ಬದುಕಿಗೆ ಭರವಸೆಯಾಗಬೇಕಾದ ವೈದ್ಯ ಅಡ್ಡದಾರಿ ಹಿಡಿದಿದ್ದು ಯಾಕೆ? ಇಲ್ಲಿದೆ ನೋಡಿ ಮಾಹಿತಿ

ಜನಜೀವನ-ಜೀವ ಚೆನ್ನಾಗಿ ಇರಬೇಕು ಎಂದರೆ ಮೊದಲು ನಮ್ಮ ಆರೋಗ್ಯ ಉತ್ತಮವಾಗಿರಬೇಕು. ಕೆಲವೊಬ್ಬರ ಜೀವನದಲ್ಲಿ ಎಷ್ಟೋ ಸಲ ಅನಾರೋಗ್ಯದಿಂದ ಸತ್ತೇ ಹೋಗುತ್ತೇವೆ ಎಂದು ಭಾವಿಸುತ್ತಿರುತ್ತಾರೆ. ಆಗ ಅವರ ಬದುಕಿಗೆ ಭರವಸೆಯಾಗಿ ವೈದ್ಯರು ಎಂಟ್ರಿಯಾಗುತ್ತಾರೆ. ಹೌದು ಪ್ರಸ್ತುತ ಸಮಾಜದಲ್ಲಿ ಡಾಕ್ಟರ್‌ ಪಾತ್ರ ಪ್ರಮುಖವಾದದ್ದು, ವೈದ್ಯ ಎಂದರೆ ದೇವರು ಎಂದು ಭಾವಿಸುತ್ತೇವೆ. ಇಲ್ಲಿ ನಿಜ ದೇವರು ಲಂಚ,ದುಡ್ಡು ಕೇಳುತ್ತಾನೋ, ಇಲ್ಲವೋ ಗೊತ್ತಿಲ್ಲ? ಆದರೆ ಆರೋಗ್ಯ ಸುಧಾರಣೆಗಾಗಿ ಹಲವು ವೈದ್ಯರಿಗೆ ದುಡ್ಡಿನ ಅಭಿಷೇಕ ಮಾಡುತ್ತಲೇ ಇರಬೇಕು.

ಹೌದು ಎಲ್ಲಿಯೋ ಬೆರಳೆಣಿಕೆಯಷ್ಟು ರೋಗಿಗಳನ್ನು ಪ್ರೀತಿಯಿಂದ ಕಡಿಮೆ ಕರ್ಚುನಿಂದ ನೋಡಿಕೊಳ್ಳುವವರುಂಟು, ಇನ್ನು ಕೆಲವು ವೈದ್ಯರನ್ನು ನೋಡುವುದಾರೆ, ಹಣಕ್ಕಾಗಿ ಏನು ಬೇಕಾದ್ರು ಮಾಡುತ್ತಾರೆ, ಮೋಸದ ಜೊತೆ ಸ್ನೇಹ ಮಾಡಿ ಅಮಾಯಕರನ್ನು ಬಲಿಪಶು ಮಾಡುತ್ತಲೇ ಇರುತ್ತಾರೆ. ಯಾಕಪ್ಪ ಈ ವಿಚಾರ ಅಂತೀರಾ ಇಲ್ಲಿದೆ ನೋಡಿ ಒಂದು ಸ್ಟೋರಿ..

ಇಲ್ಲಿಯೊಬ್ಬ ವೈದ್ಯ ಭೂಪ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಸಿಸ್ಟಮ್ ವಿದ್ಯಾಭ್ಯಾಸ ಮಾಡಿ, ಕೆಪಿಎಂಸಿ ಕಾಯ್ದೆ ಅನುಗುಣವಾಗಿ ಆಯುರ್ವೇದ ಹಾಡಿಯಲ್ಲಿ ಪರವಾನಿಗೆ ಪಡೆದು ಇಂಗ್ಲೀಷ್ ಮೆಡಿಸನ್ ನೀಡುತ್ತಿದ್ದಾರೆ. ಇತನ ಕೆಟ್ಟ ಬುದ್ಧಿವಂತಿಗೆ ಬಡವರು ತುತ್ತಾಗುತ್ತಿದ್ದಾರೆ. ಇದು ತಪ್ಪು ಎಂದು ಗೊತ್ತಿದ್ದು ಈತ ಜನರಿಗೆ ಟೋಪಿ ಹಾಕುತ್ತಿರುವುದು ಬೇಸರ ತಂದಿದೆ.

ಇದಷ್ಟಲ್ಲದೇ ಈ ಕಾಯಕಕ್ಕೆ ಆಯುರ್ವೇದ ವೈದ್ಯನ ಸ್ನೇಹತರೊಬ್ಬರು ಬೆಂಬಲು ನೀಡುತ್ತಿದ್ದಾರೆ. ಆತನು ಕ್ಲಿನಿಕ್ ನ ಮಾಲೀಕನಾಗಿದ್ದಾನೆ. ಈತನು ಈ ವೈದ್ಯನಿಗೆ ಕಾವಲುಗಾರನಂತೆ ಮಾಲೀಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡಜನರಿಗೆ ಮೋಸ ಮಾಡುವುದಕ್ಕೆ ಸಖತ್‌ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಇಲ್ಲಿ ವೈದ್ಯನ ವೃತ್ತಿ ಒಂದಾರೇ ಇವರು ನೀಡುತ್ತಿರುವ ಮೆಡಿಷನ್‌ ಮತ್ತೊಂದಾಗಿದೆ. ಕ್ಲಿನಿಕ್ ನ ಮಾಲೀಕ ಸುತ್ತು ಮುತ್ತ ಈ ಕೆಲಸ ನಡೆಯುತ್ತಿದ್ದರೂ ಮಾಲೀಕ ಮಾತ್ರ ಎನು ತಿಳಿಯದಂತೆ ಗಪ್‌-ಚುಪ್‌ ಆಗಿದ್ದಾರೆ. ಇತ್ತ ಈ ವಿಚಾರಗಳು ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದರು ಸಹ ಏನು ಅರಿಯದ ಕಂದಮ್ಮಗಳಂತೆ ವರ್ತಿಸುತ್ತಿದ್ದಾರೆ.

ಆಯುರ್ವೇದನ ವೈದ್ಯನ ಕಾರ್ಯಕ್ಕೆ ಸಾರ್ವಜನಿಕರು ಬೇಸತ್ತಿದ್ದು, ಕೂಡಲೆ ಇವರ ವಿರುದ್ಧ ಕ್ರಮ ವಹಿಸಿ, ಸಾರ್ವಜನಿಕರ ಹಿತಾಕಾಯಬೇಕು ಎಂದು ಪಟ್ಟು ಹಿಡಿದಿದ್ದಾರೆ.. ಪಬ್ಲಿಕ್‌ ಬೇಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ಅಸ್ತು ಎನ್ನುತ್ತಾರಾ? ಇಲ್ಲವೇ ಅವರು ಸಹ ನಮಗೆ ಏನು ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಾರಾ? ಎನ್ನುವುದನ್ನು ಕಾದುನೋಡಬೇಕಿದೆ….

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others