ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲಾಗಿದ್ದು, ಜಿಲ್ಲಾ ಪಂಜಾಯಿತಿ ವ್ಯಾಪ್ತಿಯ 32 ಸಾವಿರ ಕರೆಗಳಲ್ಲಿ 50% ಕಡಿಮೆ ನೀರಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ 15 ದಿನಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೊಡಬೇಕಿದ್ದು, ಬರ ಪರಸ್ಥಿತಿ ಪರಿಶೀಲನೆಗೆ ತಂಡ ಕಳಿಸಲು ಪ್ರಧಾನಿಗಳಿಗೆ ಮನವಿ ಮಾಡಲಾಗಿದೆ ಪ್ರತಿ ತಾಲೂಕಿನಲ್ಲೂ ಅಧ್ಯಯನ ಮಾಡಿ ಪರಿಸ್ಥಿತಿ ಬಗ್ಗೆ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎಲ್ಲಾ ತಾಲೂಕಿನಲ್ಲಿ ಅಂತರ್ಜಲದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಜಿಲ್ಲಾ ಪಂಜಾಯಿತಿ ವ್ಯಾಪ್ತಿಯ 32 ಸಾವಿರ ಕರೆಗಳಲ್ಲಿ 50% ಕಡಿಮೆ ನೀರಿದೆ. 1 ಕೋಟಿ ಪ್ರತಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಬಳಸಲು ಸೂಚನೆ ನೀಡಲಾಗಿದೆ. ದುಡ್ಡಿನ ಕೊರತೆ ಇರದ ಹಾಗೇ ಮಾಡಲಾಗಿದೆ, ಶಾಸಕರ ಅಧ್ಯಕ್ಷತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ರು.
ನರೇಗಾ ವಿಚಾರದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ವಿಬಿ ಜಿರಾಮ್‌ಜಿಗೆ 40% ಹಣ ಕೊಡಬೇಕಾಗುತ್ತೆ. ಸಮುದಾಯ ಅಭಿವೃದ್ಧಿ ಸೇರಿ ಜನರಿಗೆ ಬೇಕಾಗುವ ಕೆಲಸಕ್ಕೆ ಆದ್ಯತೆ ನೀಡಬೇಕು. ಗುಳೆ ಹೋಗದಂತೆ ಕ್ರಮ ಕೈಗೊಳ್ಳಬೇಕು. ಗ್ರಾಮಸಭೆ ಮಾಡಿ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ರು.
15 ದಿನದಲ್ಲಿ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೊಡಬೇಕಾಗಿದೆ. ಪ್ರಧಾನಿಗೆ ಬರದ ಪರಸ್ಥಿತಿ ಪರಿಶೀಲನೆಗೆ ತಂಡ ಕಳಿಸಲು ಮನವಿ ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ ಸ್ಥಳಕ್ಕೆ ಹೋಗಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ರಿಪೋರ್ಟ್ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇವು ಸಂಗ್ರಹಕ್ಕೂ ಸೂಚನೆ ಕೊಡಲಾಗಿದೆ, ಮೇವು ಸಮಸ್ಯೆ ಕಾಣುತ್ತಿಲ್ಲ. ಇದರೊಂದಿಗೆ ಸಣ್ಣ ರೈತರ ಹಿತ ಕಾಯ್ದುಕೊಳ್ಳುವಂತೆ ಹಾಗೂ ಜನರು ಗುಳೆ ಹೋಗುವುದನ್ನ ತಡೆಯುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಿರುವುದಾಗಿ ಹೇಳಿದರು.
ನೀರು ಬಂದ ಮೇಲೆ ಬೆಳೆ ಹಾಕಬೇಕು, ರೈತರಿಗೆ ನೀರಿನ ಬಗ್ಗೆ ಮನವರಿಕೆ ಮಾಡಬೇಕು. ಬೆಳೆ ಹಾಕಿಕೊಳ್ಳಬಾರದು. ಜಲವಿದ್ಯುತ್ ಗೆ 23% ನೀರಷ್ಟೇ ಇದೆ ರಾಜ್ಯಕ್ಕೆ 60% ರಷ್ಟು ಮಳೆ ಕಡಿಮೆ ಇದೆ. 128 ತಾಲೂಕಿನಲ್ಲೂ ಮಳೆ ಕೊರತೆ ಇದೆ, 158 ತಾಲೂಕಿನಲ್ಲೂ ಬಹಳ ಸಾಧಾರಣ ಮಳೆ ಇದೆ ಅಂತಾ ಮಾಹಿತಿ ಪಡೆದಿದ್ದೇನೆ. ರಾಜ್ಯದಲ್ಲಿ ಜಲಾಶಯಗಳಲ್ಲಿ 40% ನೀರಿದ್ದು, ಕುಡಿಯುವುದಕ್ಕೆ ಮಾತ್ರ ನೀರಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎಂದು ಮಾಹಿತಿ ನೀಡಿದರು.





