ಸಿದ್ದು ಹಾಗೂ ಸತೀಶ್ ಜಾರಕಿಹೊಳಿ ನಡುವಿನ ಸಂಬಂಧ ಹಳಸಿದೆ: ವಿಚಾರಕ್ಕೆ ಸ್ಪಷ್ಟನೆ ನೀಡಿದ ಜಾರಕಿಹೊಳಿ

ಬೆಂಗಳೂರು: ರಾಜಕೀಯ ವಲಯದಲ್ಲಿ ಕೆಲ ಗಾಸಿಫ್‌ ಚರ್ಚೆಗಳು ಸದ್ದು ಮಾಡುತ್ತಲೇ ಇರುತ್ತಿದ್ದು,ಇತ್ತ ಬಿಜೆಪಿಗರ ನಾಯಕರಲ್ಲಿ ಹೊಂದಣಿಕೆ ಕಂಡು ಬರುತ್ತಿಲ್ಲ. ಈ ವಿಚಾರ ರಾಜ್ಯದಲ್ಲಿರುವವರಿಗೆಲ್ಲಾ ಗೊತ್ತು ಆದರೆ, ಕೈ ಪಕ್ಷದಲ್ಲಿಯೂ ಇಂತಹದೊಂದು ಸಮಸ್ಯೆ ಎದುರಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಸಂಬಂಧ ಕೆಟ್ಟು ಹೋಗಿದೆ ಇವರ ಸಂಬಂಧ ಹಳಸಿದ ಅನ್ನದ ರೀತಿ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸತೀಶ್ ಜಾರಕಿಹೊಳಿ ಅವರು ಸಹಿ ಸಂಗ್ರಹಿಸಿದ್ದರು ಎನ್ನುವ ಆರೋಪ ಕೇಳಿಬಂದಿದ್ದವು.

ಇದು ಇಬ್ಬರು ನಾಯಕರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ, ಸತೀಶ್ ದೂರ ಇರುವ ವಿಡಿಯೋವೊಂದು ವೈರಲ್ ಆಗಿದೆ.

ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಿದ್ದಂತೆಯೇ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನಡುವೆ ಆತ್ಮೀಯತೆ ಇಲ್ಲ. ಹೊಂದಾಣಿಕೆ ಇಲ್ಲ ಒಬ್ಬರಿಗೆ ಒಬ್ಬರು ಮಾತನಾಡುವುದಿಲ್ಲ, ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನವ ಗುಸು ಗುಸು ರಾಜ್ಯ ರಾಜಖಾರಣದಲ್ಲಿ ಹರಿದಾಡುತ್ತಿದೆ.

ಸತೀಶ್ ದೂರ ಇರುವ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಇದಕ್ಕೆ ಇದೀಗ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. 10 ವರ್ಷದಿಂದ ಸಿದ್ದರಾಮಯ್ಯ ಹೇಗಿದ್ದಾರೋ ಈಗಲೂ ಹಾಗೆ ಇದ್ದಾರೆ. ಜೊತೆಯಲ್ಲಿ ಕೂತಿಲ್ಲ ಅಂದಾಕ್ಷಣ ಮಾತನಾಡಲ್ಲ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ. ಹಿಂದಿನ ಎಲ್ಲಾ ವಿಡಿಯೋಗಳನ್ನು ನೋಡಿದರೂ ಹಾಗೆಯೇ ಇವೆ. ಹಿಂದೆ ಹೇಗೆ ಇದ್ದೇವೆಯೋ ಈಗಲೂ ನಾವು ಹಾಗಿಯೇ ಇದ್ದೇವೆ. ನಿನ್ನೆ ಕಾರ್ಯಕ್ರಮದಲ್ಲಿ ಸೀನಿಯರ್ ಬರ್ತಾರೆಂದು ಕುಳಿತಿರಲಿಲ್ಲ.

ಇದರೊಂದಿಗೆ ಅಂತೆ-ಕಂತೆಗಳಿಗೆ ತೆರೆ ಎಳೆದ ಅವರು ಮಾಜಿ ಸಿಎಂ ಸಿದ್ದು ಹಿರಿಯ ನಾಯಕ ಅವರ ಮೇಲೆ ಗೌರವ ಇದ್ದೇ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others