ಶ್ರೀರಂಗಪಟ್ಟಣ: ಕೇವಲ ಹದಿಮೂರು ಕಾಲೋನಿಗಳಲ್ಲಿ ವಾಸಿಸುತ್ತಿದ್ದ ಜನಾಂಗ ಜುಲೈ 4. 1776 ರಲ್ಲಿ ಅಮೆರಿಕ “ನಾವು ಸ್ವತಂತ್ರರು” ಅಂತ ಜಗತ್ತಿಗೆ ತಿಳಿದಿದೆ ಎಂದು ಹಿರಿಯ ಗಾಂಧಿವಾದಿ ಡಾ ಬಿ ಸುಜಯ್ ಕುಮಾರ್ ಹೇಳಿದ್ದಾರೆ.
ಶ್ರೀರಂಗಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಗತ್ತಿನ ಹಿರಿಯಣ್ಣ ಅಮೆರಿಕ ಕೊಟ್ಟ ಕೊಡುಗೆ ಕತೆ,ವಿಚಾರದ ಸ್ವಾತಂತ್ರ್ಯ ಥಾಮಸ್ ಜೆಫರ್ಸನ್ ಬರೆದ “ಎಲ್ಲಾ ಮನುಷ್ಯರು ಸಮಾನರು” ಅನ್ನೋ ಒಂದು ವಾಕ್ಯ. ಇದು ಭಾರತದ ಸಂವಿಧಾನಕ್ಕೂ, ನಮ್ಮ ಟಿಪ್ಪುವಿನ ಆಡಳಿತಕ್ಕೂ ಸ್ಫೂರ್ತಿ ಆಯ್ತು. “ಪ್ರಜೆಗಳಿಂದ, ಪ್ರಜೆಗಳಿಗಾಗಿ ಸರ್ಕಾರ” ಅನ್ನೋ ಕನಸು ಎಂದರು.
ವಿಜ್ಞಾನ ಮತ್ತು ಕನಸು ಚಂದ್ರನ ಮೇಲೆ ಕಾಲಿಟ್ಟದ್ದು, ಇಂಟರ್ನೆಟ್, ಐಫೋನ್, ಹಾಲಿವುಡ್. “ಏನಾದ್ರೂ ಸಾಧಿಸಬಹುದು” ಅನ್ನೋ ಅಮೆರಿಕನ್ ಡ್ರೀಮ್ಸ್ ಇಡೀ ಜಗತ್ತಿನ ಯುವಕರಿಗೆ ರೆಕ್ಕೆ ಕೊಟ್ಟಿತು.ವೈವಿಧ್ಯದಲ್ಲಿ ಏಕತೆ ಜಗತ್ತಿನ ಎಲ್ಲಾ ದೇಶದ ಜನ ಹೋಗಿ ನೆಲೆಸಿದ ನಾಡು. ಅದನ್ನ ಒಂದು ರಾಷ್ಟ್ರವಾಗಿ ಕಟ್ಟಿದ್ದು ದೊಡ್ಡ ಸಾಧನೆ. ಆದರೆ 1776 ರಲ್ಲಿ “ಸಮಾನತೆ” ಬಗ್ಗೆ ಬರೆದವರೇ ಗುಲಾಮ ಪದ್ಧತಿ ಇಟ್ಟುಕೊಂಡಿದ್ದರು.
ಕಪ್ಪು ಜನರಿಗೆ, ಮೂಲನಿವಾಸಿ ರೆಡ್ ಇಂಡಿಯನ್ಸ್ ಗೆ ನಿಜವಾದ ಸ್ವಾತಂತ್ರ್ಯ ಬರೋಕೆ 200 ವರ್ಷ ಬೇಕಾಯ್ತು. ಸ್ವಾತಂತ್ರ್ಯದ ಘೋಷಣೆ ಮತ್ತು ವಾಸ್ತವದ ನಡುವೆ ಅಂತರ ಇತ್ತು.ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ, ಮಿಲಿಟರಿ ಶಕ್ತಿ ಆದ ಮೇಲೆ ಅಮೆರಿಕ ಅನೇಕ ಯುದ್ಧಗಳಲ್ಲಿ ಭಾಗಿಯಾಯ್ತು. “ಪ್ರಜಾಪ್ರಭುತ್ವ ಹರಡೋದು” ಹೆಸರಲ್ಲಿ ಬೇರೆ ದೇಶಗಳ ಮೇಲೆ ಪ್ರಭಾವ ಬೀರಿತು. ಶಕ್ತಿ ಬಂದಾಗ ವಿನಮ್ರತೆ ಇರಬೇಕಾ ಬೇಡವಾ, ಎಂಬ ಪ್ರಶ್ನೆ ನಮ್ಮೆಲ್ಲರದು.ಅಮೆರಿಕಕ್ಕೊ ಶ್ರೀರಂಗಪಟ್ಟಣಕ್ಕೂ ಸಂಬಂಧ ಹೊಂದಿದ 1780 ರಿಂದ 1790 ರಲ್ಲಿ ನಮ್ಮ ಟಿಪ್ಪು ಸುಲ್ತಾನ್ ಕೂಡ ಬ್ರಿಟನ್ ವಿರುದ್ಧ ಹೋರಾಡುತ್ತಿದ್ದ. ಟಿಪ್ಪುಗೂ “ಸ್ವತಂತ್ರ ವ್ಯಾಪಾರ, ಸ್ವತಂತ್ರ ಆಡಳಿತ” ಬೇಕಿತ್ತು. ಅಮೆರಿಕ ಫ್ರಾನ್ಸ್ ನಿಂದ ಸಹಾಯ ಪಡೆದು ಗೆದ್ದಿತು. ಟಿಪ್ಪು ಫ್ರಾನ್ಸ್ ನಿಂದ ಸಹಾಯ ಕೇಳಿದರು.
