ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು “ಅಮೆರಿಕದ ಭೂಭಾಗ” ಎಂದು ಘೋಷಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಜಲ, ಭೂಮಿ, ಆಕಾಶ್ ಮತ್ತು ಸೈಬರ್ ಮೂಲಕ “ವಿನಾಶಕಾರಿ” ಸೇನಾ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ.ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಘರ್ಷ ಏರ್ಪಟ್ಟಿದೆ.
ಟೆಹ್ರಾನ್ ಮೇಲೆ ಒತ್ತಡ ಹೇರಲು ಹಾಗೂ ಅಲ್ಲಿನ ಆಡಳಿತವನ್ನು ಉರುಳಿಸಲು ಟ್ರಂಪ್ ಆಡಳಿತವು ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆ ನೀಡಿದೆ. ಅಮೆರಿಕದ ಆರ್ಥಿಕ ಸಚಿವ ಸ್ಕಾಟ್ ಬೆಸೆಂಟ್ ಹೊಸ ನಿರ್ಬಂಧಗಳ ವಿವರಗಳನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಲಿ ಅಬ್ದೊಲ್ಲಾಹಿ, ಟೆಹ್ರಾನ್ ಹಲವು ಕ್ಷೇತ್ರಗಳಲ್ಲಿ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಭೂಮಿ, ಸಮುದ್ರ, ವಾಯು, ವಾಯು ರಕ್ಷಣಾ ವ್ಯವಸ್ಥೆ ಮತ್ತು ಸೈಬರ್ ಕ್ಷೇತ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಶತ್ರುವಿನ ಹೊಸ ಬೆದರಿಕೆಗಳಿಗೆ ಇರಾನ್ ಸಶಸ್ತ್ರ ಪಡೆಗಳು ಪ್ರಬಲ, ಶಿಕ್ಷಾರ್ಹ ಹಾಗೂ ವಿನಾಶಕಾರಿ ಪ್ರತಿಕ್ರಿಯೆ ನೀಡಲಿವೆ ಎಂದು ಇರಾನ್ ಮಾಧ್ಯಮಗಳು ಉಲ್ಲೇಖಿಸಿವೆ.
ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಲಿ ಅಬ್ದೊಲ್ಲಾಹಿ, ಟೆಹ್ರಾನ್ ಹಲವು ಕ್ಷೇತ್ರಗಳಲ್ಲಿ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಭೂಮಿ, ಸಮುದ್ರ, ವಾಯು, ವಾಯು ರಕ್ಷಣಾ ವ್ಯವಸ್ಥೆ ಮತ್ತು ಸೈಬರ್ ಕ್ಷೇತ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಶತ್ರುವಿನ ಹೊಸ ಬೆದರಿಕೆಗಳಿಗೆ ಇರಾನ್ ಸಶಸ್ತ್ರ ಪಡೆಗಳು ಪ್ರಬಲ, ಶಿಕ್ಷಾರ್ಹ ಹಾಗೂ ವಿನಾಶಕಾರಿ ಪ್ರತಿಕ್ರಿಯೆ ನೀಡಲಿವೆ ಎಂದು ಇರಾನ್ ಮಾಧ್ಯಮಗಳು ಉಲ್ಲೇಖಿಸಿವೆ.
ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧ: ಅಮೆರಿಕ ಸಚಿವ ಸ್ಕಾಟ್ ಬೆಸೆಂಟ್ ಮಾತನಾಡಿ, ಇರಾನ್ ವಿರುದ್ಧ ಆರ್ಥಿಕ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸುವ ಭಾಗವಾಗಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇರಾನ್ಗೆ ಆರ್ಥಿಕ ನೆರವು ನೀಡುವ ದೇಶಗಳ ವಿರುದ್ಧವೂ ನಿರ್ಬಂಧ ವಿಧಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.ಇರಾನ್ನ ಸಮುದ್ರ ಮಾರ್ಗದ ಮೂಲಕ ಸಾಗಿಸುವ ತೈಲದ ಅತಿದೊಡ್ಡ ಖರೀದಿದಾರ ಚೀನಾ, ಅಮೆರಿಕದ ಕ್ರಮವನ್ನು ವಿರೋಧಿಸಿದೆ. “ನಿರ್ಬಂಧ ಮತ್ತು ಒತ್ತಡದಿಂದ ಸಮಸ್ಯೆ ಬಗೆಹರಿಯುವುದಿಲ್ಲ” ಎಂದು ವಾಷಿಂಗ್ಟನ್ನಲ್ಲಿರುವ ಚೀನಾ ರಾಯಭಾರ ಕಚೇರಿ ಹೇಳಿದ್ದು, ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದೆ.
ರಾಯಿಟರ್ಸ್ ಉಲ್ಲೇಖಿಸಿರುವ ಕೆಪ್ಲರ್ ದತ್ತಾಂಶದ ಪ್ರಕಾರ, 2025ರಲ್ಲಿ ಇರಾನ್ ಸಾಗಾಟ ಮಾಡಿದ ತೈಲದ ಶೇ.80ಕ್ಕೂ ಹೆಚ್ಚು ಭಾಗ ಚೀನಾಕ್ಕೆ ತೆರಳಿತ್ತು. ಚೀನಾದ ಮೇಲಿನ ಅಮೆರಿಕದ ಮತ್ತಷ್ಟು ಒತ್ತಡವು ಪ್ರತೀಕಾರದ ಕ್ರಮಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಈಗಾಗಲೇ ವ್ಯಾಪಾರ ಮತ್ತು ಪ್ರಮುಖ ಖನಿಜಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ.
ಇದು ಒಂದರ ಹಿಂದೆ ಒಂದರಂತೆ ಬರುವ ಎರಡು ಹಂತಗಳ ಕ್ರಮ. ನಮ್ಮ ಬಳಿ ದಿಗ್ಬಂಧನವಿದೆ. ಜೊತೆಗೆ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಿದ್ದೇವೆ. ನಾವು ಈ ಆಡಳಿತವನ್ನು ಕುಸಿಯುವಂತೆ ಮಾಡಲಿದ್ದೇವೆ” ಎಂದೂ ಹೇಳಿದ್ದಾರೆ.ಯಾವುದೇ ರೀತಿಯಲ್ಲಿ ಇರಾನ್ಗೆ ನೆರವು ನೀಡುವ ದೇಶಗಳು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಎಚ್ಚರಿಸಿದ್ದಾರೆ.
ಸುಮಾರು ಆರು ತಿಂಗಳಿಂದ ಮುಂದುವರಿದಿರುವ ಅಮೆರಿಕ-ಇಸ್ರೇಲ್ ಯುದ್ಧವು ಇರಾನ್ನ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಆಯಕಟ್ಟಿನ ಪ್ರಮುಖ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯ ಮೂಲಕ ಸಾಗಾಟಕ್ಕೂ ಅಡ್ಡಿಯುಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿವೆ.





