ರೇಣುಕಾಸ್ವಾಮಿ ಕೊಲೆ ಪ್ರಕರಣ: ಸ್ಯಾಂಡಲ್‌ವುಡ್ ನಟರಾದ ಚಿಕ್ಕಣ್ಣ, ಯಶಸ್ ಸೂರ್ಯಗೆಕೋರ್ಟ್ ಸಮನ್ಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು (59th CCH Court) ಮಹತ್ವದ ಕ್ರಮ ಕೈಗೊಂಡಿದ್ದು, ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ (Actor Chikkanna) ಹಾಗೂ ನಟ ಯಶಸ್ ಸೂರ್ಯ (Yashas Surya) ಅವರಿಗೆ ನ್ಯಾಯಾಲಯದ ಸಮನ್ಸ್ (Court Summons) ಜಾರಿ ಮಾಡಿದೆ.

ಕೃತ್ಯ ನಡೆಯುವ ಮುನ್ನ ಪ್ರಕರಣದ ಪ್ರಮುಖ ಆರೋಪಿ (Accused) ನಟ ದರ್ಶನ್ (Darshan) ಭಾಗಿಯಾಗಿದ್ದ ಖಾಸಗಿ ಪಾರ್ಟಿಯಲ್ಲಿ ಈ ಇಬ್ಬರೂ ನಟರು ಜತೆಯಾಗಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್ ಪಬ್‌ನಲ್ಲಿ (Stony Brook Pub) ನಡೆದಿದ್ದ ಈ ಕೂಟದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (Charge Sheet) ಇಬ್ಬರನ್ನೂ ಪ್ರಮುಖ ಸಾಕ್ಷಿಗಳನ್ನಾಗಿ (Witnesses) ಹೆಸರಿಸಲಾಗಿದೆ. ಚಿಕ್ಕಣ್ಣ ಅವರಿಗೆ ಸಿಡಬ್ಲ್ಯೂ-80 (CW-80) ಹಾಗೂ ಯಶಸ್ ಸೂರ್ಯ ಅವರಿಗೆ ಸಿಡಬ್ಲ್ಯೂ-98 (CW-98) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 13ರಂದು ಸಾಕ್ಷ್ಯ ಹೇಳಲು ಆದೇಶ

ಅಂದು ಪಾರ್ಟಿಯಲ್ಲಿ ನಡೆದ ಘಟನೆಗಳು ಹಾಗೂ ಆರೋಪಿಗಳ ಚಲನವಲನದ ಕುರಿತು ನ್ಯಾಯಾಲಯದಲ್ಲಿ ಅಧಿಕೃತ ಸಾಕ್ಷ್ಯ (Evidence) ದಾಖಲಿಸುವ ಸಲುವಾಗಿ ನ್ಯಾಯಾಧೀಶರು ಈ ಸಮನ್ಸ್ ರವಾನಿಸಿದ್ದಾರೆ. ಬರುವ ಅಕ್ಟೋಬರ್ 13 ರಂದು (October 13) ಇಬ್ಬರೂ ನಟರು ಖುದ್ದಾಗಿ ನ್ಯಾಯಾಲಯಕ್ಕೆ (Court) ಹಾಜರಾಗಿ ವಿಚಾರಣೆ ಎದುರಿಸುವಂತೆ ನಿರ್ದೇಶನ ನೀಡಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others