ಎರಡೂ ಹೋರಾಟ ಒಂದೇ ಕಾಲದಲ್ಲಿ, ಒಂದೇ ಶತ್ರುವಿನ ವಿರುದ್ಧ, ಅಮೆರಿಕ ಗೆದ್ದು 250 ವರ್ಷ ಆಯ್ತು. ನಾವು 1799 ರಲ್ಲಿ ಸೋತೆವು.ಆದ್ರೆ ಸೋಲು-ಗೆಲುವಿನ ಆಚೆ “ಸ್ವಾಭಿಮಾನದ ಹೋರಾಟ” ಎರಡೂ ಕಡೆ ಇತ್ತು.ಯಾಕಂದ್ರೆ ಯಾವುದೇ ದೇಶವೂ ಪರಿಪೂರ್ಣ ಅಲ್ಲ. ಎಲ್ಲಾ ದೇಶದಲ್ಲೂ ಕಥೆಯೂ ಇದೆ, ವ್ಯಥೆಯೂ ಇದೆ.
ಇತಿಹಾಸವನ್ನು ಹೊಗಳೋದು ಸುಲಭ. ಅರ್ಥ ಮಾಡಿಕೊಳ್ಳೋದು ಕಷ್ಟ. ಎಂದು ಸಂಜಯ ಪ್ರಕಾಶನ ಏರ್ಪಡಿಸಿದ್ದ ಅಮೆರಿಕ 250 ಕಥೆ ವ್ಯಥೆ ಅಮೆರಿಕ ಸಂಯುಕ್ತ ಸಂಸ್ಥಾನದ ಇನ್ನೂರೈವತ್ತು ವರ್ಷಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಡಾ ಬಿ ಸುಜಯ್ ಕುಮಾರ್ ಮಾತನಾಡಿ,ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಒಂದು ಆದ ಅಮೆರಿಕಾ ಸಂಯುಕ್ತ ಸಂಸ್ಥಾನದ 250ನೇ ಸ್ವಾತಂತ್ರ್ಯ ದಿನ. ಅದನ್ನ “ಕಥೆ – ವ್ಯಥೆ” ಅಂತ ಆಚರಿಸುವ ಕಾರ್ಯಕ್ಕೆ ಸಂಜಯ ಪ್ರಕಾಶನ ಮುಂದಾಗಿದ್ದು,ಸ್ವಾತಂತ್ರ್ಯ, ಸಮಾನತೆ, ಸತ್ಯ ಅನ್ನೋ ವಿಚಾರ. ಥಾಮಸ್ ಜೆಫರ್ಸನ್ ಬರೆದ ಆ ಸಾಲುಗಳು ಇಡೀ ಜಗತ್ತಿನ ಗುಲಾಮರಿಗೆ ಆಸೆ ಕೊಟ್ಟವು. ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿ ಆಯ್ತು.ಯಾವುದೇ ಮನುಷ್ಯ ಪರಿಪೂರ್ಣ ಅಲ್ಲ. ಯಾವುದೇ ದೇಶವೂ ಪರಿಪೂರ್ಣ ಅಲ್ಲ. “ಸತ್ಯವನ್ನ ಹುಡುಕೋದು ನಮ್ಮ ಕೆಲಸ. ಹೊಗಳೋದು ಅಲ್ಲ, ತೆಗಳೋದು ಅಲ್ಲ”.
ಶ್ರೀರಂಗಪಟ್ಟಣಕ್ಕೆ ಸಂದೇಶ 1776 ರಲ್ಲಿ ಅಮೆರಿಕ ಬ್ರಿಟನ್ ವಿರುದ್ಧ ಎದ್ದು ನಿಂತಿತು. 1799 ರಲ್ಲಿ ಇಲ್ಲೇ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಅದೇ ಬ್ರಿಟನ್ ವಿರುದ್ಧ ಹೋರಾಡಿ ವೀರಸ್ವರ್ಗ ಹೊಂದಿದರು.ಎರಡೂ ಕಡೆ ಹೋರಾಟದ ಆಶಯ ಒಂದೇ ಸ್ವರಾಜ್ಯ. ಟಿಪ್ಪು “ನನ್ನ ರೈತ, ನನ್ನ ನೇಕಾರ” ಅಂತ ಕನಸು ಕಂಡರು. ಅಮೆರಿಕ “ನನ್ನ ಪ್ರಜೆ, ನನ್ನ ಮತ” ಅಂತ ಕನಸು ಕಂಡಿತು ಎಂದರು.
ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್,ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ಪುರಸಭಾ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಪ್ರೊ ಮಹದೇವ್, ವಕೀಲ ಎಸ್ ಆರ್ ಸಿದ್ದೇಶ್, ಪತ್ರಕರ್ತ ಗಣಂಗೂರು ನಂಜೇಗೌಡ, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ,ಚಿಕ್ಕ ತಮ್ಮೇಗೌಡ, ರಂಗನಾಥ್, ಅಯೂಬ್, ಅಭಿಷೇಕ್, ಅಶ್ವತ್ಥ್ ನಾರಾಯಣ, ಮುಂತಾದವರು ಭಾಗಿಯಾಗಿದ್ದರು.




