ರಾಜ್ಯದಲ್ಲಿ ಕೊತ್ವಾಲ್ ಆಡಳಿತ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ

ಬೆಂಗಳೂರು : ಬಿಜೆಪಿ ಅವರಿಗೆ ನನ್ನ ಪರಿಶುದ್ದ ಆಡಳಿತ ಸಹಿಸೋಕೆ ಆಗ್ತಿಲ್ಲ. ಅವರು ನನ್ನ ‌ಮೇಲೆ ಏನೇನೋ ಮಾತಾಡ್ತಾ ಇದ್ದಾರೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಎಂ ಡಿಕೆಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊತ್ವಾಲ್ ಆಡಳಿತ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನಾನು ಎಷ್ಟು ಪರಿಶುದ್ಧ ರಾಜಕೀಯ ಮತ್ತು ಆಡಳಿತ ಮಾಡುತ್ತಿದ್ದೇನೆ ಎಂಬುದನ್ನು ಜನರು ನೋಡುತ್ತಿದ್ದಾರೆ.ಅವರು ಖುಷಿಗೆ ಏನು ಬೇಕಾದರೂ ಮಾತನಾಡಲಿ. ನಾನು ಹಳ್ಳಿಯಲ್ಲಿ ಹುಟ್ಟಿದ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದವನು. ಅಲ್ಲಿಂದ ಇಲ್ಲಿವರೆಗೂ ಜನರ ಬೆಂಬಲದಿಂದ ಬೆಳೆದಿದ್ದೇನೆ. ಅದನ್ನೇ ಬಿಜೆಪಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

ಇನ್ನು ಸಿಎಸ್ಆರ್ ನಿಧಿ ವಿಚಾರ ಮಾತನಾಡಿ, ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಸಿಎಸ್ಆರ್ ನಿಧಿ ಇದ್ದು, ಅದರ ಪ್ರತಿಯೊಂದು ರೂಪಾಯಿಯೂ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಬಳಸಬೇಕು ಎಂದರು.

ಆದರೆ ಸುಮಾರು 50% ಉದ್ಯಮಿಗಳು ಸಿಎಸ್ಆರ್ ನಿಧಿಯನ್ನು ಸರಿಯಾಗಿ ಬಳಸುತ್ತಿಲ್ಲ ಸರ್ಕಾರ ಈಗಾಗಲೇ ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸುವ ಬಗ್ಗೆ ತೀರ್ಮಾನಿಸಿದೆ.ಎಂದು ಹೇಳಿದ ಅವರು, ಇದರ ಪರಿಶೀಲನೆಗಾಗಿ ವಿಶೇಷ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.

ಹಣವನ್ನು ಸರ್ಕಾರಕ್ಕೆ ನೀಡುವ ಬದಲು, ಕಂಪನಿಗಳೇ ಶಾಲೆ ಕಟ್ಟಬಹುದು ಮತ್ತು ತಮ್ಮ ಸಂಸ್ಥೆಯ ಹೆಸರನ್ನೂ ಇಡಬಹುದುಗ್ರಾಮೀಣ ಮಕ್ಕಳಿಗೂ ನಗರ ಮಕ್ಕಳಂತೆಯೇ ಗುಣಮಟ್ಟದ ಶಿಕ್ಷಣ ಸಿಗಬೇಕು. ಅದಕ್ಕಾಗಿ ರಾಜ್ಯದ 2 ಸಾವಿರ ಜಾಗಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಶಾಲೆ ನಿರ್ಮಿಸಬಹುದು ಎಂದು ಆಹ್ವಾನ ನೀಡಿದರು ಎಂದರು.

ದತ್ತು ಪಡೆಯದಿದ್ದರೆ ಅವರ ಶುಲ್ಕಕ್ಕೆ ಮಿತಿ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು. ಸದ್ಯದಲ್ಲೇ ಉದ್ಯಮಿಗಳ ಜೊತೆ ಸಭೆ ನಡೆಸಿ ಸಿಎಸ್ಆರ್ ನಿಧಿ ಬಳಕೆಗೆ ಹೊಸ ನೀತಿ ರೂಪಿಸಲಾಗುವುದು ಎಂದು ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಖಾಸಗಿ ಶಾಲೆಗಳು ಶಿಕ್ಷಕರನ್ನು ಒದಗಿಸಬಹುದು ಎಂದು ತಿಳಿಸಿದರು. ನಗರದ ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *