ಬೆಂಗಳೂರು: ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ʻಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ʼಗಾಗಿ ಜಪಾನ್ಗೆ ಪ್ರವಾಸ ತೆರಳಿದ್ದಾರೆ.
ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತರ ಅಹೋರಾತ್ರಿ ಧರಣಿ ವಿಚಾರವಾಗಿ ಮಾತನಾಡಿ, ರಾಜಕೀಯ ಒತ್ತಡಕ್ಕೆ ಮಣಿಯದೇ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.
ನನ್ನೆಲ್ಲ ಸಹೋದರಿಯರಿಗೆ ಮನವಿ ಮಾಡಿಕೊಳ್ತೀನಿ, ನಮ್ಮಲ್ಲಿ ವಿಶ್ವಾಸವಿಡಿ, ಕ್ಯಾಬಿನೆಟ್ ನಲ್ಲಿ ಮಾತಾಡ್ತೀವಿ.
ನನ್ನೆಲ್ಲ ಸಹೋದರಿಯರಿಗೆ ಮನವಿ ಮಾಡಿಕೊಳ್ತೀನಿ, ನಮ್ಮಲ್ಲಿ ವಿಶ್ವಾಸವಿಡಿ, ಕ್ಯಾಬಿನೆಟ್ ನಲ್ಲಿ ಮಾತಾಡ್ತೀವಿ. ರಾಜಕೀಯ ಒತ್ತಡಕ್ಕೆ ಮಣಿಯಬೇಡಿ. ಎಲ್ಲ ಸಮಸ್ಯೆ ನಮಗೂ ಗೊತ್ತಿದೆ. ಇದೊಂದೇ ಅಲ್ಲ 7-8 ಇಲಾಖೆ ಇದೆ. ಎಲ್ಲಾ ಇಲಾಖೆಗೂ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಶಿಕ್ಷಕರಿದ್ದಾರೆ, ಉಪನ್ಯಾಸಕರಿದ್ದಾರೆ, ಆರೋಗ್ಯ ಕಾರ್ಯಕರ್ತೆಯರು ಇದ್ದಾರೆ, ಅಂಗನವಾಡಿ, ಬಿಸಿಯೂಟ ಮಾಡುವವರಿದ್ದಾರೆ. ಹಾಗಾಗಿ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರಿಂದ ಏನ್ ಸಹಾಯ ಮಾಡಬೇಕೋ ಮಾಡ್ತೀವಿ, ಖಂಡಿತಾ ಸಹಾಯ ಮಾಡ್ತೀನಿ ಅಂತಾ ಹೇಳಿದ್ದೇನೆ. ಆದ್ರೆ ಇಷ್ಟೇ ಮಾಡ್ತೀನಿ ಅಂತಾ ಹೇಳಿಲ್ಲ. ನನ್ನ ಬಳಿ ಬಂದು ಮಾತಾಡಿದ್ದಾರೆ, ಅವರಿಗೋಸ್ಕರ ಒಂದೂವರೆಗಂಟೆ ಸಮಯ ಕೊಟ್ಟಿದ್ದೆ. ಮತ್ತೆ ರಾಜಕೀಯ ಒತ್ತಡಕ್ಕೆ ಮಣಿದು, ಒಂದು ಸಂಘಟನೆ ಒತ್ತಡಕ್ಕೆ ಮಣಿದು ಧರಣಿ ನಡೆಸ್ತಿದ್ದಾರೆ. ಇದರಿಂದ ನಮಗೂ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಸಿಎಂ ಸಲಹೆ ನೀಡಿದ್ದಾರೆ.
ನಾನು ಎಂ.ಬಿ ಪಾಟಿಲ್ ಮತ್ತು 8 ಜನರ ಅಧಿಕಾರಿಗಳು ʻಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ʼಗಾಗಿ ಜಪಾನ್ಗೆ ಹೋಗ್ತಿದ್ದೀವಿ.
ನಾನು ಎಂ.ಬಿ ಪಾಟಿಲ್ ಮತ್ತು 8 ಜನರ ಅಧಿಕಾರಿಗಳು ʻಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ʼಗಾಗಿ ಜಪಾನ್ಗೆ ಹೋಗ್ತಿದ್ದೀವಿ. ನಗರಾಭಿವೃದ್ಧಿ ಬಗ್ಗೆ ತಿಳಿದುಕೊಳ್ಳಬೇಕು, ಫ್ಲೈಓವರ್ಸ್ ಮಾಡಿದ್ದಾರೆ, ಹೊಸ ಹೊಸ ಟೆಕ್ನಾಲಜಿ ಅಳವಡಿಸಿದ್ದಾರೆ. ಅದನ್ನ ನಮ್ಮಲ್ಲಿ ಏನಾದ್ರು ಅಳವಡಿಸಿಕೊಳ್ಳಬಹುದಾ ನೋಡ್ತೀವಿ. ಟಯೋಟಾದವರನ್ನ ಎಕ್ಸ್ಪ್ಯಾಂಡ್ ಮಾಡಲು ಕೇಳ್ತೀವಿ. 3 ದಿನ ಪ್ರವಾಸಕ್ಕಾಗಿ ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.








ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)