ಮೋದಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ : BS ಯಡಿಯೂರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ‘ಅಂತ್ಯೋದಯ’ ತತ್ವದ ಆಧಾರದ ಮೇಲಿರುವ ಮೋದಿ ಅವರ ನಾಯಕತ್ವವು ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ನಡೆದ ‘ಸೇವಾ ಸಂಕಲ್ಪ’ ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಯಡಿಯೂರಪ್ಪ, ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷ ಮತ್ತು ಕಳೆದ 12 […]
ನಾನು ಬದುಕಿದ್ದೇನೆ ಅಂತ ದೂರು ಕೊಡೋದು ತಪ್ಪಾ? : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಿದ್ದಾರ್ಥ ಟ್ರಸ್ಟ್ ನಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಬದಲು ಅವರ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ. ಸಿದ್ದಾರ್ಥ ಟ್ರಸ್ಟ್ನಿಂದ ಫಾರ್ಮ್ 7 ಪ್ರಿಂಟ್ ಆಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಇನ್ನು ಕಾಂಗ್ರೆಸ್ ವಿರುದ್ದ ರಾಜ್ಯಪಾಲರಿಗೆ ಎನ್ಡಿಎ ಕೂಟ್ಟ ದೂರು ಕೊಟ್ಟ ಕುರಿತು ಪ್ರತಿಕ್ರಿಯಿಸಿದ ಅವರು, ಎನ್ಡಿಎ ನಾಯಕರು ರಾಜ್ಯಪಾಲರಿಗೆ ದೂರು ಕೊಡಲಿ. ಅವರ ಲೆಟರ್ ಹೆಡ್ನಲ್ಲಿ ಫಾರ್ಮ್ 7 […]
ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಸಚಿವರ ಚಲನವಲನದ ಮೇಲೆ ನಿಗಾ ಇಡಲಾಗಿದೆ : ಸಿಎಂ ಡಿಕೆಶಿ

ಬೆಂಗಳೂರು: ಸಚಿವರ ಟ್ರ್ಯಾಪ್ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ಎಂದು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರ ಚಲನವಲನದ ಮೇಲೆ ನಿಗಾ ಇಡಲಾಗಿದೆ, ಖಾಸಗಿ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರು ಹುಷಾರಾಗಿರುವಂತೆ ಸಿಎಂ ಎಚ್ಚರಿಕೆ ನೀಡಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಡಿಕೆಶಿ ಸುಳಿವು ನೀಡಿದ್ದು, ಟಾರ್ಗೆಟ್ ಮಾಡಿರುವ ಐವರು ಸಚಿವರ ಜೊತೆ ಡಿಕೆಶಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ […]
ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ದೇಶದ ಜನತೆಯೇ ಕಾರಣ, ನನಗೆ ‘ಜನತೆಯೇ ಜನಾರ್ದನ’ : ಮೋದಿ

ನವದೆಹಲಿ: ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ದೇಶದ ಜನತೆಯೇ ಕಾರಣ. ನನಗೆ ‘ಜನತೆಯೇ ಜನಾರ್ದನ’. ಕೋಟ್ಯಂತರ ನಾಗರಿಕರ ಅಚಲ ವಿಶ್ವಾಸ ಮತ್ತು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮವೇ ನನ್ನ ಅತಿ ದೊಡ್ಡ ಶಕ್ತಿ. ದೇಶ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ದೇಶಕ್ಕೆ ಸಂಪೂರ್ಣ ಉತ್ತರದಾಯಿಯಾಗಿದ್ದೇನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸುದೀರ್ಘ ಸೇವಾವಧಿಯನ್ನು ಪೂರೈಸಿದ ಐತಿಹಾಸಿಕ ಸಂದರ್ಭದಲ್ಲಿ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ […]
ವೈಭವ್ ಸೂರ್ಯವಂಶಿ ಇಷ್ಟ ಆದ್ರೆ, ಪ್ರಭ್ಸಿಮ್ರನ್ ಜತೆಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಇಷ್ಟ : ಪ್ರಿಯಾಂಶ್ ಆರ್ಯ

ಭಾರತೀಯ ಕ್ರಿಕೆಟ್ನಲ್ಲಿ ವೇಗವಾಗಿ ಬೆಳೆಯುತ್ತಿರುವ ‘ಇಂಡಿಯಾ ಎ’ ಮತ್ತು ‘ಪಂಜಾಬ್ ಕಿಂಗ್ಸ್’ ತಂಡದ ಬ್ಯಾಟರ್ ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮತ್ತು ಪ್ರಭ್ಸಿಮ್ರನ್ ಸಿಂಗ್ ಅವರೊಂದಿಗೆ ಬ್ಯಾಟಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಟಿ20 ಮಾದರಿಯು ಪ್ರಿಯಾನ್ಶ್ಗೆ ಅತ್ಯಂತ ಸೂಕ್ತವಾದದ್ದು, ಆದರೆ ಅಭಿಷೇಕ್, ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಈಗಾಗಲೇ ಭಾರತೀಯ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಇತ್ತ, ಪಿಬಿಕೆಎಸ್ ತಂಡದಲ್ಲಿ ಅವರ ಜೊತೆ ಆಡುವ ಪ್ರಭ್ಸಿಮ್ರನ್ ಕೂಡ ಇತ್ತೀಚಿನ ಜಿಂಬಾಬ್ವೆ ಸರಣಿಯ ತಂಡದಲ್ಲಿದ್ದರೂ, ಇನ್ನೂ […]
ಏಷ್ಯನ್ ಗೇಮ್ಸ್ ಸಾಧಕರಿಗೆ ಸಿಎಂ ಭರ್ಜರಿ ಸನ್ಮಾನ : ಚಿನ್ನ ಗೆದ್ದವರಿಗೆ 1 ಕೋಟಿ ರೂ. ಬಹುಮಾನ

