ಶಾಂತಿ ಇಲ್ಲದ ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ವಲಸೆಯೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲದೆ, ಯುರೋಪ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಗಡಿಗಳನ್ನು ಬಿಗಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಮ್ಯಾಕ್ರನ್ ಜೊತೆಗಿನ ಮಾತುಕತೆಯನ್ನು ಉಲ್ಲೇಖಿಸಿದ ಟ್ರಂಪ್, ನಾನು ಬಹಳ ಹಿಂದೆಯೇ ಅವರಿಗೆ ಹೇಳಿದ್ದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಪ್ರಪಂಚದಾದ್ಯಂತದ ಜನರನ್ನು ನೀವು ಒಳಗೆ ಬಿಡುತ್ತಿದ್ದೀರಿ. ಇಡೀ ಜಗತ್ತೇ ಅಲ್ಲಿಗೆ ಬರುತ್ತಿದೆ. ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು 80 ವರ್ಷದ ರಿಪಬ್ಲಿಕನ್ ನಾಯಕ ಹೇಳಿದರು.

ಯುರೋಪ್ ತನ್ನ ಗಡಿಗಳನ್ನು ಮುಚ್ಚದಿದ್ದರೆ ಮತ್ತು ಪ್ರತಿಭಟನೆಯಲ್ಲಿ ತೊಡಗಿರುವಂತಹ ಅಪರಾಧಿಗಳನ್ನು ಹೊರಹಾಕದಿದ್ದರೆ, ಯುರೋಪ್‌ನ ಕಥೆ ಮುಗಿದಂತೆಯೇ. ಅಕ್ರಮ ವಲಸೆಯನ್ನು ತಡೆಯುವುದನ್ನು ಟ್ರಂಪ್ ತಮ್ಮ 2024ರ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯನ್ನಾಗಿ ಮಾಡಿಕೊಂಡಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಕೆಲವೊಮ್ಮೆ ಜನಾಂಗೀಯ ಭಯವನ್ನು ಹುಟ್ಟುಹಾಕುವಂತಹ ಸುಳ್ಳು ಹೇಳಿಕೆಗಳನ್ನೂ ಬಳಸಿದ್ದರು ಎನ್ನಲಾಗಿದೆ.

ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ’ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೂ, ವಲಸೆಗೂ ಸಂಬಂಧವಿದೆಯೇ ಹೊರತು, ಶಾಲೆಗಳಿಗಾಗಲಿ ಅಥವಾ ಬೇರೆ ಯಾವುದಕ್ಕಾಗಲಿ ಸಂಬಂಧವಿಲ್ಲ ಎಂದರು. ಈ ಹಿಂದೆ ನೀಡಿದ ಹೇಳಿಕೆಯನ್ನೇ ಪುನರುಚ್ಚರಿಸಿದ ಟ್ರಂಪ್, ಇದು ವಲಸೆಗೆ ಸಂಬಂಧಿಸಿದ್ದು, ನಿಮ್ಮ ಗಡಿಗಳನ್ನು ಮುಚ್ಚಿ ಎಂದು ನಾನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಹೇಳಿದ್ದೇನೆ ಎಂದು ಹೇಳಿದರು.

ಬೆಲೆ ಏರಿಕೆಯ ವಿರುದ್ಧ ವಾರಾಂತ್ಯದಲ್ಲಿ ಪ್ಯಾರಿಸ್ ಮತ್ತಿತರ ನಗರಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ಕಂಡ ಅತ್ಯಂತ ಭೀಕರ ಹಿಂಸಾಚಾರಕ್ಕೆ ಕಾರಣವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others