ವಿಮಾನವನ್ನು ಪತನಗೊಳಿಸುವುದೇ ನನ್ನ ಉದ್ದೇಶವಾಗಿತ್ತು. ನನಗೆ ಸಾವಿನ ಭಯವಿರಲಿಲ್ಲ : ಪೈಲಟ್ ಹಮ್ಮಾಮಿ

ರಿಯಾದ್: 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಹಾಗೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಆರೋಪವಿರುವ ಫ್ಲೈದುಬೈ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ತನಿಖಾಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿರವುದು ಬೆಳಕಿಗೆ ಬಂದಿದೆ. WSJ ವರದಿಯ ಪ್ರಕಾರ, ಹಮ್ಮಾಮಿ, ಜೂನ್ 2022ರಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿದ್ದ ಮತ್ತು ನಂತರ ಅಳಿಸಿಹಾಕಲಾದ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, ವಿಮಾನಯಾನ ಮತ್ತು ವಿಮಾನ ಚಾಲನಾ ತರಬೇತಿಯ (flight training) ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು. ವಿಮಾನಯಾನ ಮತ್ತು […]
ನನ್ನ ಹೆಣ್ಣುಮಕ್ಕಳು ಇಂತಹ ಘೋಷಣೆ ಬರೆಯುವ ಪರಿಸ್ಥಿತಿ ಏಕೆ ಬಂದಿದೆ? : ಶಿವರಾಜ್ ಸಿಂಗ್ ಚೌಹಾಣ್

ಭೂಪಾಲ್: ಮಹಿಳೆಯರು ಮತ್ತು ಯುವತಿಯರು ತಮ್ಮ ಸುರಕ್ಷತೆ ಹಾಗೂ ಪುರುಷರ ಕುರಿತು ಘೋಷಣೆಗಳನ್ನು ಕೂಗುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ವೈರಲ್ ವೀಡಿಯೊಗಳಿಗೆ ಪ್ರತಿಕ್ರಿಯಿಸಿದ್ದು, ಏಕ್ ಕಚೋರಿ, ದೋ ಸಮೋಸಾ – ಇನ್ ಮರ್ದೋನ್ ಕಾ ಕ್ಯಾ ಭರೋಸಾ” – ಲೈಂಗಿಕ ದೌರ್ಜನ್ಯ ಪ್ರಕರಣಗಳ ನಂತರ ಸುರಕ್ಷತೆ ಪ್ರಶ್ನಿಸಿ ದೆಹಲಿಯ ವಿದ್ಯಾರ್ಥಿನಿಯರು ನಡೆಸಿದ ಇತ್ತೀಚಿನ ಪ್ರತಿಭಟನೆಗಳ ಈ ಘೋಷವಾಕ್ಯವು ಕೇಂದ್ರ ಕೃಷಿ […]
ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಹಾಕುವವನು ನಾನು : ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು: ಕೋಲಾರದ ಮಾಜಿ ಸಂಸದರು ಮತ್ತು ನಮ್ಮ ರಾಜ್ಯ ಸರ್ಕಾರದ ಇಂದಿನ ಸಚಿವರಾದ ಕೆ.ಎಚ್. ಮುನಿಯಪ್ಪನವರನ್ನ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಟಾರ್ಗೆಟ್ ಮಾಡುತ್ತಾ ಬಂದಿದ್ದೀರಾ ಎಂದು ಹೆಸರು ಹೇಳದೆ ಎಂ.ಸಿ ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಪ್ರದೀಪ್ ಈಶ್ವರ್ , ಚಿಂತಾಮಣಿಯ ದೊಣ್ಣೆ ನಾಯಕನಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ […]
ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ : ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಬಾಲಿವುಡ್ ಹಿರಿಯ ನಟ ಸಂಜಯ್ ದತ್

ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ ಎಂಬ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರ ಹೇಳಿಕೆ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿತ್ತು, ಇದರ ಬೆನ್ನಲ್ಲೇ, ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’ ಟಾಕ್ ಶೋನಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸಂಜಯ್ ದತ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರಕ್ಕೆ ಕ್ಲಾರಟಿ ಕೊಟ್ಟಿದ್ದಾರೆ. ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ […]
ಚುನಾವಣಾ ಆಯೋಗದ ವಕ್ತಾರರಂತೆ ಬಿಜೆಪಿ ಮತ್ತು ಆರ್ಎಸ್ಎಸ್ ವರ್ತಿಸುತ್ತಿವೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಚುನಾವಣಾ ಮತದಾರರ ಪಟ್ಟಿಯ ಪರಿಷ್ಕರಣೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ‘ಸಂಘ್ ಇಂಟೆನ್ಸಿವ್ ರಿವಿಷನ್’ ಆಗಿ ಪರಿವರ್ತಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಚುನಾವಣಾ ಆಯೋಗದ ಮೌನ ಸಮ್ಮತಿಯೊಂದಿಗೆ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಚುನಾವಣಾ ಆಯೋಗದ ವಕ್ತಾರರಂತೆ ಬಿಜೆಪಿ ಮತ್ತು ಆರ್ಎಸ್ಎಸ್ ವರ್ತಿಸುತ್ತಿವೆ. ಮತದಾರರ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯ ಪ್ರಮಾಣವನ್ನು ಉಲ್ಲೇಖಿಸಿದ […]
ಕಾಕ್ಪಿಟ್ ಬಾಗಿಲು ತೆರೆದುದಷ್ಟೇ ನನ್ನ ಕೊನೆಯ ಅವಕಾಶವಾಗಿತ್ತು, ಹಾಗಾಗಿ ಕೊನೆಯ ಹೋರಾಟ ನಡೆಸಿದೆ : ಕ್ಯಾಪ್ಟನ್ ಸ್ಮಿತ್ ಮಚ್ಚರ್

ಕಾಕ್ಪಿಟ್ ಬಾಗಿಲು ತೆರೆದುದಷ್ಟೇ ನನ್ನ ಕೊನೆಯ ಅವಕಾಶವಾಗಿತ್ತು, ಹಾಗಾಗಿ ಕೊನೆಯ ಹೋರಾಟ ನಡೆಸಿದೆ ಎಂದು ಫ್ಲೈದುಬೈ ವಿಮಾನದಲ್ಲಿ ಸಹಪೈಲಟ್ ದಾಳಿ ನಡೆಸಿದ ಭೀಕರ ಕ್ಷಣಗಳನ್ನು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಭಾರತೀಯ ಪೈಲಟ್, ದಾಳಿ ಆರಂಭಕ್ಕೂ ಮುನ್ನ ಸಹಪೈಲಟ್ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ವಿಮಾನದಲ್ಲಿ 174 […]
ಬರಗಾಲದ ನಡುವೆ ಮಳೆ ಅಬ್ಬರ: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ

ರಾಜ್ಯದಲ್ಲಿ ವಾಡಿಕೆಗಿಂತ ಶೇ 35ರಷ್ಟು ಮಳೆ ಕೊರತೆಯಾಗಿದ್ದು, ಬರಗಾಲದ ಭೀತಿ ಹೆಚ್ಚಾಗಿದೆ. ಆದಾಗ್ಯೂ ಹವಾಮಾನ ಇಲಾಖೆಯು ಅಕ್ಟೋಬರ್ 4 ಮತ್ತು 5ರಂದು ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಕಂಡುಬರುತ್ತಿದೆ. ಕರಾವಳಿ ಕರ್ನಾಟಕದಲ್ಲಿ ನಿರಂತರ ಮಳೆಯ ವಾತಾವರಣ ಮುಂದುವರಿದಿದ್ದರೆ, ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮತ್ತು ಸಾಧಾರಣ ಮಳೆಯ […]
ಏನಾದ್ರು ಯೋಜನೆ ತನ್ನಿ ಸರ್ : ರೈತ ಯುವಕರು 35-40 ವರ್ಷ ಆದ್ರೂ ಹೆಣ್ಣು ಸಿಗ್ತಿಲ್ಲ – ಸಿಎಂ ಮುಂದೆ ರೈತನ ಅಳಲು

