ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಈ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ.
ಉದ್ದೇಶಿತ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದ (NKK) 778 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ (KK – 371J) 36 ಹುದ್ದೆಗಳು ಸೇರಿವೆ. ಅಲ್ಲದೆ, 9 ಮತ್ತು 10ನೇ ತರಗತಿಗಳಿಗೆ ಪದವಿ ಪೂರ್ವ ಉಪನ್ಯಾಸಕರಿಂದ ಬೋಧನಾ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸೇವಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು ಈ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲು ಕೆಇಎಗೆ ಸೂಚಿಸಲಾಗಿದೆ.
ವಿಷಯವಾರೂ ಹುದ್ದೆಗಳ ವಿವರ:
| ಕ್ರ.ಸಂ. | ವಿಷಯ (Subject) | ಉಳಿಕೆ ಮೂಲ ವೃಂದ (NKK) | ಕಲ್ಯಾಣ ಕರ್ನಾಟಕ (KK) | ಒಟ್ಟು ಹುದ್ದೆಗಳು |
| 1 | ಕನ್ನಡ (Kannada) | 84 | 5 | 89 |
| 2 | ಇಂಗ್ಲಿಷ್ (English) | 140 | 5 | 145 |
| 3 | ಇತಿಹಾಸ (History) | 45 | 5 | 50 |
| 4 | ಅರ್ಥಶಾಸ್ತ್ರ (Economics) | 85 | 5 | 90 |
| 5 | ರಾಜ್ಯಶಾಸ್ತ್ರ (Political Science) | 20 | 5 | 25 |
| 6 | ಸಮಾಜಶಾಸ್ತ್ರ (Sociology) | 20 | 5 | 25 |
| 7 | ಭೂಗೋಳಶಾಸ್ತ್ರ (Geography) | 10 | 0 | 10 |
| 8 | ವಾಣಿಜ್ಯಶಾಸ್ತ್ರ (Commerce – Bst + Acc) | 146 | 4 | 150 |
| 9 | ಭೌತಶಾಸ್ತ್ರ (Physics) | 30 | 0 | 30 |
| 10 | ರಸಾಯನಶಾಸ್ತ್ರ (Chemistry) | 30 | 0 | 30 |
| 11 | ಗಣಿತ (Mathematics) | 30 | 0 | 30 |
| 12 | ಜೀವಶಾಸ್ತ್ರ (Biology) | 30 | 0 | 30 |
| 13 | ಗಣಕಯಂತ್ರ ವಿಜ್ಞಾನ (Computer Science) | 108 | 2 | 110 |
| ಒಟ್ಟು | 778 | 36 | 814 |
ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿ ಪೂರ್ವ) ಸರ್ಕಾರಿ ಅಧೀನ ಕಾರ್ಯದರ್ಶಿ ಹೆಚ್.ಎಂ. ಸುದರ್ಶನ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ನೇಮಕಾತಿ ಪ್ರಕಟಣೆ ಮತ್ತು ಅಧಿಸೂಚನೆ ಹೊರಬೀಳಲಿದೆ.





