ಮೈಸೂರು ದಸರಾ 2026: ಜಂಬೂ ಸವಾರಿ, ಡ್ರೋನ್ ಶೋ ವೀಕ್ಷಣೆಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಶರು

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರವಾಸಿಗರಿಗೆ ಮೈಸೂರು ಜಿಲ್ಲಾಡಳಿತ ಮಹತ್ವದ ಮಾಹಿತಿ ನೀಡಿದೆ. ಅರಮನೆ ಆವರಣದಲ್ಲಿ ನಡೆಯುವ ವಿಶ್ವಪ್ರಸಿದ್ದ ಜಂಬೂ ಸವಾರಿ, ಸಾಹಸಮಯ ಪಂಜಿನ ಕವಾಯತು ಹಾಗೂ ಆಕರ್ಷಕ ಡ್ರೋನ್ ಶೋ ವೀಕ್ಷಣೆಗೆ ಅಗತ್ಯವಿರುವ ಟಿಕೆಟ್‌ಗಳು ಮತ್ತು ಗೋಲ್ಡ್ ಕಾರ್ಡ್‌ಗಳ ಆನ್‌ಲೈನ್ ಮಾರಾಟ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ.

ವೇದಿಕೆ ಸಜ್ಜು, ವೆಬ್‌ಸೈಟ್ ಲಭ್ಯ:

ಈ ಬಾರಿಯ ದಸರಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸರ್ಕಾರ ನಿರ್ಧರಿಸಿದ್ದು, ಸಾಂಸ್ಕೃತಿಕ ನಗರಿಯಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಪ್ರವಾಸಿಗರು ಸುಲಭವಾಗಿ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗುವಂತೆ ಅಧಿಕೃತ ಜಾಲತಾಣ mysoredasara.gov.in ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಡಳಿತದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದರ ಹಾಗೂ ಸೌಲಭ್ಯಗಳ ವಿವರ:

ದರ ಬದಲಾವಣೆ ಇಲ್ಲ: ಸಾರ್ವಜನಿಕರ ಅನುಕೂಲಕ್ಕಾಗಿ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ದರಗಳನ್ನು ಕಳೆದ ಬಾರಿಯ ದರಗಳಿಗೇ ಕಾಯ್ದಿರಿಸಲಾಗಿದೆ.

ಗೋಲ್ಡ್ ಕಾರ್ಡ್ ವಿಶೇಷತೆ: ಗೋಲ್ಡ್ ಕಾರ್ಡ್ ಹೊಂದಿರುವ ವೀಕ್ಷಕರಿಗೆ ಜಂಬೂ ಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಯ ಜೊತೆಗೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ಡ್ರೋನ್ ಶೋ ಕಾರ್ಯಕ್ರಮಕ್ಕೆ ಪ್ರವೇಶಾವಕಾಶ ಸಿಗಲಿದೆ.

ನಿಯಮ: ಪ್ರತಿಯೊಂದು ಗೋಲ್ಡ್ ಕಾರ್ಡ್ ಅಥವಾ ಪ್ರವೇಶ ಚೀಟಿಯಲ್ಲಿ ಒಬ್ಬರಿಗೆ ಮಾತ್ರ ಕಲಾಪ ವೀಕ್ಷಿಸಲು ಅವಕಾಶವಿರುತ್ತದೆ.

Share it :

Leave a Reply

Your email address will not be published. Required fields are marked *