ಎಚ್ಚರಿಕೆ ಎಚ್ಚರಿಕೆ! 80ರ ಪೋಟೋ ಟ್ರೆಂಡ್‌ನ ಹಿಂದಿರುವ ಕರಾಳ ಮುಖ- ಟ್ರೆಂಡ್‌ಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ

ಒಂದು ಪೋಟೋ, ಸೈಬರ್ ಅಪರಾಧಿಗಳಿಗೆ ಬಂಡವಾಳವಾಗಬಹುದು ಎನ್ನುವುದನ್ನುನಾವು ಯಾವತ್ತು ಮರೆಯಬಾರದು. ಯಾವುದೇ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಪೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾದನಾಯಕನಹಳ್ಳಿ ಪೊಲೀಸರು ಸೂಚಿಸಿದ್ದಾರೆ.

80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಪೋಟೋಗಳನ್ನ ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್‌ಗಳು ಹಾಗೂ ಆನ್‌ಲೈನ್‌ ಲಿಂಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ

ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಸಾರ್ವಜನಿಕರನ್ನ ವಂಚಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನಜಾಗೃತಿ ಮೂಡಿಸಿದ್ದಾರೆ.

ಫೋಟೋ ಎಡಿಟಿಂಗ್ ಅಥವಾ ಹೊಸ ಮಾದರಿಯ ಫೋಟೋ ಸೃಷ್ಟಿಸುವ ನೆಪದಲ್ಲಿ ಕೆಲವರು ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳ ವಿವರ ಕೇಳುವ ಸಾಧ್ಯತೆ ಇದೆ. ಪಾಸ್‌ವರ್ಡ್‌, ಬ್ಯಾಂಕ್‌ ಖಾತೆ ಸೇರಿದಂತೆ ಯಾವುದೇ ಸೂಕ್ಷ್ಮ ಮಾಹಿತಿಯನ್ನ ಅಪರಿಚಿತ ವ್ಯಕ್ತಿಗಳು ಅಥವಾ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಅಪರಿಚಿತ ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡದಂತೆ ಹಾಗೂ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಯಾವುದೇ ಆನ್‌ಲೈನ್‌ ಸೇವೆ ಬಳಸುವ ಮುನ್ನ ಅದರ ವಿಶ್ವಾಸಾರ್ಹತೆ ಪರಿಶೀಲಿಸುವಂತೆ ಪೊಲೀಸರು ತಿಳಿವಳಿಕೆ ನೀಡಿದ್ದಾರೆ.

80ರ ದಶಕದ AI ಫೋಟೋ ಟ್ರೆಂಡ್ ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಮಾದರಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 80ರ ದಶಕದ ಶೈಲಿಯ ಫೋಟೋಗಳನ್ನು ಸೃಷ್ಟಿಸುವ ಟ್ರೆಂಡ್ ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ, ಇಂತಹ AI ಅಪ್ಲಿಕೇಶನ್‌ಗಳ ಹಿಂದೆ ದೊಡ್ಡ ಮಟ್ಟದ ಸೈಬರ್ ಭದ್ರತೆಯ ಅಪಾಯಗಳು ಅಡಗಿವೆ ಎನ್ನುವುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು

ವಾಸ್ತವದಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ ಪೋಟೋವನ್ನು 1980ರ ದಶಕದ ರೆಟ್ರೋ ಲುಕ್‌ಗೆ ಬದಲಾಯಿಸುವ ಫಿಲ್ಟರ್‌ಗಳು ಭಾರಿ ಸೌಂಡ್ ಮಾಡುತ್ತಿವೆ. ಎಲ್ಲರೂ ತಮ್ಮ ಪೋಟೋಗಳನ್ನು ಅಪ್‌ಲೋಡ್ ಮಾಡಿ ಸಂತಸ ಪಡುತ್ತಿದ್ದಾರೆ. ಈ ಉಚಿತ ಮೋಜಿನ ಹಿಂದೆ ನಿಮ್ಮ ವೈಯಕ್ತಿಕ ಸುರಕ್ಷತೆ ಅಪಾಯದಲ್ಲಿದೆ.
.
ಆಪ್‌ಗಳಿಗೆ ನಿಮ್ಮ ಕ್ಯಾಮೆರಾ ಮತ್ತು ಗ್ಯಾಲರಿಯ ಸಂಪೂರ್ಣ ಪ್ರವೇಶ ನೀಡುವಾಗ ಎಚ್ಚರಿಕೆ ವಹಿಸಿ.ಸೈಬರ್ ಕ್ರೈಂಗೆ ದೂರು ನೀಡಿ: ಒಂದು ವೇಳೆ ನಿಮ್ಮ ಫೋಟೋ ದುರುಪಯೋಗವಾಗಿದ್ದರೆ ತಕ್ಷಣn ವೆಬ್‌ಸೈಟ್ ಅಥವಾ 1930 ಉಚಿತ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿ.
ಅಪರಿಚಿತ ಲಿಂಕ್/ಆಪ್‌ಗಳನ್ನು ಬಳಸಬೇಡಿ: ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಅಧಿಕೃತವಲ್ಲದ, ಹೊಸದಾಗಿ ಬಂದಿರುವ AI ಫೋಟೋ ಎಡಿಟಿಂಗ್ ಆಪ್‌ಗಳನ್ನು ಡೌನ್‌ಲೋಡ್ ಮಾಡಬಾರದು.

ಸೈಬರ್ ತಜ್ಞರು ಮತ್ತು ಪೊಲೀಸರ ಎಚ್ಚರಿಕೆ ಈ ಟ್ರೆಂಡ್ ಮಜವಾಗಿದ್ದರೂ, ಇದರ ಹಿಂದೆ ದೊಡ್ಡ ಅಪಾಯವಿದೆ ಎಂದು ಮಾದನಾಯಕನಹಳ್ಳಿ ಪೊಲೀಸರು ಮತ್ತು ಸೈಬರ್ ತಜ್ಞರು ಸಾರ್ವಜನಿಕರಿಗೆ ಬಿಗ್ ವಾರ್ನಿಂಗ್ ನೀಡಿದ್ದಾರೆ.

ಡೇಟಾ ಕಳವು: ಅಪರಿಚಿತ ಥರ್ಡ್-ಪಾರ್ಟಿ ಆ್ಯಪ್‌ಗಳು ಅಥವಾ ಎಐ ಲಿಂಕ್‌ಗಳಿಗೆ ನಿಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು

ಡಿಟೇಲ್ಸ್ ದುರುಪಯೋಗ: ಇಂತಹ ಎಐ ಟೂಲ್‌ಗಳು ನಿಮ್ಮ ಮುಖದ ಚಹರೆಯನ್ನು ದುರುಪಯೋಗಪಡಿಸಿಕೊಂಡು, ಡೀಪ್‌ಫೇಕ್ ವಿಡಿಯೋ ಅಥವಾ ಫೋಟೋಗಳನ್ನು ಸೃಷ್ಟಿಸುವ ಅಪಾಯವಿರುತ್ತದೆ. ಹೀಗಾಗಿ ನೆಟ್ಟಿಗರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others