ಕರೂರ್ : ಮಾಜಿ ಪ್ರಸಿದ್ಧ ನಟ ಚಂದ್ರಶೇಖರನ್ ಜೋಸೆಫ್ ವಿಜಯ್ ಅವರು ಸದ್ಯಕ್ಕೆ ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಇವರು ಸಿಎಂ ಸ್ಥಾನ ಪಡೆದ ನಂತರ ಸಾಕಷ್ಟು ಬದಲಾವಣೆಯತ್ತ ಮಹತ್ತರವಾದ ಹೆಜ್ಜೆಯನ್ನು ಹಾಕುತ್ತಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ ವಾಸ್ತವದಲ್ಲಿ ತಮಿಳುನಾಡನ್ನು ಆಡಳಿತ ಮಾಡುತ್ತಿರುವ ಇವರು ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ವಿಚಾರಕ್ಕೆ ಸಖತ್ ಹೊಂದಿಕೆಯಾಗುತ್ತಿದ್ದಾರೆ.
ಹೌದು ಇಂದು ತಮಿಳುನಾಡಿನ ಕರೂರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. “ನಿಮ್ಮ ಬಳಿ ಯಾರೇ ಲಂಚ ಕೇಳಿದರೂ ನೀವು ಅದನ್ನು ಕಟ್ಟುನಿಟ್ಟಾಗಿ ನಿರಾಕರಿಸಬೇಕು” ಎಂದಿದ್ದು, ನಿಮ್ಮ ಜೊತೆಗೆ ನಾನಿದ್ದೇನೆ. ಲಂಚ ಕೊಡುವಂತಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಾಗೆ ನಿರಾಕರಿಸುವ ಜನರ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಂಪೂರ್ಣ ಬೆಂಬಲವಾಗಿ ನಿಲ್ಲಲಿದ್ದೇನೆ ಎಂಬ ಭರವಸೆಯನ್ನೂ ಜನರಿಗೆ ನೀಡಿದ್ದಾರೆ.
ಈ ಸಮಯದಲ್ಲಿ ಸಿಎಂ ವಿಜಯ್, ತಮ್ಮ 55 ದಿನಗಳ ಆಡಳಿತದಲ್ಲಿ ಮಾಡಿದ ಬದಲಾವಣೆಗಳನ್ನು ಪಟ್ಟಿ ತಯಾರಿ ಮಾಡಿ ಅದರ ಬಗ್ಗೆ ವಿವರಿಸಿದ್ದಾರೆ. “ಲಂಚ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಅದು ನಮ್ಮ ರಕ್ತದಲ್ಲಿ ಬೇರೂರಿದೆ ಎಂದು ಹೇಳುವವರ ಬಾಯಿ ಮುಚ್ಚಿಸಲು ಇಂದು ಸರ್ಕಾರಿ ಕಚೇರಿಗಳಲ್ಲಿ ಒಂದು ಪೈಸೆ ಲಂಚ ಅಥವಾ ಭ್ರಷ್ಟಾಚಾರವಿಲ್ಲದೆ ಕೆಲಸಗಳು ಟಕಟಕನೆ ನಡೆಯುತ್ತಿವೆ” ಎಂದು ಹೇಳಿದರು. ಪ್ರಸ್ತುತ ಆಡಳಿತದಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರನ್ನು ಸರಿಯಾದ ಗೌರವ ಮತ್ತು ಸೂಕ್ತ ಆಸನಗಳೊಂದಿಗೆ ನಡೆಸಿಕೊಂಡಿದ್ದಕ್ಕಾಗಿ ಅಧಿಕಾರಿಗಳನ್ನು ವೃದ್ಧರೊಬ್ಬರು ಹೊಗಳಿದ್ದನ್ನು ಅವರು ಹಂಚಿಕೊಂಡರು.
ಲಂಚ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾನು ಸದಾ ಸಿದ್ಧ ಯಾವದೇ ಅಧಿಕಾರಿಗಳು ನಿಮ್ಮ ಹತ್ತಿರ ಲಂಚ ಕೇಳಿದ್ರೆ ನೀಡಬೇಡಿ ಆ ರೀತಿಯ ಸಮಸ್ಯೆ ಬಂದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿ ಎನ್ನುವ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದಲ್ಲಿ ತಮಿಳುನಾಡು ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಒಬ್ಬ ನಾಯಕನಿಂದ ಬದಲಾವಣೆಯಾಗುತ್ತಿದ್ದು, ಇದು ಪ್ರತೀ ರಾಜ್ಯದಲ್ಲಿ ಆದರೆ ಜನ ನೆಮ್ಮದಿಯಿಂದ ಬದಕುತ್ತಾರೆ. ಅಷ್ಟೇ ಅಲ್ಲದೇ ಹಣದ ವ್ಯಾಮೋಹ ಅಧಿಕಾರಿಗಳಿಗೂ ಕಡಿಮೆಯಾಗುತ್ತದೆ.
ಲಂಚದ ಹೆಸರಿನಲ್ಲಿ ಬಡವರ ಹೊಟ್ಟೆಮೇಲೆ ಹೊಡೆದು ಬದುಕುವ ಅಧಿಕಾರಿಗಳಿಗೆ ಭಯ ಎಂದರೆ ಏನು ಅಂತ ಪ್ರತಿಯೊಬ್ಬ ನಾಯಕರು ತಿಳಿಸಿಕೊಡಬೇಕಿದೆ. ಇತ್ತ ತಮಿಳುನಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಸಂತಸದ ವಿಷಯವಾಗಿದೆ. ಬೇರೆ ರಾಜ್ಯದ ಜನರ ನಮ್ಮ ರಾಜ್ಯದಲ್ಲಿಯೂ ಇಂತಹ ಸಿಎಂ ಬೇಕು ಎಂದು ಬಯಸುತ್ತಿದ್ದಾರೆ.