ಮೈಸೂರು: 35ರಿಂದ 40 ವರ್ಷ ವಯಸ್ಸಿನ ಅನೇಕ ಪುರುಷರು ವಿವಾಹವಾಗದೆ ತೀವ್ರ ಹತಾಶೆಗೆ ಒಳಗಾಗಿದ್ದಾರೆ, ಅವರ ಪೋಷಕರು ಅದೇ ಕೊರಗಿನಲ್ಲಿ ಪ್ರಾಣಬಿಟ್ಟಿದ್ದಾರೆ ಎಂದು ಹಳ್ಳಿ ಪ್ರದೇಶಗಳಲ್ಲಿ ರೈತ ಯುವಕರ ಸಮಸ್ಯೆಗಳನ್ನು ಸಿಎಂ ಮುಂದೆ ಇಟ್ಟಿದ್ದಾರೆ. ಅವಿವಾಹಿತ ಪುರುಷರಿಗೆ, ಅದರಲ್ಲೂ ರೈತರಿಗೆ ವಧು ಹುಡುಕಲು ಸಹಾಯವಾಗುವಂತಹ ಯೋಜನೆಯೊಂದನ್ನು ರೂಪಿಸುವಂತೆ ರೈತರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿ ಗಮನ ಸೆಳೆದರು. ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ರೈತ, […]
ಆಧಾರ ರಹಿತ ಆರೋಪ ಸರಿಯಲ್ಲ, ದಾಖಲೆ ತೋರಿಸಿ : ಸಚಿವ ಬಾಲಕೃಷ್ಣ

ಬೆಂಗಳೂರು: ನೈಸ್ ಯೋಜನಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಡಾ. ಎಚ್.ಡಿ. ರಂಗನಾಥ್ ಹಾಗೂ ತಾವು ಜಮೀನು ಹೊಂದಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಅಲ್ಲಿರುವ ಎಲ್ಲವನ್ನೂ ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಮಕ್ಕಳ ಹೆಸರಿಗೆ ನೋಂದಣಿ ಮಾಡಿಕೊಡುತ್ತೇನೆ. ನನ್ನ ಹೆಸರಿನಲ್ಲಿ ಅಲ್ಲಿ ಯಾವುದೇ ಜಮೀನು ಇದ್ದರೆ ಅದನ್ನೂ ಅವರಿಗೆ ನೀಡುತ್ತೇನೆ ಎಂದು ಹೇಳಿದರು. […]
ಸಿಗ್ಮಾ ಚಿತ್ರದ ವಿಮರ್ಶೆ :ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನಕ್ಕೆ ಭದ್ರ ಬುನಾದಿ ಹಾಕಿದ ಸಂದೀಪ್ ಕಿಶನ್- ವಾರಾಂತ್ಯದ ಕಲೆಕ್ಷನ್ ಮೇಲೆ ಚಿತ್ರತಂಡದ ಕಣ್ಣು

ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನಕ್ಕೆ ಭದ್ರ ಬುನಾದಿ ಸಂದೀಪ್ ಕಿಶನ್ ಹಾಕಿದ್ದಾರೆ. ಆದರೆ ಚಿತ್ರಕಥೆ ತುಂಬಾ ಸೇಫ್ ಗೇಮ್ ಆಡಿದೆ. ಸಿಗ್ಮಾ’ ಎನ್ನುವುದು ಜನಪ್ರಿಯ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಚೊಚ್ಚಲ ಚಲನಚಿತ್ರವಾಗಿದ್ದು, ವರದಿಗಳ ಪ್ರಕಾರ, ಈ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಜನರು ಸಾಧಾರಣ ಮೌಲ್ಯಮಾಪನ ನೀಡಿದ್ದಾರೆ. ಕಥೆ ಮತ್ತು […]