ಶೂಟಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಸಂಭ್ರಮ : ಮೋನಾ ಅಗರ್ವಾಲ್‌ಗೆ ಚಿನ್ನದ ಪದಕ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games) ಕ್ರೀಡಾಕೂಟದ ಮೊದಲ ದಿನವೇ ಭಾರತದ ಶೂಟರ್ ಮೋನಾ ಅಗರ್ವಾಲ್ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮೋನಾ ಅಗರ್ವಾಲ್ (Mona Agarwal) ಅವರು ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದು, ಈ ಮೂಲಕ ಭಾರತ ತನ್ನ ಖಾತೆಯನ್ನು ತೆರೆದಿದೆ.

ಐಚಿ-ನಗೋಯಾದಲ್ಲಿ ನಡೆಯುತ್ತಿದ್ದ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನ 10 ಮೀಟರ್ ಏರ್ ರೈಫಲ್ (10m Air Rifle final) ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಮೋನಾ ಅಗರ್ವಾಲ್ ಮತ್ತು ಅವನಿ ಲೇಖರಾ (Avani Lekhara) ಅತ್ಯುತ್ತಮ ಪ್ರದರ್ಶನ ನೀಡಿ, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಶೂಟರ್‌ಗಳು ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನು ತಂದುಕೊಟ್ಟಿದ್ದಾರೆ.

ಮೋನಾ ಅಗರ್ವಾಲ್ ಅವರು ಅರ್ಹತಾ ಸುತ್ತಿನಲ್ಲಿ (Qualification Round) 629.1 ಅಂಕಗಳನ್ನು ಗಳಿಸುವ ಮೂಲಕ ಹೊಸ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ಬರೆದು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಆ ಬಳಿಕ ನಡೆದ ಮುಖ್ಯ ಫೈನಲ್ ಪಂದ್ಯದಲ್ಲಿ ಮೋನಾ ಒಟ್ಟು 250.0 ಅಂಕಗಳನ್ನು ಗಳಿಸಿ ಕ್ರೀಡಾಕೂಟದ ಹೊಸ ಫೈನಲ್ ದಾಖಲೆಯೊಂದಿಗೆ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡರು.

ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಪ್ರಮುಖ ಶೂಟರ್, ಹಾಲಿ ಚಾಂಪಿಯನ್ ಅವನಿ ಲೇಖರಾ ಅವರು 249.6 ಅಂಕಗಳನ್ನು ಪಡೆದು ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಭಾರತ ಈ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡನ್ನೂ ತನ್ನದಾಗಿಸಿಕೊಂಡು ಇತಿಹಾಸ ಸೃಷ್ಟಿಸಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post