ನವದೆಹಲಿ: ಚೀನಾದ ಜೊತೆ ವ್ಯಾಪಾರ ಮಾಡುತ್ತೇವೆ, ಆದರೆ ಹಿತಾಸಕ್ತಿಯಲ್ಲಿ ರಾಜಿ ಇಲ್ಲ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತ ಜಾಗತಿಕ ಆರ್ಥಿಕತೆಯೊಂದಿಗೆ ಮತ್ತಷ್ಟು ತೊಡಗಿಸಿಕೊಳ್ಳಬೇಕಿದ್ದು, ಅದರಲ್ಲಿ ಚೀನಾವೂ ಸೇರಿದೆ. ಆದರೆ ಚೀನಾದೊಂದಿಗೆ ಆರ್ಥಿಕ ಸಂಬಂಧ ಹೊಂದುವ ಜತೆಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ದೃಢವಾಗಿ ನಿಲ್ಲಬೇಕು ಎಂದರು.
ಜಗತ್ತು ಸ್ಪರ್ಧಾತ್ಮಕವಾಗಿದೆ. ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇಡೀ ಜಗತ್ತಿನೊಂದಿಗೆ ವ್ಯಾಪಾರ ಮಾಡಬೇಕು. ಅದರಲ್ಲಿ ಚೀನಾವೂ ಸೇರಿದೆ. ಆದರೆ ನಾವು ಆತ್ಮವಿಶ್ವಾಸದಿಂದ ವ್ಯವಹರಿಸಬೇಕು ಮತ್ತು ಗಡಿಯಲ್ಲಿ ಹೇಗೆ ದೃಢವಾಗಿ ನಿಂತಿದ್ದೇವೋ ಹಾಗೆಯೇ ನಮ್ಮ ನಿಲುವಿನಲ್ಲೂ ದೃಢವಾಗಿರಬೇಕು” ಎಂದು ಜೈಶಂಕರ್ ಹೇಳಿದರು.
ಭಾರತ ಮತ್ತು ಚೀನಾ ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧವನ್ನು ಸ್ಥಿರವಾಗಿಡಲು ಆಸಕ್ತಿ ಹೊಂದಿವೆಯಾದರೂ ಉಭಯ ದೇಶಗಳ ನಡುವಿನ ಗಡಿಯಲ್ಲಿನ ಪರಿಸ್ಥಿತಿಯೇ ಸಂಬಂಧಗಳ ಸ್ಥಿತಿಗತಿಗಳನ್ನು ಬಹುಮಟ್ಟಿಗೆ ನಿರ್ಧರಿಸಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
2020ರ ಬೇಸಿಗೆಯಿಂದ 2024ರ ಶರತ್ಕಾಲದವರೆಗೆ ನಾವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವುದು ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧಕ್ಕೆ ಮೂಲಭೂತ ಅಗತ್ಯ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
2020ರಿಂದ 2024ರವರೆಗೆ ಭಾರತ-ಚೀನಾ ಸಂಬಂಧಗಳು ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದವು. ಇದಕ್ಕೆ ಪ್ರಮುಖ ಕಾರಣ ಗಡಿ ಪ್ರದೇಶದಲ್ಲಿನ ಪರಿಸ್ಥಿತಿ ಎಂದು ಹೇಳಿದರು.
ಕೊನೆಗೂ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಉತ್ತಮ ಸಂಬಂಧಗಳಿಗೆ ಪೂರ್ವಾಪೇಕ್ಷಿತ. ಗಡಿಯ ಸ್ಥಿತಿಯೇ ಬಹುಮಟ್ಟಿಗೆ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯನ್ನು ನಿರ್ಧರಿಸುತ್ತದೆ” ಎಂದು ಜೈಶಂಕರ್ ಹೇಳಿದರು.





