ನವದೆಹಲಿ: ಇವತ್ತು ಜಗತ್ತೇ ಭಾರತದತ್ತ ತಿರುಗಿ ನೋಡುವಂತಹ ಸನ್ನಿವೇಶ ಎದುರಾಗಿದೆ. ಯುವಕರ ನಡೆ ಕೆಲವೊಬ್ಬರಿಗೆ ಸಂಸತ ತಂದರೆ, ಇನ್ನು ಕೆಲ ಅಧಿಕಾರಿಗಳಿಗೆ ಭಯ ಹುಟ್ಟಿಸುತ್ತಿದೆ. ನೀಟ್ ಪರೀಕ್ಷೆಯಲ್ಲಿ ಆದಂತಹ ಮೋಸಕ್ಕೆ ಪರಿಹಾರ ಬೇಕು ಎಂದು ದೇಹಲಿಯಲ್ಲಿ ಯುವಕರು ಧರಣಿ ನಡೆಸಿದ್ದಾರೆ. ಜಂತರ್ ಮಂತರ್ ಎನ್ನುವ ಸಂಘವನ್ನು ಕಟ್ಟಿಕೊಂಡು ಸರ್ಕಾರಕ್ಕೆ ಸವಾಲ್ ಹಾಕುವುದಕ್ಕೆ ಮುಂದಾಗಿದ್ದಾರೆ.
ಹೌದು ಈ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದು, ಇಂದು ತಮ್ಮ ಪ್ರತಿಭಟನೆ ಹಾಗೂ ಚಲೋ ಸಂಸದ್ ಮುಂದುವರಿಯಲಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು,ಮುಂದಿನ ಮೆರವಣಿಗೆ ಕುರಿತು ಸಭೆ ಇನ್ನೂ ನಡೆಯುತ್ತಿದೆ. ಮುಂದಿನ ಕ್ರಮವನ್ನು ವಿವರಿಸುವ ಅಧಿಕೃತ ಹೇಳಿಕೆಯನ್ನು ಪಕ್ಷ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಎಂದು ಹೇಳಿದರು.
ಮಂಗಳವಾರವೂ ಸಂಸತ್ತಿಗೆ ಮೆರವಣಿಗೆ ಮುಂದುವರಿಯಲಿದ್ದು, ನಮ್ಮ ಹಕ್ಕುಗಳಿಗಾಗಿ ಮತ್ತು ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರದ ತೀವ್ರ ಗಲಾಟೆ ಮತ್ತು ಪೋಲಿಸರ ತೆರವು ಕಾರ್ಯಾಚರಣೆಯ ನಂತರವೂ, ಸಿಜೆಪಿ ಬೆಂಬಲಿಗರು ಹಾಗೂ ಅಭಿಜಿತ್ ದೀಪ್ಕೆ ಸೋಮವಾರ ಸಂಜೆಯ ವೇಳೆಗೆ ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ
ಕೊನೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆದಿತ್ತು. ಸೋಮವಾರ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದಿದ್ದರು. ಇದರಲ್ಲಿ ಹಲವು ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





