ಆರೋಗ್ಯಕ್ಕೆ ಇಲ್ಲಿದೆ ಅದ್ಭುತ ಲಾಭ- ದಿನಕ್ಕೆ 15 ನಿಮಿಷ ಬರಿಗಾಲಲ್ಲಿ ನಡೆಯಬೇಕು ಯಾಕೆ ಗೊತ್ತೇ? ಇಲ್ಲಿದೆ ನೋಡಿ

ದಿನವೂ ಸ್ವಲ್ಪ ಹೊತ್ತು ಹುಲ್ಲು ಅಥವಾ ಮಣ್ಣಿನ ಮೇಲೆ ಬರಿಗಾಲಲ್ಲಿ ನಡೆದರೆ ಪಾದಗಳ ಸ್ನಾಯುಗಳು ಬಲಗೊಳ್ಳುತ್ತವೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ದಿನಕ್ಕೆ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ದೇಹ ಮತ್ತು ಮನಸ್ಸಿಗೆ ನಂಬಲಾಗದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ನಮ್ಮ ಪಾದಗಳಲ್ಲಿ ಸಾವಿರಾರು ನರಗಳ ತುದಿಗಳಿರುತ್ತವೆ. ನಾವು ಬರಿಗಾಲಿನಲ್ಲಿ ನೆಲ, ಹಸಿರು ಹುಲ್ಲು ಅಥವಾ ಮಣ್ಣಿನ ಮೇಲೆ ನಡೆದಾಗ ಆ ನರಗಳು ಜಾಗೃತಗೊಂಡು ಇಡೀ ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.

ಬರಿಗಾಲಲ್ಲಿ ನಡೆದರೆ ಸಾಕಷ್ಟು ಲಾಭಗಳಿವೆ: ರಕ್ತ ಪರಿಚಲನೆ ಸುಧಾರಣೆ: ಬರಿಗಾಲಿನಲ್ಲಿ ನಡೆದಾಗ ಪಾದಗಳಲ್ಲಿರುವ ಸಹಸ್ರಾರು ನರಗಳು ಉತ್ತೇಜನಗೊಳ್ಳುತ್ತವೆ. ಇದು ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.

ಒತ್ತಡ ಮತ್ತು ರಕ್ತದೊತ್ತಡ ನಿಯಂತ್ರಣ: ಹಸಿರು ಹುಲ್ಲು ಅಥವಾ ನೆಲದ ಮೇಲೆ ಬರಿಗಾಲಿನಲ್ಲಿ ನಡೆದಾಗ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮನಸ್ಸು ಶಾಂತವಾಗಿ, ರಕ್ತದೊತ್ತಡ ಹದ್ದುಬಸ್ತಿನಲ್ಲಿರುತ್ತದೆ.

ದೇಹದ ಉರಿಯೂತ ಇಳಿಕೆ: ಭೂಮಿಯಿಂದ ಹೀರಿಕೊಳ್ಳುವ ನೈಸರ್ಗಿಕ ಎಲೆಕ್ಟ್ರಾನ್‌ಗಳು ದೇಹದಲ್ಲಿರುವ ಫ್ರೀ ರಾಡಿಕಲ್ಸ್‌ಗಳನ್ನು ನಾಶಪಡಿಸಿ, ಹೃದಯಕ್ಕೆ ಹಾನಿ ಮಾಡುವ ಉರಿಯೂತವನ್ನು ಕಡಿಮೆ ಮಾಡುತ್ತವೆ.

ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟುವಿಕೆ: ಭೂಮಿಯ ಸಂಪರ್ಕದಿಂದ ಕೆಂಪು ರಕ್ತಕಣಗಳ ವಿದ್ಯುತ್ ಚಾರ್ಜ್ ಸಮತೋಲನಕ್ಕೆ ಬರುತ್ತದೆ. ಇದರಿಂದ ರಕ್ತವು ಗಟ್ಟಿಯಾಗುವುದು ತಪ್ಪುತ್ತದೆ ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

ಹೃದಯ ಬಡಿತದ ಸಮತೋಲನ: ಇದು ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆಯನ್ನು ಸರಿಪಡಿಸಿ, ಹೃದಯ ಬಡಿತದ ಏರುಪೇರನ್ನು ನಿಯಂತ್ರಣದಲ್ಲಿಡುತ್ತದೆ.

ಭೂಮಿಯೊಂದಿಗೆ ನೇರ ಸಂಪರ್ಕ ಹೊಂದುವ ಈ ಪ್ರಕ್ರಿಯೆಯನ್ನು ‘ಅರ್ಥಿಂಗ್’ ಅಥವಾ ‘ಗ್ರೌಂಡಿಂಗ್’ ಎಂದು ಕರೆಯಲಾಗುತ್ತದೆ. ಅದರಲ್ಲೂ, ಹೀಗೆ ಪ್ರತಿದಿನ ಕೇವಲ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ಹೃದಯದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಸಿಗುತ್ತವೆ ಎಂದು ಪ್ರಸಿದ್ಧ ಹೃದಯರೋಗ ತಜ್ಞರು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others