ಶ್ರೀರಂಗಪಟ್ಟಣ: ಕ್ಯಾತನಹಳ್ಳಿಯ ಡಾ. ಕೆ ವೈ ಶ್ರೀನಿವಾಸ್ ರವರ ಸ್ಮರಣೆ ಮಾಡುವ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಜಂಗಮನ ಜಾದುಗಳ ಹುಡುಕಾಟ ಏನ್ ಚೆನ್ನಾದ ಥೀಮ್ ಇದು. ಜಂಗಮರು ನಮ್ಮ ಸಮಾಜದ ಬೆನ್ನೆಲುಬು. ಅವರು ಮಾಡಿದ ಸೇವೆ, ತ್ಯಾಗ ಇವತ್ತು ನಮಗೆ ಮಾದರಿ. ಕೆ ವೈ ಶ್ರೀ ಅವರು ಕೂಡ ಅದೇ ದಾರಿಯಲ್ಲಿ ನಡೆದವರು.
ಈ ಕಾರ್ಯಕ್ರಮದ ಮೂಲಕ ಎಸ್.ಕೆ. ಇವೆಂಟ್ ಮ್ಯಾನೇಜ್ಮೆಂಟ್` ಮತ್ತು ಸಂಜಯ ಪ್ರಕಾಶನ ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ನಾಟಕ, ಕಲೆ, ಪ್ರವಾಸ, ಕ್ರೀಡೆ, ಗಿರಿಜನರ ಸೇವೆ, ವೈದ್ಯಕೀಯ ಸೇವೆ… ಹೀಗೆ ಎಲ್ಲಾ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಅಂದರೆ ಸಮಾಜಕ್ಕೆ ನಾವು ಕೊಡುವ ಗೌರವ.
ಸಾಧನೆ ಅಂದರೆ ದೊಡ್ಡ ಸ್ಥಾನ ಅಲ್ಲ. ಜನರಿಗಾಗಿ, ಊರಿಗಾಗಿ ಪ್ರಾಮಾಣಿಕವಾಗಿ ದುಡಿದ ಪ್ರತಿಯೊಬ್ಬರೂ ಸಾಧಕರೇ. ಇವತ್ತು ನಾವು ಸನ್ಮಾನಿಸುವ ಎಲ್ಲಾ ಸಾಧಕರು ನಮ್ಮ ಯುವ ಪೀಳಿಗೆಗೆ ಸ್ಪೂರ್ತಿ.
ಸಾಂಸ್ಕೃತಿಕ ಮತ್ತು ಕ್ರೀಡಾ ರಾಯಭಾರಿ ಎಂಬ ಹೆಸರಿನಲ್ಲಿ ನಡೆಯುವ ಈ ಕಾರ್ಯಕ್ರಮ ನಮ್ಮ ಸಂಸ್ಕೃತಿ, ನಮ್ಮ ಬೇರುಗಳನ್ನು ನೆನಪಿಸುತ್ತದೆ. ಶ್ರೀರಂಗಪಟ್ಟಣದ ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಆಯುಷ್ ಅಗರಬತ್ತಿ ಅಂಗಣದಲ್ಲಿ ಎಸ್ .ಕೆ. ಇವೆಂಟ್ ಮ್ಯಾನೇಜ್ಮೆಂಟ್` ಮತ್ತು ಸಂಜಯ ಪ್ರಕಾಶನ ಶ್ರೀರಂಗಪಟ್ಟಣ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಟಾಂಫೋರ್ಡ್ ಶಾಲೆಯ ಅಂಧ ವಿದ್ಯಾರ್ಥಿ ಗಾಯತ್ರಿ, ಹಾಗು ಕ್ಯಾತನಹಳ್ಳಿ ಗಣೇಶ್ ರವರ ಸಾಧನೆಗಾಗಿ ಅಭಿನಂದಸಲಾಯಿತು. ಡಾ. ಕೆ ವೈ ಶ್ರೀ ಕುರಿತಾಗಿ ಕ್ಯಾತನಹಳ್ಳಿಯ ಕ್ರೀಡಾ ಒಕ್ಕೂಟದ ಅಧ್ಯಕ್ಷ ಮುರಳಿಧರ್, ಪ್ರಧ್ಯಾಪಕಿ ಉಷಾರಾಣಿ,ಡಾ ಅಭಿನಯ್, ಮಾತನಾಡಿದರು. ಸಮರ್ಪಣ ಟ್ರಸ್ಟ್ ಆಧ್ಯಕ್ಷ ಕೆ ಎಸ್ ಜಯಶಂಕರ್ ಕೆ ವೈ ಶ್ರೀ ಕುರಿತು ಕಾವ್ಯ ನಮನ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮಿತ್ ಕೃಷ್ಣ ಮಾತನಾಡಿ.ಜಂಗಮನ ಜಾದುಗಳ ಹುಡುಕಾಟ ಈ ಹೆಸರೇ ನಮ್ಮ ಸಂಸ್ಕೃತಿಯ ಶಕ್ತಿಯನ್ನು ಹೇಳುತ್ತದೆ. ಕೆ ವೈ ಶ್ರೀ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕೆಲಸಗಳಿಗೆ ಮುಡಿಪಾಗಿಟ್ಟವರು. ಅವರ ನಡೆ, ನುಡಿ ಇವತ್ತಿಗೂ ನಮಗೆ ದಾರಿದೀಪ.ಎಸ್.ಕೆ. ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಸಂಜಯ ಪ್ರಕಾಶನ ಅವರು ಈ ರೀತಿಯ ಕಾರ್ಯಕ್ರಮ ಮಾಡುವ ಮೂಲಕ ಮರೆತುಹೋಗುತ್ತಿರುವ ಸಾಧಕರನ್ನು ಗುರುತಿಸುತ್ತಿರುವುದು ಹೆಮ್ಮೆಯ ವಿಷಯ.
ಇವತ್ತು ನಾವು ಸನ್ಮಾನಿಸುತ್ತಿರುವವರು ನಾಟಕ, ಕಲೆ, ಕ್ರೀಡೆ, ಗಿರಿಜನರ ಸೇವೆ, ವೈದ್ಯಕೀಯ ಸೇವೆ, ಸಮಾಜ ಸೇವೆ ಹೀಗೆ ಹಲವು ಕ್ಷೇತ್ರದ ಹೋರಾಟಗಾರರು. ಪ್ರಶಸ್ತಿ ಮುಖ್ಯ ಅಲ್ಲ, ಅವರ ಸೇವೆ ನಮ್ಮೂರಿಗೆ ಮಾದರಿಯಾಗಬೇಕು.
ಯುವಕರೇ, ಇವರನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ. ಮೊಬೈಲ್ ಬಿಟ್ಟು, ಸಮಾಜಕ್ಕಾಗಿ ಏನಾದರೂ ಮಾಡುವ ಮನಸ್ಸು ಬೆಳೆಸಿಕೊಳ್ಳೋಣ. ಸಾಂಸ್ಕೃತಿಕ ಹಾಗೂ ಕ್ರೀಡಾ ರಾಯಭಾರಿ ಕಾರ್ಯಕ್ರಮ ನಮ್ಮ ಪಾಂಡವಪುರ ತಾಲೂಕಿಗೆ ಹೊಸ ಹುರುಪು ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಪುಷ್ಪ ಶ್ರೀನಿವಾಸ್,ಶೀಲಾ ನಂಜುಂಡಯ್ಯ, ಧನ್ಯಕುಮಾರ್, ಚಂದ್ರಶೇಖರಯ್ಯ, ವಕೀಲ ಮೋಹನಕುಮಾರ್, ಎಸ್ ಆರ್ ಸಿದ್ದೇಶ್, ರಂಗನಾಥ್, ಗುರು,ರಾಜಶೇಖರ್, ಚಂದ್ರಣ್ಣ ಮುಂತಾದವರು ಭಾಗಿಯಾಗಿದ್ದರು.





