ಕೆಟ್ಟ ಹವಾಮಾನ: ಪುಣೆ-ಪಾಟ್ನಾ ಇಂಡಿಗೋ ವಿಮಾನ ಲಕ್ನೋದಲ್ಲಿ ತುರ್ತು ಭೂಸ್ಪರ್ಶ – 198 ಪ್ರಯಾಣಿಕರು ಸೇಫ್

ಹವಾಮಾನ — ಕೆಟ್ಟ ಹವಾಮಾನ: ಪುಣೆ-ಪಾಟ್ನಾ ಇಂಡಿಗೋ ವಿಮಾನ ಲಕ್ನೋದಲ್ಲಿ ತುರ್ತು ಭೂಸ್ಪರ್ಶ - 198 ಪ್ರಯಾಣಿಕರು ಸೇಫ್

ಪಾಟ್ನಾದಲ್ಲಿ ಕಾಣಿಸಿಕೊಂಡ ಕೆಟ್ಟ ಹವಾಮಾನ ಮತ್ತು ಕಡಿಮೆ ಗೋಚರತೆಯ ಕಾರಣದಿಂದಾಗಿ ಪುಣೆಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ (Divert) ಸುರಕ್ಷಿತವಾಗಿ ಇಳಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಹವಾಮಾನ ತಿಳಿಯಾದ ಬಳಿಕ ಇಂದು ಬೆಳಿಗ್ಗೆ ವಿಮಾನವು ಲಕ್ನೋದಿಂದ ಪಾಟ್ನಾಗೆ ತನ್ನ ಪ್ರಯಾಣವನ್ನು ಮುಂದುವರೆಸಿದೆ.

ವಿಮಾನದಲ್ಲಿ 187 ವಯಸ್ಕ ಪ್ರಯಾಣಿಕರು, 5 ಶಿಶುಗಳು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 198 ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನವಿದ್ದ ಕಾರಣ ಲ್ಯಾಂಡಿಂಗ್‌ಗೆ ಅನುಮತಿ ಸಿಗಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್ ವಿಮಾನವನ್ನು ಲಕ್ನೋಗೆ ತಿರುಗಿಸಿದರು.

ಪುಣೆಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಸಂಸ್ಥೆಯ 6E 653 ಸಂಖ್ಯೆಯ ವಿಮಾನವು, ಇಂದು (ನವೆಂಬರ್ 23, ಸೋಮವಾರ) ನಸುಕಿನ ಜಾವ 2:45ರ ಸುಮಾರಿಗೆ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.

ಇಂದು ನಸುಕಿನ ಜಾವ 2:45ರ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಲಾಯಿತು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಕೆಳಗಿಳಿಸಲಾಯಿತು. ಜೊತೆಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗ: ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಪುಣೆಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಯೋ ವಿಮಾನ (Pune Patna IndiGo Flight) ಲಕ್ನೋ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂದು (ಸೋಮವಾರ) ನಸುಕಿನ ಜಾವ 2.45ರ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ.

187 ಪ್ರಯಾಣಿಕರು, 5 ಶಿಶುಗಳು ಸೇರಿ ಒಟ್ಟು 198 ಮಂದಿಯನ್ನು ಹೊತ್ತ 6E 653 ಸಂಖ್ಯೆ ವಿಮಾನವು ಪುಣೆಯಿಂದ ಪಾಟ್ನಾಗೆ ಹೊರಟಿತ್ತು. ಪಾಟ್ನಾದಲ್ಲಿ ಪ್ರತಿಕೂಲ ಹವಾಮಾನ (Bad Weather) ಹಾಗೂ ಕಡಿಮೆ ಗೋಚರತೆಯಿಂದ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿತ್ತು. ಹೀಗಾಗಿ ಕೂಡಲೇ ವಿಮಾನವನ್ನ ಲಕ್ನೋಗೆ ಡೈವರ್ಟ್‌ ಮಾಡಲಾಯಿತು.

💬 ಕಾಮೆಂಟ್ • Comments (0)

💬 ಓದುಗರ ಕಾಮೆಂಟ್‌ಗಳು • Reader Comments (0)

ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post