ಬೆಂಗಳೂರು: 2026ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಸನ್ಮಾನಿಸಿ, ಆತ್ಮೀಯವಾಗಿ ಅಭಿನಂದಿಸಿದ್ದಾರೆ. ಕ್ರೀಡಾಪಟುಗಳ ಸುದೀರ್ಘ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು, ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ. ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ […]
ಶಾಸಕನಾಗಿರಲಿ, ಇಲ್ಲದಿರಲಿ ವರುಣ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಭಾವುಕರಾಗಿ ತಮ್ಮ ಕ್ಷೇತ್ರ ವರುಣಾದ ಜನತೆಗೆ ಮನವಿ ಮಾಡಿದ್ದಾರೆ. ಈ ಮೂಲಕ 2028ರ ಚುನಾವಣೆಯಲ್ಲಿ ತಾವು ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, “ರಾಜ್ಯದಲ್ಲಿ ಭೀಕರ ಬರಗಾಲ ಇದೆ. 150 ವರ್ಷಗಳಲ್ಲೇ ಅತಿ ದೊಡ್ಡ ಭೀಕರ ಬರ ಇದಾಗಿದೆ. 220 ತಾಲೂಕು ಈ ಹೊಡೆತಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಿದ್ದರೂ ಗ್ಯಾರಂಟಿ […]
ಸಬ್ಬಲ್ ರಾಣಿ ತಿಟ್ಟಿನ ರಣಗಂಭ – ಒಂದು ದಿಬ್ಬದಲ್ಲಿ ಅಡಗಿದ 1799ರ ಯುದ್ಧದ ನೆನಪು

ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆ ನೋಡಲು ಬರುವ ಲಕ್ಷಾಂತರ ಪ್ರವಾಸಿಗರು, ಅರಮನೆಯಿಂದ ದಕ್ಷಿಣಕ್ಕೆ ಇರುವ ಎತ್ತರದ ಬಯಲನ್ನು ಗಮನಿಸುವುದೇ ಇಲ್ಲ. ಆದರೆ ಆ ಬಯಲಿನ ಮಧ್ಯೆ ನಿಂತಿರುವ ಬಿಳಿ ಬಣ್ಣದ ಎತ್ತರದ ಕಂಬವೇ ಇತಿಹಾಸದ ಎರಡು ಕರಾಳ ಅಧ್ಯಾಯ ಗಳಿಗೆ ಸಾಕ್ಷಿ. ಅದರ ಹೆಸರೇ ಸಬ್ಬಲ್ ರಾಣಿ ತಿಟ್ಟಿನ ಮೆಮೋರಿಯಲ್ ಪಿಲ್ಲರ್ / ರಣಗಂಭ. ಆ ಹೆಸರು ಬಂದಿದ್ದು ಹೇಗೆ? ಇದಕ್ಕೆ ಆಧಾರ ಇತಿಹಾಸ ಪುಸ್ತಕವಲ್ಲ, ಸ್ವತಃ ಕರ್ನಾಟಕ ಸರ್ಕಾರದ ಪುರಾತತ್ವ, ಸಂಗ್ರಹಾಲಯ ಗಳು ಮತ್ತು ಪರಂಪರೆ […]
ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಇದೆ : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಹಿಂದೆ ಇರಾನ್ ದೇಶದ ನೇರ ಕೈವಾಡವಿದೆ. ಇದು ನನ್ನ ವೈಯಕ್ತಿಕವಾಗಿ ನಂಬಿಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೈಟ್ ಹೌಸ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು, ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಕಾಕ್ಪಿಟ್ನೊಳಗೆ ಭಾರತೀಯ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ್ದ ಎಂದರು. ಘಟನೆಯ ಬಳಿಕ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಚೇತರಿಸಿಕೊಳ್ಳುತ್ತಿದ್ದ ಪೈಲಟ್ ಜೊತೆ ನಡೆದ […]
ಕೇಂದ್ರ ಸರ್ಕಾರದಲ್ಲಿರುವ ರಂಗಾ ಬಿಲ್ಲಾ ಜೋಡಿಯಾಗಿದ್ದಾರೆ : ಮೋದಿ, ಶಾ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ವಿಜಯಪುರ: ಕೇಂದ್ರ ಸರ್ಕಾರದಲ್ಲಿರುವ ರಂಗಾ ಬಿಲ್ಲಾ ಜೋಡಿಯಾಗಿದ್ದಾರೆ ಎಂದು ಮೋದಿ, ಶಾ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿಎಸ್ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ನಟ ಪ್ರಕಾಶ ರಾಜ್ ಭಾಗಿಯಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ, ಸತ್ತಿದ್ದಾರೆ ಎಂದು ಮತ ಡಿಲೀಟ್ ಆಗಿರುವ ವ್ಯಕ್ತಿಗಳು ಅಳಲು ತೋಡಿಕೊಂಡರು. ಈ ವಿಚಾರವಾಗಿ ನಟ ಪ್ರಕಾಶ್ ರಾಜ್ ಮಾತನಾಡಿ, ಎಲ್ಲರನ್ನೂ ಹೊರಗೆ ಹಾಕುವ ಯೋಜನೆ ಇದರ ಹಿಂದೆ ಇದೆ ಎಂದು ಕಿಡಿಕಾರಿದ್ದಾರೆ ಮನುಷ್ಯ ಬದುಕಿದ್ದಾನೆ. ಆದರೆ ಎಸ್ ಐ ಆರ್ ನಲ್ಲಿ ಅವರು ಮರಣ […]