಗ ಇಂತಹ ಹುಸಿ ಬೆದರಿಕೆಗಳು ಬರುತ್ತದೆ. ವಿಮಾನ ನಿಲ್ದಾಣ ಇರಬಹುದು, ಥರ್ಮಲ್ ಪವರ್ ಪ್ಲ್ಯಾಂಟ್ ಇರಬಹುದು.‌ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಇನ್ನು SIR ವಿಚಾರವಾಗಿ ಪ್ರತಿಕ್ರಿಯಿದ ಅವರು, ಪ್ರಕ್ರಿಯೆಯಲ್ಲಿ ಲೋಪ ಆಗಿದ್ದರೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಲಿ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಚುನಾವಣಾ ಆಯೋಗ ಇದೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಎಲೆಕ್ಷನ್ ಕಮೀಷನ್‌ ಮಾಡುವ ಕೆಲಸ ಬಿಜೆಪಿ-ಜೆಡಿಎಸ್ ಮಾಡುತ್ತಾ? ಚುನಾವಣಾ ಆಯೋಗ BLOಗಳಿಂದ ವಿವರಣೆ ಕೇಳುತ್ತೆ ಎಂದು ಹೇಳದ್ದಾರೆ.

ಸಿಎಂ ಪ್ರೇರಣೆಯಿಂದ ಆಗ್ತಿದೆ ಎಂಬ ಹೆಚ್‌ಡಿಕೆ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಪ್ರತಿ ಬೂತ್ ನೋಡಲು ಆಗುತ್ತಾ? ಲೋಕಲ್ ಲೀಡರ್ಸ್ ಯಾರೋ ಪ್ರಕ್ರಿಯೆ ಬೇಗ ಆಗುತ್ತದೆ ಅಂತ ಹಾಗೆ ಮಾಡಿರಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಬಂದಿಲ್ಲ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post