ನವದೆಹಲಿ: ಶಾಂತಿಯುತವಾಗಿ ಧರಣಿ ಕೈಗೊಂಡಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಜಂತರ್ ಮಂತರ್ ಪ್ರತಿಭಟನೆಯ ಮೂಲಕ ಯುವಕರು ಧರಣಿಗೆ ಕುಳಿತಾಗ ಪೊಲೀಸ್‌ರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಜಾರ್ಜ್‌ಗೆ ಬಗ್ಗದ ಯುವಜನತೆ ಖಾಕಿಯವರಿಗೆ ತಿರುಗಿ ಬಿದ್ದಿದ್ದಾರೆ.
ಯುವಜನತೆಯ ಬೆಂಬಲಕ್ಕಾಗಿ ಸಾಕಷ್ಟು ನಾಯಕರು ನಟರು ಬಂದು ಹೋದರು ಆದರೆ, ಪ್ರಸ್ತುತ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದು ತಲುಪಿದೆ. ಇತ್ತ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಯುವಕರಿಗಾಗಿ ಮೋದಿ ಮನೆಯ ಮುಂದೆ ಧರಣಿಗೆ ಕುಳಿತ್ತಿದ್ದರು ಇವರನ್ನು ಸಹ ಪೊಲೀಸ್‌ರು ಹೊತ್ತುಕೊಂಡು ಹೋಗಿ ಅರೆಸ್ಟ್ ಮಾಡಿದ್ದರು. ಈ ಹೋರಾಟಕ್ಕೆ ಇದೀಗ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದೇಶದಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಯುವಕರನ್ನು ತೀವ್ರ ನಿರಾಶೆಗೆ ತಳ್ಳಿವೆ. ಸರ್ಕಾರಗಳು ಬದಲಾದರೂ, ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ಈ ‘ಸಾಂಸ್ಥಿಕ ಅಕ್ರಮ’ಗಳನ್ನು ತಡೆಯಲು ವಿಫಲವಾಗುತ್ತಿವೆ ಎಂದಿದ್ದಾರೆ.
ಅಧಿಕಾರದಲ್ಲಿದ್ದಾಗ ತಡೆಯಲಾಗದ ವಿಷಯಗಳನ್ನು, ವಿರೋಧ ಪಕ್ಷದಲ್ಲಿದ್ದಾಗ ಅದೇ ವಿಷಯವನ್ನು ಎತ್ತಿ ಹಿಡಿಯುವ ರಾಜಕೀಯ ಚಕ್ರ ನಿರಂತರವಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಅದು ಇಡೀ ದೇಶವನ್ನು ಬಾಧಿಸುತ್ತಿರುವ ಬೃಹತ್ ಜ್ವಲಂತ ಸಮಸ್ಯೆ ಇದನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.
ಸಮಸ್ಯೆ ಹಳೆಯದು,ಹೊಸದು ಎನ್ನದೆ ತೊಂದರೆಯನ್ನು ಬಗೆಹರಿಸುವಲ್ಲಿ ಸರ್ಕಾರ ಮುಂದಾಗಬೇಕು,ಯುವಕರಿಗೆ ಬದುಕುವುದಕ್ಕೆ ಅವಕಾಶಗಳನ್ನ ನೀಡಬೇಕು.ಆದರೂ ಈ ಧರಣಿಯ ಸ್ಥಿತಿ ಎಲ್ಲಿಯವರೆಗೆ ಸಾಗುತ್ತದೆಯೋ ಎಂದು ಕಾದು ನೋಡಬೇಕಿದೆ.





