ನವದೆಹಲಿ: ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸಂಸದೆ, ನಟಿ ರಮ್ಯಾ ಗುಡುಗಿದ್ದಾರೆ ಹೌದು ಮೋದಿ ವಿಚಾರಕ್ಕೆ ಬಂದರೆ ಸಾಕು ನಟಿ ಕಂಗನಾ ರಣಾವತ್ ರಿಯಾಕ್ಟ್ ಆಗುತ್ತಲೆ ಇರುತ್ತಾರೆ. ಮೊನ್ನೆ ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಕರು ಧರಣಿ ನಡೆಸಿದ್ದರು. ಈ ವಿಚಾರಕ್ಕೆ ನಟಿ ಕಂಗನಾ ರಣಾವತ್ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲೇ ನಟಿ ಕಂಗನಾ ರಣಾವತ್ ವಿರುದ್ಧ ಕೆಲವು ನಟ-ನಟಿಯರು ಮಾತಿನ ಛಾಟಿ ಬಿಸಿದ್ದಾರೆ.
ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹಿಂದಿನ ಹೇಳಿಕೆ ನೆನಪಿಸಿಕೊಳ್ಳಬೇಕು ಎಂದು ಸಂಸದೆ, ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸಂಸದೆ, ನಟಿ ರಮ್ಯಾ ಇದೀಗ ಕಿಡಿಕಾರಿದ್ದಾರೆ.ರಾಮ ನನ್ನ ಪಾಲಿಗೆ ಭಗವಂತ. ಒಬ್ಬ ಹಿಂದೂವಾಗಿ ರಾಮಮಂದಿರದ ವಿಚಾರದಲ್ಲಿ ನನ್ನ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಅದಕ್ಕೆ ಎಲ್ಲಿದೆ ಆಕ್ರೋಶ? ಎಂದು ಪ್ರಶ್ನಿಸುವ ಮೂಲಕ ಕಂಗನಾ ಅವರ ದ್ವಂದ್ವ ನಿಲುವಿನ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮತ್ತೊಂದ್ಕಡೆ, ಕಂಗನಾ ಎಕ್ಸ್ನಲ್ಲಿ ಹೊಸ ಪೋಸ್ಟ್ ಮಾಡಿದ್ದು, ನಾನೀಗ ಜಾಗೃತ ಹಿಂದೂ ಆಗಬೇಕು. ಏಕೆಂದರೆ, ಮುಸ್ಲಿಮರನ್ನು ಭೇಟಿಯಾಗುವ ಹಿಂದೂಗಳು ಎಡಪಂಥೀಯರಾಗ್ತಿದ್ದಾರೆ ಅಂದಿದ್ದಾರೆ. ಇದು ಜೆನ್-ಝೀಗಳ ಬಗ್ಗೆ ದನಿ ಎತ್ತಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಗೆ ಹೇಳಿರುವ ಮಾತು ಅಂತ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿದೆ.
ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಯುವಜನತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಮಂದಿರದ ವಿಚಾರವನ್ನು ಉಲ್ಲೇಖಿಸಿ ಕಂಗನಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಮ್ಯಾ, “ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹಿಂದಿನ ಹೇಳಿಕೆಗಳನ್ನು ನೆನಪಿಸಿಕೊಳ್ಳಬೇಕು” ಎಂದು ರಮ್ಯಾ ಟೀಕಿಸಿದ್ದಾರೆ.
ರಮ್ಯಾ ಪೋಸ್ಟ್‌ನಲ್ಲಿ ಏನಿದೆ ಗೊತ್ತಾ? ಇಲ್ಲಿದೆ ನೋಡಿ
.ಕೆಲವರಿಗೆ ಮೋದಿ ಭಗವಂತನಂತಿದ್ದಾರೆ, ಹೀಗಾಗಿ ಅವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ರಮ್ಯಾ ಹೇಳುತ್ತಾರೆ””2026ರ ಪ್ರಮುಖ ಹೈಲೈಟ್ ಎಂದರೆ ಕಂಗನಾ ರಣಾವತ್ ಜನರೇಷನ್ Zಗೆ ಗೌರವದ ಬಗ್ಗೆ ಪಾಠ ಮಾಡಿರುವುದು ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
2020ರ ರೈತರ ಪ್ರತಿಭಟನೆ ವೇಳೆ ಕಂಗನಾ ಕೊಟ್ಟ ವಿವಾದಾತ್ಮಕ ಹೇಳಿಕೆಯನ್ನು ರಮ್ಯಾ ಮತ್ತೆ ನೆನಪಿಸಿದ್ದಾರೆ. ಆ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 82 ವರ್ಷದ ವಯೋವೃದ್ಧ ರೈತ ಮಹಿಳೆಯ ಬಗ್ಗೆ ಕಂಗನಾ “100 ರೂಪಾಯಿಗೆ ಸಿಗುವ ಮಹಿಳೆ” ಎಂದಿದ್ದರು. ಅದನ್ನೇ ಉಲ್ಲೇಖಿಸಿರುವ ರಮ್ಯಾ, “ಕೋಟ್ಯಂತರ ಭಾರತೀಯರಿಗೆ ಆ ರೈತ ಮಹಿಳೆ ಅನ್ನದಾತೆ, ದೇವರ ಸಮಾನ. ಆಗ ಯಾರ ಭಾವನೆಗೂ ಧಕ್ಕೆಯಾಗಲಿಲ್ಲವೇ?” ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.
ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹಿಂದಿನ ಹೇಳಿಕೆಗಳನ್ನು ನೆನಪಿಸಿಕೊಳ್ಳಬೇಕು. 2026ರ ಪ್ರಮುಖ ಹೈಲೈಟ್ ಎಂದರೆ ಕಂಗನಾ ರಣಾವತ್ ಜೆನ್-ಝೀಗೆ ಗೌರವದ ಬಗ್ಗೆ ಪಾಠ ಮಾಡಿರುವುದು. ಕೆಲವರಿಗೆ ಮೋದಿ ದೇವರಂತಿದ್ದಾರೆ, ಹೀಗಾಗಿ ಅವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸಿದ ಜೆನ್-ಝಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಂಗನಾ ವಿರುದ್ಧ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





