ಅಮೆರಿಕನ್ನರ ಹೇಳಿಕೆಗಳು ನೆಲಮಟ್ಟದಲ್ಲಿ ನಮಗೆ ಕಾಣುತ್ತಿರುವ ವಾಸ್ತವಿಕತೆಗೆ ಹೊಂದಿಕೆಯಾಗುವುದಿಲ್ಲ : ಇರಾನ್

ಇರಾನ್: ಅಮೆರಿಕನ್ನರ ಹೇಳಿಕೆಗಳು ನೆಲಮಟ್ಟದಲ್ಲಿ ನಮಗೆ ಕಾಣುತ್ತಿರುವ ವಾಸ್ತವಿಕತೆಗೆ ಹೊಂದಿಕೆಯಾಗುವುದಿಲ್ಲ,” ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ, ಪರಿಸ್ಥಿತಿಯ ಕುರಿತಾದ ಅಮೆರಿಕದ ನಿಲುವನ್ನು ತಳ್ಳಿಹಾಕಿದ ಬಘಾಯಿ, ಮಾರುಕಟ್ಟೆಯ ವಾಸ್ತವಿಕತೆಯು ವಾಷಿಂಗ್ಟನ್‌ನ ಅಧಿಕೃತ ಹೇಳಿಕೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಹೊರ್ಮುಜ್ ಜಲಸಂಧಿಯಂತಹ ಆಯಕಟ್ಟಿನ ಪ್ರದೇಶದಲ್ಲಿ ಸಮುದ್ರಯಾನದ ಮೇಲಿನ ನಿಯಂತ್ರಣ ಮತ್ತು ಸಾಮಾನ್ಯ ಸರಕು ಸಾಗಣೆ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂಬ ವಾಷಿಂಗ್ಟನ್‌ನ ಹೇಳಿಕೆಗಳನ್ನು ಇರಾನ್ ಸೋಮವಾರ ತಳ್ಳಿಹಾಕಿದೆ.

“ಅಮೆರಿಕನ್ನರ ಹೇಳಿಕೆಗಳು ನೆಲಮಟ್ಟದಲ್ಲಿ ನಮಗೆ ಕಾಣುತ್ತಿರುವ ವಾಸ್ತವಿಕತೆಗೆ ಹೊಂದಿಕೆಯಾಗುವುದಿಲ್ಲ,” ಎಂದು ಬಘಾಯಿ ಹೇಳಿದರು. “ಹೊರ್ಮುಜ್ ಜಲಸಂಧಿ ಇನ್ನು ಮುಂದೆ ಪರಿಣಾಮಕಾರಿಯಾಗಿಲ್ಲ ಮತ್ತು ಇರಾನ್ ತನ್ನ ಪ್ರಭಾವವನ್ನು ಕಳೆದುಕೊಂಡಿದೆ ಎಂದು ಅವರು ಹೇಳುತ್ತಿರಬಹುದು; ಆದರೆ ನಾವು ನಮ್ಮದೇ ಆದ ಕ್ರಮಗಳನ್ನು ಮುಂದುವರಿಸುತ್ತಿದ್ದೇವೆ.” ಎಂದು ಹೇಳಿದ್ದಾರೆ.

ಪಾಶ್ಚಿಮಾತ್ಯ ಮಾಧ್ಯಮಗಳ ವರದಿಯ ಕುರಿತು ಮಾತನಾಡುತ್ತಾ, ಜಾಗತಿಕ ಸರಕುಗಳ ಬೆಲೆ ಏರಿಕೆ ಮತ್ತು ನೌಕಾಯಾನದ ಅಸ್ಥಿರತೆಯ ಮೂಲ ಕಾರಣವನ್ನು ತಪ್ಪಾಗಿ ಬಿಂಬಿಸಲು ವಿದೇಶಿ ಮಾಧ್ಯಮಗಳು ಸಂಘಟಿತ ಅಭಿಯಾನವನ್ನು ನಡೆಸುತ್ತಿವೆ ಎಂದು ವಕ್ತಾರರು ಆರೋಪಿಸಿದರು.

“ಹೌದು, ಕಾರಣ ಮತ್ತು ಪರಿಣಾಮಗಳ ಸ್ಥಾನವನ್ನು ಬದಲಾಯಿಸಲು ಪ್ರಯತ್ನಿಸುವ ಮಾಧ್ಯಮ ಅಭಿಯಾನವೊಂದು ನಡೆಯುತ್ತಿದೆ ಎಂಬುದು ನಮಗೆ ತಿಳಿದಿದೆ,” ಎಂದು ಅವರು ಗಮನಸೆಳೆದರು. ಅಲ್ಲದೆ, “ಮಾರ್ಚ್ 21 ರ ಮೊದಲು ಹೊರ್ಮುಜ್ ಜಲಸಂಧಿಯು ಮುಕ್ತವಾಗಿತ್ತು” ಮತ್ತು ಪ್ರಸ್ತುತ ಉಂಟಾಗಿರುವ ಅಡಚಣೆಗಳು ವಿದೇಶಿ ಹಸ್ತಕ್ಷೇಪದ ನೇರ ಪರಿಣಾಮವಾಗಿದೆ ಎಂದು ಹೇಳಿದರು.

ಈ ಪ್ರಮುಖ ಇಂಧನ ಸಾಗಣೆ ಮಾರ್ಗದ ಮೇಲೆ ಟೆಹ್ರಾನ್ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ಜೊತೆಗೆ, ವಿದೇಶಿ ಮಿಲಿಟರಿ ಆಕ್ರಮಣಶೀಲತೆ ಮತ್ತು ಆರ್ಥಿಕ ದಿಗ್ಬಂಧನಗಳು ಮುಂದುವರಿಯುವವರೆಗೂ ಈ ಪ್ರದೇಶದಲ್ಲಿ ಭದ್ರತೆ ಮರಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post