ಏಷ್ಯನ್ ಗೇಮ್ಸ್: ಇರಾನ್ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಮಹಿಳಾ ಬ್ರಿಗೇಡ್

ಭಾರತೀಯ ಮಹಿಳಾ ಕಬಡ್ಡಿ ತಂಡವು ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಭರ್ಜರಿ ಚಿನ್ನದ ಪದಕ ಗೆದ್ದುಕೊಂಡಿದೆ.ಶನಿವಾರ (ಸೆಪ್ಟೆಂಬರ್ 26, 2026) ನಡೆದ ಅತ್ಯಂತ ರೋಚಕ ಹಾಗೂ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇರಾನ್ ವಿರುದ್ಧ 37-34 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು.

ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತೀಯ ಮಹಿಳೆಯರು, 2018ರ ಜಕಾರ್ತಾ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಇರಾನ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ರೋಮಾಂಚನಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡವನ್ನು 37-34 ಅಂಕಗಳ ಅಂತರದಿಂದ ಮಣಿಸಿದ ಭಾರತ, ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಾಯಕಿ ಪುಷ್ಪಾ ರಾಣಾ ನೇತೃತ್ವದ ಭಾರತ ತಂಡವು ಪಂದ್ಯದ ಮೊದಲಾರ್ಧದಲ್ಲಿ 22-16 ರಿಂದ ಸ್ಪಷ್ಟ ಮುನ್ನಡೆ ಸಾಧಿಸಿತ್ತು.ದ್ವಿತೀಯಾರ್ಧದಲ್ಲಿ ಇರಾನ್ ತಂಡವು ಪ್ರಬಲ ಪೈಪೋಟಿ ನೀಡಿ ಅಂಕಗಳ ಅಂತರವನ್ನು ಕಡಿಮೆ ಮಾಡಿದರೂ, ಭಾರತದ ಬಲಿಷ್ಠ ಡಿಫೆನ್ಸ್ ಹಾಗೂ ಪೂಜಾ ಮತ್ತು ಸಂಜು ಅವರ ಅದ್ಭುತ ರೈಡಿಂಗ್ ದಾಳಿಯಿಂದಾಗಿ ಭಾರತ ಜಯ ಹಸ್ತಾಂತರಿಸಿಕೊಂಡಿತು.ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಸಿಕ್ಕ ನಾಲ್ಕನೇ ಚಿನ್ನದ ಪದಕ ಇದಾಗಿದೆ.ಈ ಗೆಲುವಿನೊಂದಿಗೆ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 3ಕ್ಕೆ ಏರಿದೆ.

ಭಾರತದ ಪದಕಗಳ ಸಂಖ್ಯೆ ಒಟ್ಟು 27ಕ್ಕೆ ಏರಿದೆ. ಇದರಲ್ಲಿ 3 ಚಿನ್ನ, 11 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿವೆ. ಸದ್ಯ ಭಾರತ ತಂಡವು ಪದಕಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಪುರುಷರ ಕಬಡ್ಡಿ ಈಗಾಗಲೇ ಫೈನಲ್‌ ತಲುಪಿದ್ದು, ಶೀಘ್ರದಲ್ಲೇ ಚಿನ್ನದ ಪದಕದ ಗೆಲ್ಲುವ ನಿರೀಕ್ಷೆಯಿದೆ

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post