R Ashok: ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜತೆ ಸಂಪರ್ಕ ಇಟ್ಟುಕೊಂಡಿದ್ದಾನೆ: ಅಶೋಕ್‌

ಬೆಂಗಳೂರು: ಕಾಕ್ರೋಚ್‌ ಜನತಾ ಪಾರ್ಟಿ ದೇಶದ್ರೋಹಿ ಸಂಘಟನೆಯಾಗಿದೆ, ಅದರ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರುರಾಜ್ಯ ಸರ್ಕಾರವೇ ಇನ್ನು ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ? ರೋಮ್ ಹೊತ್ತಿ ಉರಿದರೆ ಯಾರೋ ಪಿಟೀಲು ಬಾರಿಸುತ್ತಿದ್ದನಂತೆ, ಅದೇ ರೀತಿ ಸಿಎಂ ದೆಹಲಿಯಲ್ಲಿ ಕೂತಿದ್ದಾರೆ ಎಂದರು.

ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ, ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು? ಅಧಿಕಾರಿಗಳನ್ನ ನಂಬೋಕೆ ಆಗುತ್ತಾ? ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ಯಾವ ಮನೆಹಾಳ ಈ ಐಡಿಯಾ ಕೊಟ್ಟ ಗೊತ್ತಿಲ್ಲ. ಎಲ್ಲರಿಗೂ ಈಗ ದೆಹಲಿ ಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ಮಾತೆತ್ತಿದ್ರೆ ಆರ್‌ಎಸ್‌ಎಸ್‌ ಲೆಕ್ಕ ಕೊಡಿ ಅಂತಾರೆ, ಕಲಬುರಗಿಯಿಂದ ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಪ್ಪ ನೀನು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರಲ್ಲದೇ, ಜನರು ಗುಳೆ ಹೋಗ್ತಾ ಇದ್ದಾರೆ. ತಾಂಡಾಗಳು ಖಾಲಿ ಆಗ್ತಾ ಇವೆ, ಅದರ ಲೆಕ್ಕ ಮೊದಲು ಕೊಡಿ ಎಂದರು.

ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆ ಅಂತಾರೆ. ʻಸಿಜೆಪಿʼ ಅದೊಂದು ದೇಶ ದ್ರೋಹ ಸಂಘಟನೆ, ಕಾಕ್ರೋಜ್‌ ಜೊತೆಗೆ ಈಗ ರಾಹುಲ್‌ ಗಾಂಧಿ ಹೋಗಿದ್ದಾರೆ. ಮನೆ ಬಾಗಿಲಿಗೆ ಆತ್ಮಹತ್ಯೆ ತಂದ ಸರ್ಕಾರ ಇದು. ಅಭಿಜೀತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅವರ ಜೊತೆ ರಾಹುಲ್ ಹೋಗ್ತಾರೆ, ಆದ್ರೆ ರಾಜ್ಯದ ಸಮಸ್ಯೆ ಬಗ್ಗೆ ಕೇಳೋಕಾಗಲ್ಲ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others